ಕ್ರೈಸ್ತ ಸನ್ಯಾಸಿನಿಯರ ವರ್ಗಾವಣೆ ಇಲ್ಲ: ಚರ್ಚ್ ಭರವಸೆ

Update: 2019-02-09 17:09 GMT

ಕೋಟ್ಟಯಂ, ಫೆ. 9: ಕೊನೆಗೂ ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತ ಕ್ರೈಸ್ತ ಸನ್ಯಾಸಿನಿಯ ಸಹ ಕ್ರೈಸ್ತ ಸನ್ಯಾಸಿನಿಯರ ಮನವಿಗೆ ಕೆಥೋಲಿಕ್ ಚರ್ಚ್ ಪ್ರತಿಕ್ರಿಯಿಸಿದೆ. ನ್ಯಾಯಾಲಯದ ವಿಚಾರಣೆ ಮುಗಿಯುವವರೆಗೆ ಕುರುವಿಲಂಗೋಡು ಕಾನ್ವೆಂಟ್‌ನಿಂದ ವರ್ಗಾವಣೆ ಮಾಡಲಾಗುವುದಿಲ್ಲ ಅದು ಕ್ರೈಸ್ತ ಸನ್ಯಾಸಿನಿಯರಿಗೆ ಭರವಸೆ ನೀಡಿದೆ.

ಕ್ರೈಸ್ತ ಸನ್ಯಾಸಿನಿಯರಾದ ಅನುಪಮಾ, ನೀನಾ ರೋಸ್, ಆ್ಯನ್ಸಿಟಾ, ಆಲ್ಫಿ ಹಾಗೂ ಜೋಸೆಫೈನ್ ಅವರಿಗೆ ಬಿಷಪ್ ಆ್ಯಂಜೆಲೊ ರುಫಿನೋ ಗ್ರೇಸಿಯಾ ಈ ಬಗ್ಗೆ ಪತ್ರ ಬರೆದಿದ್ದಾರೆ. ಕ್ರೈಸ್ತ ಸನ್ಯಾಸಿನಿಯರನ್ನು ವರ್ಗಾವಣೆ ಮಾಡಲು ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಬಿಷಪ್ ಹೇಳಿದ್ದಾರೆ. ತಮ್ಮನ್ನು ಕುರುವಿಲಂಗೋಡು ಕಾನ್ವೆಂಟ್‌ನಿಂದ ವರ್ಗಾವಣೆ ಮಾಡದಂತೆ ಕ್ರೈಸ್ತ ಸನ್ಯಾಸಿನಿಯರು ಜನವರಿ 16ರಂದು ಬಿಷಪ್‌ಗೆ ಪತ್ರ ಬರೆದಿದ್ದರು. ‘‘ನೀನಾ ರೋಸ್ ಅವರ ಪತ್ರ ನೋಡಿ ನನಗೆ ಅಚ್ಚರಿ ಹಾಗೂ ನಿರಾಶೆ ಉಂಟಾಯಿತು. ನನ್ನ ಅನುಮತಿ ಇಲ್ಲದೆ ಐವರಿಗೆ ಯಾವುದೇ ರೀತಿಯ ಪತ್ರ ನೀಡಬಾರದು ಎಂದು ನಿರ್ದೇಶನ ನೀಡಿದ್ದೇನೆ.’’ ಎಂದು ಅವರು ಹೇಳಿದ್ದಾರೆ.

ಸಂತ್ರಸ್ತ ಕ್ರೈಸ್ತ ಸನ್ಯಾಸಿನಿಗೆ ಬೆಂಬಲ ನೀಡುತ್ತಿರುವ ನಾಲ್ವರು ಕೈಸ್ತ ಸನ್ಯಾಸಿನಿಯರು ಬಿಷಪ್ ಫ್ರಾಂಕೊ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಗಳು. ಅವರನ್ನು ಪಂಜಾಬ್, ಜಾರ್ಖಂಡ್, ಬಿಹಾರ್ ಹಾಗೂ ಕಣ್ಣೂರಿನಲ್ಲಿರುವ ಕಾನ್ವೆಂಟ್‌ಗೆ ವರ್ಗಾಯಿಸಲಾಗಿತ್ತು. ಇನ್ನೋರ್ವ ಕೈಸ್ತ ಸನ್ಯಾಸಿನಿಗೆ ಜಲಾಂದರ್‌ನಲ್ಲಿರುವ ಪ್ರಾಧಿಕಾರದ ಮುಂದೆ ಹಾಜರಾಗುವಂತೆ ಹಾಗೂ ಕೈಗೊಂಡ ಕ್ರಮಗಳ ವಿವರಣೆ ನೀಡುವಂತೆ ಚರ್ಚ್ ಸೂಚಿಸಲಾಗಿತ್ತು. ಎಲ್ಲ ಐದು ಮಂದಿ ಕ್ರೈಸ್ತ ಸನ್ಯಾಸಿನಿಯರು ಕೂಡ ಈ ಅತ್ಯಾಚಾರ ಪ್ರಕರಣದ ಪ್ರಮುಖ ಸಾಕ್ಷಿಗಳಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News