ಬಂದ್‌ನಿಂದಾಗಿ ಮಾಹಿತಿದಾರರಿಗೆ ಹಣ ಕೊಡಲು ಆಗುತ್ತಿಲ್ಲ: ಎಫ್‌ಬಿಐ

Update: 2019-01-23 17:36 GMT

 ವಾಶಿಂಗ್ಟನ್, ಜ. 23: ಅಮೆರಿಕ ಸರಕಾರ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ, ತಮ್ಮ ಮಾಹಿತಿದಾರರಿಗೆ ಹಣ ಕೊಡಲು ಸಾಧ್ಯವಾಗುತ್ತಿಲ್ಲ, ಗುಪ್ತವಾಗಿ ಔಷಧಿಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ ಹಾಗೂ ತಮ್ಮದೇ ಭದ್ರತಾ ವ್ಯವಸ್ಥೆಗಳನ್ನು ನವೀಕರಿಸಲು ಆಗುತ್ತಿಲ್ಲ ಎಂದು ಎಫ್‌ಬಿಐ ಏಜಂಟರು ಸೋಮವಾರ ಆರೋಪಿಸಿದ್ದಾರೆ.

ಹಣದ ಕೊರತೆಯಿಂದ ಸಾಕ್ಷಿಗಳನ್ನು ಸಂದರ್ಶಿಸಲು ಅವರಿರುವ ಸ್ಥಳಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ, ಭಾಷಾಂತರಕಾರರಿಗೆ ಹಣ ಕೊಡಲು ಆಗುತ್ತಿಲ್ಲ ಎಂಬುದಾಗಿ ಏಜಂಟರು ಹೇಳುತ್ತಿದ್ದಾರೆ ಎಂದು ಎಫ್‌ಬಿಐ ಏಜಂಟ್ಸ್ ಅಸೋಸಿಯೇಶನ್ (ಎಫ್‌ಬಿಐಎಎ) ಅಧ್ಯಕ್ಷ ಟಾಮ್ ಒ’ಕಾನರ್ ಹೇಳುತ್ತಾರೆ.

‘‘ಸರಕಾರ ಬಂದ್ ಮುಂದುವರಿಯುತ್ತಿರುವ ಒಂದೊಂದು ದಿನವೂ, ಬಂದ್‌ನಿಂದಾಗಿ ಉದ್ಭವಿಸಿರುವ ತೊಂದರೆಗಳು ಉಲ್ಬಣಗೊಳ್ಳುತ್ತಿವೆ ಹಾಗೂ ನಮ್ಮ ಭಯೋತ್ಪಾದನೆ ನಿಗ್ರಹ ಮತ್ತು ಜಗತ್ತಿನಾದ್ಯಂತದ ಗುಪ್ತಚರನಿಗ್ರಹ ಕಾರ್ಯಾಚರಣೆಗಳಿಗೆ ಅಡ್ಡಿಯಾಗುತ್ತಿದೆ’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News