ಎರಡನೇ ಏಕದಿನ: ನ್ಯೂಝಿಲೆಂಡ್ ವಿರುದ್ಧ ಭಾರತ 324/4

Update: 2019-01-26 07:08 GMT

 ಬೇ ಓವಲ್,  ಜ.26: ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಭರ್ಜರಿ ಆರಂಭ, ಇನಿಂಗ್ಸ್ ಕೊನೆಯಲ್ಲಿ ಎಂಎಸ್ ಧೋನಿ ಹಾಗೂ ಕೇದಾರ್ ಜಾಧವ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ನ್ಯೂಝಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ 50 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 324 ರನ್ ಗಳಿಸಿದೆ.

ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ರೋಹಿತ್(87,96 ಎಸೆತ, 9 ಬೌಂಡರಿ, 3 ಸಿಕ್ಸರ್) ಹಾಗೂ ಶಿಖರ್ ಧವನ್ (66, 67 ಎಸೆತ, 9 ಬೌಂಡರಿ)ಮೊದಲ ವಿಕೆಟ್‌ಗೆ 154 ರನ್ ಸೇರಿಸಿ ಭದ್ರ ಬುನಾದಿ ಹಾಕಿಕೊಟ್ಟಿದ್ದರು. ಆದರೆ, ಈ ಇಬ್ಬರು ಔಟಾದ ಬಳಿಕ ಭಾರತದ ರನ್ ವೇಗ ಕಡಿಮೆಯಾಯಿತು. ನಾಯಕ ಕೊಹ್ಲಿ(43) ಹಾಗೂ ಅಂಬಟಿ ರಾಯುಡು(47) ಅರ್ಧಶತಕ ವಂಚಿತರಾದರು. ಈ ಇಬ್ಬರು 3ನೇ ವಿಕೆಟ್‌ಗೆ 64 ರನ್ ಜೊತೆಯಾಟ ನಡೆಸಿದರು.

ಭಾರತ ಕೊನೆಯ 7 ಓವರ್‌ಗಳಲ್ಲಿ 70 ರನ್ ಕಲೆ ಹಾಕಿತು. ಎಂಎಸ್ ಧೋನಿ(ಔಟಾಗದೆ 48, 33 ಎಸೆತ, 5 ಬೌಂಡರಿ, 1 ಸಿಕ್ಸರ್) ಹಾಗೂ ಕೇದಾರ್ ಜಾಧವ್(ಔಟಾಗದೆ 22, 19 ಎಸೆತ, 3 ಬೌಂಡರಿ, 1 ಸಿಕ್ಸರ್)ಫರ್ಗ್ಯುಸನ್ ಎಸೆದ ಇನಿಂಗ್ಸ್‌ನ ಕೊನೆಯ ಓವರ್‌ವೊಂದರಲ್ಲೆ 21 ರನ್ ಕಲೆ ಹಾಕಿ ಭಾರತದ ಮೊತ್ತವನ್ನು 324 ರನ್‌ಗೆ ತಲುಪಿಸಿದರು. ಈ ಜೋಡಿ 5ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 53 ರನ್ ಸೇರಿಸಿತು.

ಕಿವೀಸ್ ಪರ ಟ್ರೆಂಟ್ ಬೌಲ್ಟ್(2-61) ಹಾಗೂ ಫರ್ಗ್ಯುಸನ್(2-81)ತಲಾ ಎರಡು ವಿಕೆಟ್ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News