‘ನೇಮರ್ ಬಾರ್ಸಿಲೋನಾ ತಂಡಕ್ಕೆ ಮರಳುವುದಿಲ್ಲ’

Update: 2019-02-17 18:35 GMT

ಪ್ಯಾರಿಸ್, ಫೆ.17: ನೇಮರ್ ಮತ್ತೆ ಬಾರ್ಸಿಲೋನಾ ಜೊತೆ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ಖ್ಯಾತ ಫುಟ್ಬಾಲ್ ಆಟಗಾರ ನೇಮರ್ ಅವರ ತಂದೆ ಪುನರುಚ್ಛರಿಸಿದ್ದಾರೆ.

ಅಗಸ್ಟ್ 2017ರಲ್ಲಿ ಪ್ಯಾರಿಸ್ ಸೈಂಟ್ ಜರ್ಮನ್ ತಂಡಕ್ಕೆ ವಿಶ್ವ ದಾಖಲೆಯ 222 ಮಿಲಿಯನ್ ಯೂರೋಸ್ ಮೊತ್ತಕ್ಕೆ ಸೇರ್ಪಡೆಯಾಗಿರುವ ನೇಮರ್ ಮತ್ತೆ ಬಾರ್ಸಿಲೋನಾ ತಂಡಕ್ಕೆ ಮರಳುವ ಸುದ್ದಿ ಆಗಾಗ ಹರಿದಾಡುತ್ತಿದೆ. ಈ ಕುರಿತು ಟಿಎಫ್1 ಎಂಬ ಸುದ್ದಿವಾಹಿನಿಯೊಂದಕ್ಕೆ ತಿಳಿಸಿರುವ ಸೀನಿಯರ್ ನೇಮರ್, ‘‘ಬಾರ್ಸಾ ಒಂದು ದೊಡ್ಡ ಕ್ಲಬ್ ಆಗಿದೆ. ಗಾಳಿಸುದ್ದಿಗಳ ಮಧ್ಯೆ ಇಂತಹ ಉತ್ತಮ ಆಟಗಾರನನ್ನು ಕಳೆದುಕೊಳ್ಳುವುದು ಅಸಾಧ್ಯ. ಬಾರ್ಸಾ ತಂಡದಿಂದ ನೇಮರ್‌ಗೆ ಯಾವುದೇ ಕರೆ ಬಂದಿಲ್ಲ’’ಎಂದು ಅವರು ಹೇಳಿದ್ದಾರೆ.

‘‘ಇಂತಹ ಗಾಳಿಸುದ್ದಿಗಳು ವಿನೋದಕ್ಕೆ ಮಾತ್ರ. ಈ ಪತ್ರಕರ್ತರು ತಮಾಷೆ ಸ್ವಭಾವದವರು. ನೇಮರ್ ಅವರ ಭವಿಷ್ಯ ಹಾಗೂ ವರ್ತಮಾನ ಪ್ಯಾರಿಸ್ ತಂಡದೊಂದಿಗೆ ಇದೆ’’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕಾಲಿನ ಮೂಳೆಗಳ ನೋವಿಗೆ ಒಳಗಾಗಿರುವ ಬ್ರೆಝಿಲ್ ರಾಷ್ಟ್ರೀಯ ತಂಡದ ಆಟಗಾರ ನೇಮರ್, ಸದ್ಯ 10 ವಾರಗಳಿಂದ ಫುಟ್ಬಾಲ್‌ನಿಂದ ದೂರ ಉಳಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News