ಪುಲ್ವಾಮ ಸಂತ್ರಸ್ತರ ಕುಟುಂಬಗಳಿಗೆ ನೆರವು ಘೋಷಿಸಿದ ಸ್ವರಾಜ್ ಪೌಲ್

Update: 2019-02-20 17:51 GMT

ಲಂಡನ್, ಫೆ. 20: ಕಳೆದ ವಾರ ಕಾಶ್ಮೀರದ ಪುಲ್ವಾಮದಲ್ಲಿ ಸಿಆರ್‌ಪಿಎಫ್ ಯೋಧರ ವಾಹನಗಳ ಸಾಲಿನ ಮೇಲೆ ನಡೆದ ಆತ್ಮಹತ್ಯಾ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಸೈನಿಕರ ಕುಟುಂಬಗಳಿಗೆ ತಲಾ ಒಂದು ಲಕ್ಷ ರೂಪಾಯಿ ನೆರವು ನೀಡುವುದಾಗಿ ಲಂಡನ್ ಉದ್ಯಮಿ ಸ್ವರಾಜ್ ಪೌಲ್ ಮಂಗಳವಾರ ಘೋಷಿಸಿದ್ದಾರೆ.

ತನ್ನ ದಿವಂಗತ ಪುತ್ರ ಅಂಗದ ಪೌಲ್ ಹೆಸರನ್ನು ವಾಲ್ವರ್‌ಹ್ಯಾಂಪ್ಟನ್ ವಿಶ್ವವಿದ್ಯಾನಿಲಯದ ಕಟ್ಟಡವೊಂದಕ್ಕೆ ಇಡುವುದಕ್ಕಾಗಿ ವಿಶ್ವವಿದ್ಯಾನಿಲಯದಲ್ಲಿ ಏರ್ಪಡಿಸಲಾದ ಸಮಾರಂಭವೊಂದರಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

 ಮೃತ ಯೋಧರಿಗೆ ನೆರವು ನೀಡುವ ಘೋಷಣೆಯನ್ನು ಕ್ಯಾಪರೊ ಗುಂಪಿನ ಅಧ್ಯಕ್ಷ ಸ್ವರಾಜ್ ಪೌಲ್ ಮಾಡುವಾಗ ಭಾರತದ ಹೈಕಮಿಶನರ್ ರುಚಿ ಘನಶ್ಯಾಮ್ ಉಪಸ್ಥಿತರಿದ್ದರು.

‘‘ಭಾರತದಲ್ಲಿ ನಡೆದ ದೊಡ್ಡ ದುರಂತದ ಬಗ್ಗೆ ನಾವು ಓದಿದ್ದೇವೆ. ಮೃತ ಸೈನಿಕರ ಕುಟುಂಬಗಳಿಗೆ ನನ್ನ ಹೃದಯದಾಳದ ಸಾಂತ್ವನವನ್ನು ಕಳುಹಿಸಲು ನಾನು ಬಯಸುತ್ತೇನೆ. ಮೃತಪಟ್ಟ ಎಲ್ಲ ಸೈನಿಕರ ಕುಟುಂಬಗಳಿಗೆ ತಲಾ ಒಂದು ಲಕ್ಷ ರೂಪಾಯಿ ನೆರವು ನೀಡಲೂ ನಾನು ಬಯಸುತ್ತೇನೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News