ಹೃದಯ ಕಾಯಿಲೆಗಾಗಿ ಶರೀಫ್‌ಗೆ ‘ತೀವ್ರ ಚಿಕಿತ್ಸೆ’ ಅಗತ್ಯ: ವೈದ್ಯಕೀಯ ವರದಿ

Update: 2019-01-23 17:33 GMT

ಲಾಹೋರ್, ಜ. 23: ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಶರೀಫ್‌ಗೆ ಹೃದಯ ಸಂಬಂಧಿ ಕಾಯಿಲೆಗಳಿಗಾಗಿ ತೀವ್ರ ಚಿಕಿತ್ಸೆಯ ಅಗತ್ಯವಿದೆ ಎಂಬುದಾಗಿ ವೈದ್ಯಕೀಯ ವರದಿಗಳನ್ನು ಉಲ್ಲೇಖಿಸಿ ಬುಧವಾರ ಮಾಧ್ಯಮವೊಂದು ವರದಿ ಮಾಡಿದೆ.

ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಏಳು ವರ್ಷಗಳ ಜೈಲು ಶಿಕ್ಷೆಗೆ ಒಳಗಾಗಿರುವ 69 ವರ್ಷದ ಶರೀಫ್ ಲಾಹೋರ್ ಜೈಲಿನಲ್ಲಿದ್ದಾರೆ.

ಹೃದಯದ ಆರೋಗ್ಯದಲ್ಲಿ ಏರಿಳಿತವಾದ ಹಿನ್ನೆಲೆಯಲ್ಲಿ, ಅವರನ್ನು ಮಂಗಳವಾರ ಲಾಹೋರ್‌ನಲ್ಲಿರುವ ಪಂಜಾಬ್ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಳಿಕ ಅವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಜೈಲಿಗೆ ಕರೆದೊಯ್ಯಲಾಗಿದೆ.

‘‘ಶರೀಫ್‌ರ ವೈದ್ಯಕೀಯ ಪರೀಕ್ಷೆಗಳ ಪ್ರಕಾರ, ಅವರ ಪರಿಸ್ಥಿತಿ ಗಂಭೀರವಾಗಿಲ್ಲ. ಆದರೆ, ಹೃದಯ ಸಂಬಂಧಿ ಸಮಸ್ಯೆಗಳಿಂದ ಪಾರಾಗಲು ಅವರಿಗೆ ತೀವ್ರ ಚಿಕಿತ್ಸೆ ಮತ್ತು ನಿರಂತರ ವೈದ್ಯಕೀಯ ತಪಾಸಣೆ ಅಗತ್ಯವಾಗಿದೆ’’ ಎಂದು ಹಿರಿಯ ವೈದ್ಯರೊಬ್ಬರು ‘ಡಾನ್’ ಪತ್ರಿಕೆಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News