ಪರಮಾಣು ಒಪ್ಪಂದ ಸ್ಥಗಿತ: ಪುಟಿನ್

Update: 2019-02-02 14:45 GMT

ಮಾಸ್ಕೋ, ಫೆ. 2: ಶೀತಲ ಸಮರ ಕಾಲದ ‘ಮಧ್ಯಮ ವ್ಯಾಪ್ತಿಯ ಪರಮಾಣು ಶಸ್ತ್ರಗಳ ಒಪ್ಪಂದ’ವನ್ನು ರಶ್ಯ ಅಮಾನತಿನಲ್ಲಿರಿಸಿದೆ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಶನಿವಾರ ಘೋಷಿಸಿದ್ದಾರೆ.

ಇಂಥದೇ ಕ್ರಮವನ್ನು ಅಮೆರಿಕ ತೆಗೆದುಕೊಂಡ ಬಳಿಕ ರಶ್ಯ ಈ ಕ್ರಮವನ್ನು ತೆಗೆದುಕೊಂಡಿದೆ.

‘‘ಒಪ್ಪಂದದಲ್ಲಿನ ತಮ್ಮ ಪಾಲುದಾರಿಕೆಯನ್ನು ಅಮಾನತುಗೊಳಿಸುವುದಾಗಿ ಅಮೆರಿಕದ ಭಾಗೀದಾರರು ಘೋಷಿಸಿದ್ದಾರೆ. ನಾವು ಕೂಡ ಹಾಗೆಯೇ ಮಾಡಿದ್ದೇವೆ’’ ಎಂದು ವಿದೇಶ ಮತ್ತು ರಕ್ಷಣಾ ಸಚಿವರೊಂದಿಗಿನ ಸಭೆಯಲ್ಲಿ ಪುಟಿನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News