‘ಟಾಪ್’ ಯೋಜನೆ 23 ಅಥ್ಲೀಟ್‌ಗೆ ಅನುಮೋದನೆ

Update: 2019-01-31 18:58 GMT

ಹೊಸದಿಲ್ಲಿ, ಜ.31: ಬ್ಯಾಡ್ಮಿಂಟನ್, ಸೈಕ್ಲಿಂಗ್, ಪ್ಯಾರಾ ಅಥ್ಲೆಟಿಕ್ಸ್, ಪ್ಯಾರಾ ಶೂಟಿಂಗ್‌ನ ಕ್ರೀಡಾಳುಗಳು ಸೇರಿದಂತೆ 23 ಅಥ್ಲೀಟ್‌ಗಳ ಹೆಸರುಗಳನ್ನು ಭಾರತೀಯ ಕ್ರೀಡಾ ಪ್ರಾಧಿಕಾರ ‘ಟಾಪ್’ಯೋಜನೆಗೆ(ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಮ್ ) ಅನುಮೋದಿಸಿದೆ. ಮುಂಬರುವ 2020ರ ಟೋಕಿಯೊ ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್ ಹಾಗೂ 2024ರ ಒಲಿಂಪಿಕ್ಸ್‌ಗೆ ಈ ಹೆಸರುಗಳನ್ನು ಅನುಮೋದಿಸಲಾಯಿತು. ಬ್ಯಾಡ್ಮಿಂಟನ್, ಪ್ಯಾರಾ ಅಥ್ಲೆಟಿಕ್ಸ್, ಪ್ಯಾರಾ ಶೂಟಿಂಗ್, ಪ್ಯಾರಾ ಸ್ವಿಮ್ಮಿಂಗ್ ಹಾಗೂ ಪ್ಯಾರಾ ಪವರ್ ಲಿಫ್ಟಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸುವ ನಿರೀಕ್ಷಣಾ ಪಟ್ಟಿಯಲ್ಲಿರುವ ಆಟಗಾರರ ಹೆಸರನ್ನೂ ಪ್ರಕಟಿಸಲಾಗಿದೆ. ಅಲ್ಲದೆ ಕೆಲವು ಅಥ್ಲೀಟ್‌ಗಳನ್ನು 2024ರ ಒಲಿಂಪಿಕ್ಸ್‌ಗೆ ‘‘ತಯಾರಿಯಾಗುತ್ತಿರುವ ಗುಂಪು’’ಗೆ ಸೇರಿಸಲಾಗಿದೆ.

ನಿರೀಕ್ಷಣಾ ಪಟ್ಟಿಯಲ್ಲಿರುವ ಅಥ್ಲೀಟ್‌ಗಳನ್ನು ಬರುವ ತಿಂಗಳುಗಳಲ್ಲಿ ಅವರು ತೋರುವ ಪ್ರದರ್ಶನವನ್ನು ಆಧರಿಸಿ ಟಾಪ್ ಯೋಜನೆಗೆ ಆಯ್ಕೆ ಮಾಡಲಾಗುತ್ತದೆ.

ಟಾಪ್ ಯೋಜನೆಯು ಕೇಂದ್ರ ಯುವಜನ ಸೇವೆ ಹಾಗೂ ಕ್ರೀಡಾ ಸಚಿವಾಲಯದ ಒಂದು ಪ್ರಮುಖ ಯೋಜನೆಯಾಗಿದ್ದು.ಭಾರತದ ಅಗ್ರ ಅಥ್ಲೀಟ್‌ಗಳಿಗೆ ಸಹಾಯಹಸ್ತ ನೀಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News