ಚುನಾವಣಾ ವ್ಯವಸ್ಥೆ: ಇನ್ನಷ್ಟು ಸುಧಾರಣೆಯ ನಿರೀಕ್ಷೆಯಲ್ಲಿ ಭಾರತದ ಮತದಾರ

Update: 2019-01-24 18:22 GMT

ವಿದ್ಯುನ್ಮಾನ ಮತ ಯಂತ್ರ ನೋಟಾ ಚಲಾವಣೆಗೆ ಅವಕಾಶ, ಪ್ರಚಾರ-ಸಭೆಗಳ ವೀಡಿಯೊ ದಾಖಲೀಕರಣ, ವಿವಿಪ್ಯಾಟ್, ಮತದಾರರ ರಿಜಿಸ್ಟರ್‌ನಲ್ಲಿ ಭಾವಚಿತ್ರ ಪ್ರಕಟ, ಮತದಾನದ ಅವಧಿ ವಿಸ್ತರಣೆ, ಇವೆಲ್ಲವೂ ಸುಧಾರಣೆಯ ಹಾದಿಯಲ್ಲಿ ಕಂಡು ಬಂದ ಮಹತ್ವದ ಹೆಜ್ಜೆ ಗುರುತುಗಳು. ಆದರೆ ಆಯೋಗದ ನಿಯಮಗಳನ್ನು ಮೀರಿ ನಡೆಯುತ್ತಿರುವ ಕೆಲವು ಗುಪ್ತ ಚಟುವಟಿಕೆಗಳ ಬಗ್ಗೆ ಚುನಾವಣಾ ಆಯೋಗ ಗಮನ ನೀಡಬೇಕಾಗಿದೆ. ಹೀಗಾಗಿ ಆಯೋಗವು ಇನ್ನೂ ಪ್ರಬಲವಾದ ನಿಯಮ ತರುವ ಆವಶ್ಯಕತೆಯಿದ್ದು ತೆರೆಯ ಮರೆಯಲ್ಲಿ ಆಗುತ್ತಿರುವ ಸಂವಿಧಾನ ವಿರೋಧಿ ಚಟುವಟಿಕೆಯ ಕಡೆ ಹದ್ದಿನ ಕಣ್ಣು ಅಗತ್ಯ. ಇದು ಮತದಾರನ ಅಪೇಕ್ಷೆಯೂ ಹೌದು.

ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ ಚುನಾವಣೆಗಳನ್ನು ಯಶಸ್ವಿಯಾಗಿ ನಡೆಸುತ್ತಿರುವುದು ಜಗತ್ತಿನ ಇತರ ದೇಶಗಳಿಗೆ ಮಾದರಿ. ಇಷ್ಟೊಂದು ಸಂಖ್ಯೆಯ ಬೃಹತ್ ಮತದಾರರು ಜಗತ್ತಿನ ಬೇರಾವುದೇ ದೇಶದಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತಿಲ್ಲ. ಆದಾಗ್ಯೂ ಚುನಾವಣೆಗಳನ್ನು ಶಾಂತಿಯುತವಾಗಿಯೇ ನಡೆಸುತ್ತಿರುವ ನಮ್ಮ ಚುನಾವಣಾ ಆಯೋಗಕ್ಕೆ ನಾವು ಅಭಿನಂದನೆ ಹೇಳಲೇ ಬೇಕು. ಈ ಕಾರಣದಿಂದಲೇ ಸಾರ್ಕ್ ದೇಶಗಳು ಅಲ್ಲಿನ ಚುನಾವಣೆ ಪ್ರಕ್ರಿಯೆಗೆ ಭಾರತದ ಸಲಹೆಗಳನ್ನು ಪಡೆಯುತ್ತಿರುವುದು. ಭಾರತದ ಚುನಾವಣಾ ವೀಕ್ಷಕರು ಈಗಾಗಲೇ ಶ್ರೀಲಂಕಾ, ಅ್ಘಾನಿಸ್ತಾನ, ನೇಪಾಳ ಮೊದಲಾದ ದೇಶಗಳ ಸಾರ್ವತ್ರಿಕ ಚುನಾವಣೆಯಲ್ಲಿ ವೀಕ್ಷಕರಾಗಿ ಭಾಗವಹಿಸಿದ್ದು ಹೆಮ್ಮೆಯ ವಿಷಯ. ಇತ್ತೀಚೆಗೆ ನಡೆದ ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆಯಲ್ಲೂ ದೇಶದ ವೀಕ್ಷಕರು ಭಾಗವಹಿಸಿ ಚುನಾವಣಾ ಯಶಸ್ಸಿಗೆ ಸಹಕರಿಸಿರುತ್ತಾರೆ. ಇತರ ಪ್ರಜಾಪ್ರಭುತ್ವ ದೇಶಗಳು ಯಶಸ್ವಿ ಚುನಾವಣೆಗೆ ಭಾರತವನ್ನು ಒಂದು ಮಾದರಿಯಾಗಿ ಗುರುತಿಸುತ್ತಾರೆ. ಇದಕ್ಕೆ ಒಟ್ಟು ಭಾರತೀಯರ ಸಂಯಮ, ಸಹನೆ, ಅಹಿಂಸಾ ನೀತಿ ಶಾಂತಿಯ ಮೂಲತತ್ವಗಳು ಪ್ರೇರಕವಾಗಿದೆ. ಭಾರತದ ಚುನಾವಣೆಯಲ್ಲಿ ಉಲ್ಲೇಖಿಸಲೇ ಬೇಕಾದ ಇನ್ನೊಂದು ಅಂಶವೆಂದರೆ ಚುನಾವಣಾ ಲಿತಾಂಶವನ್ನು ಸೋತಂತಹ ಪಕ್ಷಗಳು ಸ್ವೀಕರಿಸುವುದಾಗಿದೆ. ಅನೇಕ ದೇಶಗಳಲ್ಲಿ ಚುನಾವಣಾ ಲಿತಾಂಶವನ್ನು ಸೋತಂತಹ ಪಕ್ಷಗಳು ಒಪ್ಪಿಕೊಳ್ಳುವುದಿಲ್ಲ. ಇದರಿಂದಾಗಿ ಅಲ್ಲಿ ಚುನಾವಣಾ ಬಳಿಕವೂ ಹಿಂಸಾಚಾರ ಇಲ್ಲವೇ ರಾಜಕೀಯ ಅಸ್ಥಿರತೆ ಉಂಟಾಗುತ್ತಿದೆ. ನಾವೇ ಗೆಲ್ಲಬೇಕು ಗೆಲುವು ನಮ್ಮದೇ ಎಂದು ಕೊನೆಯ ಕ್ಷಣದವರೆಗೂ ಹೋರಾಟ ನಡೆಸುವುದು ಸರಿ, ಆದರೆ ಲಿತಾಂಶ ನಮ್ಮ ವಿರುದ್ಧವಿದ್ದರೂ ಅದಕ್ಕೆ ತಲೆಬಾಗುವುದು ನೈಜ ಪ್ರಜಾಪ್ರಭುತ್ವದ ಲಕ್ಷಣ. ಈವರೆಗೆ ಭಾರತದಲ್ಲಿ ಚುನಾವಣಾ ಲಿತಾಂಶವನ್ನು ಆಯಾಯ ರಾಜಕೀಯ ಪಕ್ಷಗಳ ಉನ್ನತ ನಾಯಕರು ಧನಾತ್ಮಕವಾಗಿಯೇ ಸ್ವೀಕರಿಸಿದ್ದಾರೆ, ಸ್ವೀಕರಿಸಬೇಕು ಕೂಡಾ. ಮಾಲ್ಡೀವ್ಸ್‌ನಲ್ಲಿ ನಡೆದ ಚುನಾವಣೆಯನ್ನು ಅಲ್ಲಿನ ಸೋತಂತಹ ಅಧ್ಯಕ್ಷ ಒಪ್ಪಿಕೊಳ್ಳದೇ ಹೋದದ್ದು, ಇತ್ತೀಚೆಗೆ ನಡೆದ ಬಾಂಗ್ಲಾ ಚುನಾವಣೆಯಲ್ಲಿ ಅಲ್ಲಿನ ವಿರೋಧ ಪಕ್ಷ ಲಿತಾಂಶದ ಬಗ್ಗೆ ತಕರಾರು ಎತ್ತಿದ್ದು ಗಮನಿಸಬೇಕಾದುದು. ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಲ್ಲಿನ ಕಳೆದ ಅಧ್ಯಕ್ಷೀಯ ಚುನಾವಣೆಯ ಲಿತಾಶಕ್ಕೂ ಮುನ್ನ ನಾನು ಸೋಲು ಕಂಡರೆ ಆ ಲಿತಾಂಶವನ್ನು ಒಪ್ಪಲಾರೆ ಅದನ್ನು ತಿರಸ್ಕರಿಸಿ ನ್ಯಾಯಾಲಯದ ಮೊರೆ ಹೋಗುವೆ ಎಂಬ ಹೇಳಿಕೆ ನೀಡಿರುವುದು ಜಗತ್ತಿಗೆ ಆಶ್ಚರ್ಯ ಉಂಟುಮಾಡಿತ್ತು. ಬರಬರುತ್ತಾ ಅಮೆರಿಕದಂತಹ ಉದಾರವಾದಿ ದೇಶವೂ ಕೂಡಾ ಹೇಗೆ ಪ್ರಜಾಪ್ರಭುತ್ವದೊಳಗೆ ಇದ್ದುಕೊಂಡೇ ಪ್ರಜಾಪ್ರಭುತ್ವದ ವಿರುದ್ಧವಾಗಿ ವರ್ತಿಸುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ. ಈ ಪರಂಪರೆ ಮುಂದುವರಿಯುತ್ತಾ ಹೋದಲ್ಲಿ ಅಲ್ಲಿನ ಪ್ರಜಾಪ್ರಭುತ್ವ ವ್ಯವಸ್ಥೆ ಬಿರುಕು ಬಿಡುವುದರಲ್ಲಿ ಸಂಶಯವಿಲ್ಲ. ಭಾರತದಲ್ಲಿ ಚುನಾವಣೆ ಸುಧಾರಣೆ:

 ದೇಶದ ಮೊದಲ ಸಾರ್ವತ್ರಿಕ ಚುನಾವಣೆ 1951-52 ರಲ್ಲಿ ನಡೆಯಿತು. ಪ್ರಜಾಪ್ರತಿನಿ ಕಾಯ್ದೆಯ ಪ್ರಕಾರ ನಡೆದ ಆ ಮೊದಲ ಚುನಾವಣೆ ಶಾಂತಿಯುತವಾಗಿಯೇ ನಡೆಯಿತು. ಆದರೆ ಚುನಾವಣೆಗೆ ಸಂಬಂಸಿದಂತೆ ಬಿಗಿಯಾದ ನಿಯಮಗಳಿರಲಿಲ್ಲ. ಆ ಬಳಿಕ ನಡೆದ ಚುನಾವಣೆಗಳು ಕೂಡಾ ಯಶಸ್ವಿಯಾದರೂ ಒಂದಷ್ಟು ಗೊಂದಲಗಳು ಮುಂದುವರಿದಿದ್ದವು. ಸಂವಿಧಾನ ಬದ್ಧವಾದ ಚುನಾವಣಾ ಆಯೋಗ ಚುನಾವಣಾ ಸುಧಾರಣೆಗಳ ಕಡೆಗೆ ಆಲೋಚಿಸಿದ್ದು ಕಡಿಮೆ. ಇರುವ ನಿಯಮಗಳಡಿಯಲ್ಲಿ ಚುನಾವಣೆ ನಡೆಸಲು ಮಾತ್ರ ಆಯೋಗ ಸೀಮಿತವಾಗಿತ್ತು. ಇದು 1990ರವರೆಗೂ ಮುಂದುವರಿಯಿತು. 1990ರಲ್ಲಿ ಟಿ. ಎನ್.ಶೇಷನ್ ಚುನಾವಣಾ ಆಯೋಗದ ಚುಕ್ಕಾಣಿ ಹಿಡಿಯುವುದರೊಂದಿಗೆ ಚುನಾವಣಾ ಆಯೋಗವು ಒಂದು ಬಲಿಷ್ಟ ಸಂವಿಧಾನ ಬದ್ಧ ಸಂಸ್ಥೆ ಎಂಬುದು ದೇಶದ ಸಾಮಾನ್ಯ ಜನರ ಅರಿವಿಗೆ ಬಂತು. ತ್ರಿ ಸದಸ್ಯ ಆಯೋಗವಾದ ಚುನಾವಣೆ ಆಯೋಗದಲ್ಲಿ ಮೂವರೂ ಸಮಾನರಾಗಿರದೆ ಓರ್ವ ಮುಖ್ಯ ಚುನಾವಣಾ ಆಯುಕ್ತರು ಇದ್ದು ಅವರು ಪ್ರಮುಖ ತೀರ್ಮಾನ ತೆಗೆದುಕೊಳ್ಳುವಲ್ಲಿ ಪ್ರಧಾನ ಪಾತ್ರವಹಿಸುತ್ತಾರೆ. ಹಿರಿತನದ ಆಧಾರದಲ್ಲಿ ಒಬ್ಬರು ಮುಖ್ಯ ಚುನಾವಣಾ ಆಯುಕ್ತರು ಆಗುತ್ತಾರೆ ಎಂಬುದನ್ನು ಸಾಬೀತು ಪಡಿಸಲು ಟಿ.ಎನ್. ಶೇಷನ್ ನ್ಯಾಯಾಲಯದ ಮೆಟ್ಟಿಲನ್ನು ಹತ್ತಿದರು. ಅವರ ವಾದಕ್ಕೆ ನ್ಯಾಯಾಲಯದಲ್ಲಿ ಬಲ ಬಂದಾಗ ಅವರು ದೇಶದ ಚುನಾವಣಾ ವ್ಯವಸ್ಥೆಯ ಸುಧಾರಣೆಗೆ ಮುಂದಾದರು. ಗುರುತಿನ ಚೀಟಿಯ ಪ್ರಯೋಗ ಮತ್ತು ಜಾರಿ ಅವರ ಕೊಡುಗೆ. ಮತದಾರರ ಗುರುತಿನ ಚೀಟಿಯನ್ನು ಜಾರಿ ಮಾಡಿದಾಗ ಇದು ಸಾಧ್ಯವೇ ಎಂದು ಪ್ರಶ್ನೆ ಮಾಡಿದ್ದು ಸಹಜ. ಇದನ್ನು ಅವರು ಸಾಧ್ಯವಾಗಿಸಿದರು. ಚುನಾವಣಾ ಪ್ರಚಾರಗಳಿಗೆ ಸಮಯ, ನಿಯಮಗಳನ್ನು ಗೊತ್ತು ಪಡಿಸಿದರು. ಖರ್ಚುವೆಚ್ಚಗಳಿಗೆ ಕಡಿವಾಣ ಹಾಕುವ ದೃಷ್ಟಿಯಿಂದ ಅಭ್ಯರ್ಥಿಗಳು ಖರ್ಚು ವೆಚ್ಚಗಳ ಮಾಹಿತಿ ಸಲ್ಲಿಸುವುದನ್ನು ಕಡ್ಡಾಯಗೊಳಿಸಿದರು. ವಿರೋಧದ ನಡುವೆಯೂ ಆರಂಭಿಕ ಸುಧಾರಣೆಗೆ ಮುನ್ನುಡಿ ಬರೆದ ಕೀರ್ತಿ ಟಿ.ಎನ್. ಶೇಷನ್ ಗೆ ಸಲ್ಲಬೇಕು. ಈ ರೀತಿ ಚುನಾವಣಾ ಆಯೋಗದ ಒಳಗೆ ಹಾಗೂ ಚುನಾವಣೆ ವ್ಯವಸ್ಥೆಯಲ್ಲಿಯೂ ಎರಡೂ ಕಡೆ ಸುಧಾರಣೆಯ ಪ್ರಕ್ರಿಯೆ ಆರಂಭವಾಯಿತು. ನಂತರದ ದಿನಗಳಲ್ಲಿ ಜಾರಿಯಾದದ್ದೆ ಅಭ್ಯರ್ಥಿಗಳ ಘೋಷಣೆಗಳು.

ಚುನಾವಣೆಗೆ ಸ್ಪರ್ಸುವ ಅಭ್ಯರ್ಥಿಗಳು ಇಂದು ತಮ್ಮ ನಾಮ ಪತ್ರದೊಂದಿಗೆ ಮೂರು ಪ್ರಮುಖ ಘೋಷಣೆಗಳನ್ನು ಸಲ್ಲಿಸಬೇಕಾಗುತ್ತದೆ. ತಮ್ಮ ಆಸ್ತಿಯ ವಿವರ, ಅಪರಾಧಗಳ ಹಿನ್ನೆಲೆಯ ವಿವರ, ಶೈಕ್ಷಣಿಕ ವಿವರಗಳನ್ನು ಸಲ್ಲಿಸುವುದು ಕಡ್ಡಾಯ. ಈ ಘೋಷಣೆಗಳನ್ನು ಸಲ್ಲಿಸಲು ಆರಂಭಿಸಿದ ದಿನಗಳಲ್ಲಿ ಭಾರೀ ಬದಲಾವಣೆಗಳು ಆಗಿರಲಿಲ್ಲ. ಆದರೆ ಈ ಘೋಷಣೆಗಳಲ್ಲಿನ ಮಾಹಿತಿಯನ್ನು ಸಾರ್ವಜನಿಕರು ನೋಡಲು ಸಾಧ್ಯವಾದದ್ದು ಒಂದು ಮಹತ್ವಪೂರ್ಣವಾದ ಸುಧಾರಣೆಯಾಗಿದೆ. ತಮ್ಮ ಪ್ರತಿನಿಗಳು ಯಾವ ಶಿಕ್ಷಣ ಪಡೆದಿದ್ದಾರೆ, ಯಾವ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ, ಎಷ್ಟು ಆಸ್ತಿಗಳನ್ನು ಹೊಂದಿದ್ದಾರೆ ಎಂಬ ಮಾಹಿತಿ ಪಾರದರ್ಶಕವಾಗಿ ಇಂದು ಮತದಾರರ ಮುಂದಿದೆ. ಇದನ್ನ್ನು ಚುನಾವಣೆಯಿಂದ ಚುನಾವಣೆಗೆ ತಾಳೆ ನೋಡಲು ಕೂಡ ಸಾಧ್ಯ. ಇಂದು ಒಬ್ಬ ಅಭ್ಯರ್ಥಿ ತನ್ನ ಆಸ್ತಿ, ಶಿಕ್ಷಣ, ಸಾರ್ವಜನಿಕ ಬದುಕಿನ ಬಗ್ಗೆ ಮುಚ್ಚುಮರೆ ಮಾಡಿ ತಪ್ಪುಮಾಹಿತಿ ನೀಡಿದರೆ ಆತನಿಗೆ ಮುಳುವಾಗುವುದು ಖಚಿತ. ಇತ್ತೀಚೆಗೆ ಕೇರಳ ಹೈಕೋರ್ಟ್ ಅಲ್ಲಿನ ಶಾಸಕರೊಬ್ಬರ ಸದಸ್ಯತ್ವವನ್ನು ಇದೇ ಕಾರಣಕ್ಕಾಗಿ ಅನರ್ಹಗೊಳಿಸಿದ್ದು ಒಂದು ಐತಿಹಾಸಿಕ ತೀರ್ಪೇ ಸರಿ. ಈ ತೀರ್ಪು ಈವರೆಗೆ ಸಲ್ಲಿಸಿದ ಒಟ್ಟು ಘೋಷಣೆಗಳ ಔಚಿತ್ಯಕ್ಕೆ ಒಂದು ಬಲವಾದ ಉತ್ತರದಂತಿದೆ. ನಂತರದ ಪ್ರತೀ ಚುನಾವಣೆಯಲ್ಲಿಯೂ ಸುಧಾರಣೆಯ ಹೆಜ್ಜೆ ಮುಂದುವರಿದಿದೆ. ವಿದ್ಯುನ್ಮಾನ ಮತ ಯಂತ್ರ ನೋಟಾ ಚಲಾವಣೆಗೆ ಅವಕಾಶ, ಪ್ರಚಾರ-ಸಭೆಗಳ ವೀಡಿಯೋ ದಾಖಲೀಕರಣ, ವಿವಿಪ್ಯಾಟ್, ಮತದಾರರ ರಿಜಿಸ್ಟರ್‌ನಲ್ಲಿ ಭಾವಚಿತ್ರ ಪ್ರಕಟ, ಮತದಾನದ ಅವ ವಿಸ್ತರಣೆ, ಇವೆಲ್ಲವೂ ಸುಧಾರಣೆಯ ಹಾದಿಯಲ್ಲಿ ಕಂಡು ಬಂದ ಮಹತ್ವದ ಹೆಜ್ಜೆ ಗುರುತುಗಳು. ಆದರೆ ಆಯೋಗದ ನಿಯಮಗಳನ್ನು ಮೀರಿ ನಡೆಯುತ್ತಿರುವ ಕೆಲವು ಗುಪ್ತ ಚಟುವಟಿಕೆಗಳ ಬಗ್ಗೆ ಚುನಾವಣಾ ಆಯೋಗ ಗಮನ ನೀಡಬೇಕಾಗಿದೆ. ಹೀಗಾಗಿ ಆಯೋಗವು ಇನ್ನೂ ಪ್ರಬಲವಾದ ನಿಯಮ ತರುವ ಆವಶ್ಯಕತೆಯಿದ್ದು ತೆರೆಯ ಮರೆಯಲ್ಲಿ ಆಗುತ್ತಿರುವ ಸಂವಿಧಾನ ವಿರೋ ಚಟುವಟಿಕೆಯ ಕಡೆ ಹದ್ದಿನ ಕಣ್ಣು ಅಗತ್ಯ. ಇದು ಮತದಾರನ ಅಪೇಕ್ಷೆಯೂ ಹೌದು.

ಸುಧಾರಣೆಯ ಹೊಸ ಪರ್ವದ ನಿರೀಕ್ಷೆಯಲ್ಲಿ:

ಪಕ್ಷಾಂತರದ ಹಿನ್ನೆಲೆಯಲ್ಲಿ:  

ಶಾಸನ ಸಭೆಯ ಸದಸ್ಯ ತನ್ನ ಮಾತೃ ಪಕ್ಷ ತ್ಯಜಿಸಿ ಬೇರೊಂದು ಪಕ್ಷ ಸೇರುವುದನ್ನು ತಡೆಯಲು ನಮ್ಮಲ್ಲಿ 1985ರ ಪಕ್ಷಾಂತರ ನಿಷೇಧ ಕಾಯ್ದೆ ಇದೆ. ಇದರಿಂದ ಹಾಲಿ ಸದಸ್ಯರ ಪಕ್ಷಾಂತರ ಪಿಡುಗಿಗೆ ಕಡಿವಾಣ ಬಿದ್ದಿದೆ. ಆದಾಗ್ಯೂ ಶಾಸನ ಸಭೆಗೆ ಆಯ್ಕೆಯಾದ ಪ್ರತಿನಿ ಅವ ಮುಗಿಯುವ ಮೊದಲೇ ರಾಜೀನಾಮೆ ನೀಡಿ ಮತ್ತೆ ಚುನಾವಣೆಗೆ ನಿಲ್ಲುವ ಪರಿಪಾಠ ಹೊಸ ಸವಾಲು. ಒಂದು ಪಕ್ಷದಿಂದ ಆಯ್ಕೆಯಾದ ಸದಸ್ಯ ಮಾತೃ ಪಕ್ಷದೊಂದಿಗೆ ಮುನಿಸಿಕೊಂಡು ಅವ ಮುಗಿಯುವ ಮೊದಲೇ ರಾಜೀನಾಮೆ ನೀಡುತ್ತಿರುವುದು ಗಂಭೀರ ಲೋಪವಾಗಿದೆ. ತನ್ನ ಪಕ್ಷದಲ್ಲಿ ಟಿಕೆಟ್ ಪಡೆಯಲು ಹರಸಾಹಸ ಮಾಡಿ ಸ್ಪರ್ಸಿ ಗೆದ್ದ ಮೇಲೂ ಮತದಾರರ ಸಮಸ್ಯೆಗಳನ್ನು ಕ್ಷೇತ್ರದ ಬೇಡಿಕೆಗಳಿಗೆ ಧ್ವನಿಯಾಗುವ ಬದಲು ಅದಲು-ಬದಲು ರಾಜಕೀಯ ಮಾಡುವ ಪರಿಪಾಠಕ್ಕೆ ಕೊನೆ ಹಾಡಬೇಕಾದುದು ಅವಶ್ಯ. ಒಂದು ವೇಳೆ ಪ್ರತಿನಿ ಅವಗೆ ಮೊದಲೇ ರಾಜೀನಾಮೆ ನೀಡಿದ ಪಕ್ಷದಲ್ಲಿ ಆತನಿಗೆ ಅದೇ ಅವಯ ರಾಜ್ಯ ಇಲ್ಲವೇ ಕೇಂದ್ರ ಶಾಸನ ಸಭೆಗಾಗಲೀ ಸ್ಪರ್ಸಲು ಅವಕಾಶ ನಿರಾಕರಿಸುವ ಶಾಸನ ರಚನೆಯಾಗಬೇಕಾಗಿದೆ. ಇದಕ್ಕಾಗಿ ಚುನಾವಣಾ ಆಯೋಗವು ಶಿಾರಸು ನೀಡಬೇಕಾಗಿದೆ. ಒಂದು ಕ್ಷೇತ್ರವು ಪ್ರತಿನಿಯನ್ನು ಕಳೆದುಕೊಳ್ಳಬೇಕಾದರೆ ಆತನ ಮರಣದ ಕಾರಣ ಇಲ್ಲವೇ ಅನಾರೋಗ್ಯದ ಕಾರಣವಿರಬೇಕು. ಅನಾರೋಗ್ಯದ ಕಾರಣದಿಂದ ರಾಜೀನಾಮೆ ನೀಡಿದಾತನಿಗೆ ಅದೇ ಅವಯಲ್ಲಿ ಮತ್ತೆ ಸ್ಪರ್ಸುವುದು ಅಸಾಧ್ಯವೇ ಸರಿ. ದೇಶದ ವಿವಿಧ ರಾಜ್ಯಗಳ ಶಾಸನ ಸಭೆಗಳ ಸದಸ್ಯರು ಇಂದು ತಮ್ಮ ವೈಯಕ್ತಿಕ ಲಾಭದ ಆಸೆಯಿಂದ ಮತದಾರರ ನಂಬಿಕೆಗೆ ಮೋಸಮಾಡಿ ರಾಜೀನಾಮೆ ನೀಡಿ ಪುನಃ ಮತ್ತೊಂದು ಪಕ್ಷದ ಆಶ್ರಯದಲ್ಲಿ ಸ್ಪರ್ಸುತ್ತಿರುವುದು ವ್ಯಾಪಕವಾಗಿದೆ. ಈ ಪಿಡುಗು ರಾಜಕೀಯ ವ್ಯಭಿಚಾರಕ್ಕೆ ಕಾರಣವಾಗುವು ದಲ್ಲದೆ ಸರಕಾರದ ಬೊಕ್ಕಸಕ್ಕೂ ಅಪಾರ ನಷ್ಟ ಉಂಟು ಮಾಡುತ್ತಿದೆ. ಮತದಾರರಿಗೆ ಆಮಿಷ ಒಡ್ಡುವುದು, ಕಡಿಮೆ ಮತದಾನವಾಗಲು ಅಂತಿಮವಾಗಿ ಪ್ರಜಾಪ್ರಭುತ್ವದ ಮೇಲೆಯೇ ಮತದಾರ ತನ್ನ ನಂಬಿಕೆ ಕಳೆದುಕೊಳ್ಳಲು ಕೂಡಾ ಕಾರಣವಾಗುತ್ತದೆ.

ಏಕಕಾಲದಲ್ಲಿ ಬಹು ಕ್ಷೇತ್ರಗಳಲ್ಲಿ ಸ್ಪರ್ಧೆ:

ಪ್ರಸ್ತುತ ಓರ್ವ ಅಭ್ಯರ್ಥಿ ಒಂದಕ್ಕಿಂತ ಹೆಚ್ಚಿನ ಕ್ಷೇತ್ರಗಳಲ್ಲಿ ಸ್ಪರ್ಸಲು ಪ್ರಜಾಪ್ರತಿನಿ ಕಾಯ್ದೆ ಅವಕಾಶ ಮಾಡಿಕೊಟ್ಟಿದೆ. ಆದರೆ ಓರ್ವ ಅಭ್ಯರ್ಥಿ ಎರಡೂ ಕ್ಷೇತ್ರಗಳಲ್ಲಿ ಗೆದ್ದಲ್ಲಿ ಆ ಎರಡೂ ಕ್ಷೇತ್ರಗಳಿಗೂ ಪ್ರತಿನಿಯಾಗಿರಲು ಅವಕಾಶವಿರುವುದಿಲ್ಲ. ಬದಲಾಗಿ ಒಂದು ಕ್ಷೇತ್ರವನ್ನು ಉಳಿಸಿಕೊಂಡು ಮತ್ತೊಂದು ಕ್ಷೇತ್ರಕ್ಕೆ ರಾಜೀನಾಮೆ ಕೊಡಲೇ ಬೇಕು. ಶಾಸನ ಸಭೆಯ ಸದಸ್ಯನಾಗಿ ಪ್ರಮಾಣ ವಚನ ಸ್ವೀಕರಿಸುವ ಮೊದಲೇ ಆತ ಯಾವ ಕ್ಷೇತ್ರ ಉಳಿಸಿಕೊಳ್ಳುತ್ತಾನೆ, ಯಾವುದನ್ನು ಕೈ ಬಿಡುತ್ತಾನೆ ಎನ್ನುವುದು ನಿರ್ಧಾರವಾಗುತ್ತದೆ. ಏಕೆಂದರೆ ಏಕಕಾಲದಲ್ಲಿ ಎರಡೂ ಕ್ಷೇತ್ರದ ಪ್ರತಿನಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಅವಕಾಶವಿರುವುದಿಲ್ಲ. ಚುನಾವಣೆ ಮುಗಿದು ಅತೀ ಶೀಘ್ರದಲ್ಲಿಯೇ ಒಂದು ಕ್ಷೇತ್ರ ಖಾಲಿ ಉಳಿಯುತ್ತದೆ. ಅಲ್ಲಿನ ಜನರಿಗೆ ಚುನಾವಣೆ ನಡೆದ ಹೊರತಾಗಿಯೂ ಮತ್ತೆ ಕೆಲವು ತಿಂಗಳು ಪ್ರತಿನಿ ಇರುವುದಿಲ್ಲ ಎಂದರೆ ಪ್ರಜಾಪ್ರಭುತ್ವದ ನೈಜ ಆಶಯಕ್ಕೆ ಕೊಡಲಿ ಏಟು ಕೊಟ್ಟಂತೆಯೇ ಸರಿ.

ಆ ಕ್ಷೇತ್ರದ ಸಮಸ್ಯೆಗಳಿಗೆ ಮೊದಲ ಅವೇಶನದಲ್ಲಿಯೇ ಧ್ವನಿ ಎತ್ತಲು ಯಾರೂ ಇರುವುದಿಲ್ಲ. 6-7 ತಿಂಗಳು ಆ ಕ್ಷೇತ್ರದ ಅಭಿವೃದ್ಧಿಗೆ ಹಿನ್ನಡೆಯಲ್ಲವೇ? ಬೃಹತ್ ಜನಸಂಖ್ಯೆಯ ನಮ್ಮ ದೇಶದಲ್ಲಿ ಪ್ರತಿನಿಯಾಗಲು ಜನರಿಲ್ಲವೇ? ನಾಯಕತ್ವ ಮೂಡಿಸಬೇಕಾದುದು ಪಕ್ಷಗಳ ಕಾರ್ಯ. ಪಕ್ಷಗಳಿಂದ ಸ್ಪರ್ಗಳ ಕೊರತೆಯಿದ್ದರೆ ಪಕ್ಷೇತರರಾದರೂ ಸ್ಪರ್ಸುವರು. ಒಬ್ಬ ಅಭ್ಯರ್ಥಿ ಒಂದು ಚುನಾವಣೆಯಲ್ಲಿ ಒಂದು ಕ್ಷೇತ್ರದಲ್ಲಿ ಮಾತ್ರ ಸ್ಪರ್ಸುವಂತೆ ಮಾಡಬೇಕಾಗಿದೆ. ಇದು ಮತದಾರನ ಒಲವು ಕೂಡಾ ಆಗಿದೆ. ಬಹುಮುಖ ಸ್ಪರ್ಧೆಗೆ ಬೇಕಿದೆ ಕಡಿವಾಣ:

ಈಗಿನ ಮುಕ್ತ ಅವಕಾಶದಲ್ಲಿ ಓರ್ವ ಶಾಸಕ ಹಾಲಿ ಸದಸ್ಯನಾಗಿದ್ದುಕೊಂಡೇ ಲೋಕಸಭಾ ಚುನಾವಣೆಗೂ ಸ್ಪರ್ಸಬಹುದು. ಅದೇ ರೀತಿ ಸಂಸದನೂ ರಾಜ್ಯ ಶಾಸನ ಸಭೆಗೆ ಸ್ಪರ್ಸಲು ಯಾವುದೇ ಅಡೆತಡೆ ಇರುವುದಿಲ್ಲ. ಒಂದು ವೇಳೆ ಆತ ಗೆದ್ದಲ್ಲಿ ಯಾವುದಾದರೂ ಒಂದು ಶಾಸನ ಸಭೆಯ ಸದಸ್ಯತ್ವವನ್ನೂ ಮಾತ್ರ ಉಳಿಸಿಕೊಳ್ಳಬಹುದು. ಅಂದರೆ ಓರ್ವ ಹಾಲಿ ಪ್ರತಿನಿ ಮತ್ತೊಂದು ಚುನಾವಣೆಯಲ್ಲಿ (ಲೋಕ ಸಭೆ-ರಾಜ್ಯ ಸಭೆ) ಸ್ಪರ್ಸಿ ವಿಜಯಿಯಾದ ಎಂದರೆ ಅಲ್ಲಿ ಒಂದು ಉಪಚುನಾವಣೆ ಖಚಿತ ಎಂದಾಯಿತು. 125 ಕೋಟಿ ಜನಸಂಖ್ಯೆಯಿರುವ ವಿಶಾಲ ಭಾರತದಲ್ಲಿ ಲೋಕಸಭಾ ಚುನಾವಣೆಗೆ 543 ಅಭ್ಯರ್ಥಿಗಳು ಸಾಕು ಅಥವಾ ರಾಜ್ಯಗಳ ವಿಧಾನ ಸಭಾ ಚುನಾವಣೆಗೆ 40ರಿಂದ 403 ಅಭ್ಯರ್ಥಿಗಳು ಬೇಕಾಗುತ್ತವೆ. ನಾಯಕತ್ವ, ಶಾಸಕತ್ವ, ಸಂಸತ್ ಸದಸ್ಯನಾಗಲು ಹಾತೊರೆಯುತ್ತಿರುವ ಸಂದರ್ಭದಲ್ಲಿ ಸ್ಪರ್ಸಲು ಪೈಪೋಟಿ ನಡೆಯುತ್ತಿರುವ ಈ ದಿನಗಳಲ್ಲಿ ಮತ್ತೆ ಹಾಲಿ ಶಾಸಕನನ್ನು ಲೋಕಸಭೆಗೂ ಇಲ್ಲವೇ ಹಾಲಿ ಸಂಸದದನ್ನು ರಾಜ್ಯ ವಿಧಾನ ಸಭೆಗೂ ಸ್ಪರ್ಸುವಂತೆ ಮಾಡುವುದರ ಔಚಿತ್ಯವೇನು? ಗೆದ್ದ ಮೇಲೆ ಒಂದು ಕ್ಷೇತ್ರಕ್ಕೆ ಚುನಾವಣೆ ಆಗಲೇ ಬೇಕಾದ ಅನಿವಾರ್ಯತೆ ಇರುವಾಗ ಚುನಾವಣೆಯ ಮೇಲೆ ಮತ್ತೆ ಮತ್ತೆ ಚುನಾವಣೆ ಹೇರಿ ಹಣ ವ್ಯರ್ಥ, ಆಡಳಿತ ಅವ್ಯವಸ್ಥೆ ಮಾಡುವ ಈ ನಿಯಮ ಬದಲಾಗಬೇಕಾಗಿದೆ. ಹೊಸ ಮುಖಗಳು ನಾಯಕರಾಗಿ ಮೂಡಿಬರಬೇಕಾದರೆ, ಚುನಾವಣಾ ವ್ಯವಸ್ಥೆಯಲ್ಲಿನ ಗಂಭೀರ ಲೋಪ ಸರಿಪಡಿಸಬೇಕಾದರೆ ಈಗಿರುವ ಈ ಅವಕಾಶಕ್ಕೆ ಕಡಿವಾಣ ಹಾಕಬೇಕಾದುದು ಅತೀ ಅಗತ್ಯ. ಈ ಮೂಲಕ ದೇಶದ ಸಮಯ, ಹಣ ಉಳಿತಾಯ ಮಾಡಿ ಅಭಿವೃದ್ಧಿಗೆ ವೇಗವರ್ಧಕ ನೀಡಬಹುದು. ಭ್ರಷ್ಟಾಚಾರಕ್ಕೂ ಕಡಿವಾಣ ಹಾಕಬಹುದು.

ಜಾರಿಯಲ್ಲಿರುವ ಕಾನೂನಿನಡಿ ನುಸುಳಿ ವಿಭಿನ್ನ ಹಾದಿಯಲ್ಲಿ ಕಲುಷಿತ ರಾಜಕೀಯ ಮಾಡುವ ಪ್ರಯತ್ನಗಳಿಗೆ ಈ ಮೂಲಕ ಕಡಿವಾಣ ಹಾಕಬೇಕಾದುದು ಇಂದಿನ ತುರ್ತು ಅಗತ್ಯ. ಇದು ಮತದಾರರ ಅಪೇಕ್ಷೆಯೂ ಆಗಿದೆ.

Writer - ಅಬ್ದುಲ್ ರಝಾಕ್, ಅನಂತಾಡಿ

contributor

Editor - ಅಬ್ದುಲ್ ರಝಾಕ್, ಅನಂತಾಡಿ

contributor

Similar News