ಗೂಗಲ್ ಆ್ಯಪ್‌ನ ಲಿಂಗತಾರತಮ್ಯದ ಆ್ಯಪ್‌ ಗೆ ಆ್ಯಮ್ನೆಸ್ಟಿ ಆಕ್ಷೇಪ

Update: 2019-02-09 18:12 GMT

  ಸ್ಯಾನ್‌ಫ್ರಾನ್ಸಿಸ್ಕೊ,ಫೆ.9: ಸೌದಿ ಅರೇಬಿಯದಲ್ಲಿ ಪುರುಷರು, ತಮ್ಮ ಕುಟುಂಬದ ಮಹಿಳೆಯರ ಚಲವಲನಗಳನ್ನು ಪರಿಶೋಧಿಸಲು ಹಾಗೂ ನಿಯಂತ್ರಿಸಲು ಅವಕಾಶ ನೀಡುವ ಆ್ಯಪ್‌ನ್ನು ಬಿಡುಗಡೆಗೊಳಿಸಿದ್ದಕ್ಕಾಗಿ ಮಾಹಿತಿ ತಂತ್ರಜ್ಞಾನ ದಿಗ್ಗಜ ಸಂಸ್ಥೆಗಳಾದ ಆ್ಯಪಲ್ ಹಾಗೂ ಗೂಗಲ್ ತೀವ್ರ ಟೀಕೆಗೊಳಗಾಗಿವೆ.

  ‘ ಆಬ್‌ಶೆರ್’ ಎಂಬ ಹೆಸರಿನ ಈ ಆ್ಯಪ್ ಮೂಲಕ ಪುರುಷನು ತನ್ನ ಕುಟುಂಬದ ಮಹಿಳೆಯರಿಗೆ ಪ್ರಯಾಣಿಸಲು ಅನುಮತಿ ನೀಬಹುದಾಗಿದೆ ಹಾಗೂ ಮಹಿಳೆಯು ಗಡಿಪ್ರದೇಶದಲ್ಲಿ ತನ್ನ ಪಾಸ್‌ ಪೋರ್ಟನ್ನು ಬಳಸುವಾಗ, ಆತ ಈ ಆ್ಯಪ್ ಮೂಲಕ ಕೂಡಲೇ ಎಸ್‌ಎಂಎಸ್ ಸಂದೇಶವನ್ನು ಪಡೆಯುತ್ತಾನೆ.

 ಅಮೆರಿಕ ಮೂಲದ ಈ ಎರಡು ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು ಸ್ತ್ರೀದ್ವೇಷ ಹಾಗೂ ಲಿಂಗತಾರತಮ್ಯಕ್ಕೆ ಅನುವು ಮಾಡಿಕೊಡುತ್ತದೆಯೆಂದು ಮಾನವಹಕ್ಕು ಸಂಘಟನೆಗಳು ಆರೋಪಿಸಿವೆ.

 ಈ ಆ್ಯಪನ್ನು ಹಿಂತೆಗೆದುಕೊಳ್ಳುವ ಬಗ್ಗೆ ಪರಿಶೀಲನೆ ನಡೆಸಬೇಕೆಂದು ಮಾನವಹಕ್ಕುಗಳ ಸಂಘಟನೆ ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ಆ್ಯಪಲ್ ಹಾಗೂ ಗೂಗಲ್ ಸಂಸ್ಥೆಗಳಿಗೆ ಆಗ್ರಹಿಸಿದೆ.

ಸೌದಿ ಅರೇಬಿಯದ ಕಾನೂನಿನ ಪ್ರಕಾರ, ಓರ್ವ ಮಹಿಳೆಯು ಕಾನೂನು ಬದ್ಧ ಸಂರಕ್ಷಕನನ್ನು ಹೊಂದಿರುವುದು ಅಗತ್ಯವಾಗಿದ್ದು, ಆತನ ಆಕೆಯ ಪ್ರಯಾಣವನ್ನು ನಿರ್ಬಂಧಿಸುವ ಅಧಿಕಾರವನ್ನು ಹೊಂದಿರುತ್ತಾನೆ.

ಆ್ಯಬ್‌ ಶೆರ್ ಆ್ಯಪ್ , ಪಾರ್ಕಿಂಗ್ ದಂಡಗಳನ್ನು ಪಾವತಿಸುವಂತಹ ಸೇವೆಗಳನ್ನು ಕೂಡಾ ಒದಗಿಸುತ್ತದೆ. ಆದರೆ ಮಹಿಳೆಯರ ಪ್ರಯಾಣಗಳನ್ನು ನಿಯಂತ್ರಿಸುವ ಈ ಆ್ಯಪ್‌ ನ ಕಾರ್ಯನಿರ್ವಹಣೆಗೆ ಮಾನವಹಕ್ಕು ಹೋರಾಟಗಾರರು ಪ್ರಬಲ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಆಬ್‌ಶೆರ್ ಆ್ಯಪ್ ಮೂಲಕ ಮಹಿಳೆಯರು ಶೋಷಣೆಗೊಳಗಾಗುವುದನ್ನು ತಪ್ಪಿಸಲು ಅದರಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡಬೇಕೆಂದು ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ಸಂಸ್ಥೆಯು ಗೂಗಲ್ ಹಾಗೂ ಆ್ಯಪಲ್ ಗೆ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News