ಯುಎಇ ಮೂಲದ ಕೋಚ್ ಗೆ 10 ವರ್ಷ ನಿಷೇಧ ವಿಧಿಸಿದ ಐಸಿಸಿ

Update: 2019-02-21 04:56 GMT

ದುಬೈ, ಫೆ.20: ಭ್ರಷ್ಟಾಚಾರ ಪ್ರಕರಣದಲ್ಲಿ ತಪ್ಪಿತಸ್ಥ ಎನಿಸಿಕೊಂಡ ಯುಎಇ ಮೂಲದ ಕೋಚ್ ಇರ್ಫಾನ್ ಅನ್ಸಾರಿಗೆ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ಎಲ್ಲ ಮಾದರಿ ಕ್ರಿಕೆಟ್‌ನಿಂದ 10 ವರ್ಷಗಳ ಕಾಲ ನಿಷೇಧ ವಿಧಿಸಿದೆ. ಒನ್ ಸ್ಟಾಪ್ ಟೂರಿಸಂ ಹಾಗೂ ಮಲ್ಟಿಪೆಕ್ಸ್ ತಂಡದ ಕೋಚ್ ಆಗಿದ್ದ ಅನ್ಸಾರಿ ಐಸಿಸಿಯ ಭ್ರಷ್ಟಾಚಾರ ನಿಗ್ರಹ ಸಂಹಿತೆಯನ್ನು ಮೂರು ಬಾರಿ ಉಲ್ಲಂಘಿಸಿದ್ದರು ಎಂದು ಜಾಗತಿಕ ಕ್ರಿಕೆಟ್ ಆಡಳಿತ ಮಂಡಳಿ ತಿಳಿಸಿದೆ.

''ವಿಚಾರಣೆ ವೇಳೆ 2017ರಲ್ಲಿ ಯುಎಇನಲ್ಲಿ ನಡೆದ ಶ್ರೀಲಂಕಾದೊಂದಿಗೆ ಪಾಕ್ ಸರಣಿಯ ವೇಳೆ ಅನ್ಸಾರಿ ಪಾಕ್ ನಾಯಕ ಸರ್ಫರಾಝ್ ಅಹ್ಮದ್‌ರನ್ನು ಸಂಪರ್ಕಿಸಿರುವ ಪುರಾವೆಯನ್ನು ಟ್ರಿಬ್ಯೂನಲ್ ಆಲಿಸಿದೆ. ಭ್ರಷ್ಟ ನಡವಳಿಕೆಯಿಂದ ಅಹ್ಮದ್‌ರಿಂದ ಮಾಹಿತಿ ಪಡೆಯಲು ಯತ್ನಿಸಿದ್ದು ಗೊತ್ತಾಗಿದೆ'' ಎಂದು ಐಸಿಸಿ ಪ್ರಕಟನೆಯಲ್ಲಿ ತಿಳಿಸಿದೆ. ''ಅನ್ಸಾರಿ ತನ್ನನ್ನು ಸಂಪರ್ಕಿಸಿದ ಬಗ್ಗೆ ಐಸಿಸಿ ಭ್ರಷ್ಟಾಚಾರ ನಿಗ್ರಹ ಘಟಕಕ್ಕೆ ಮಾಹಿತಿ ನೀಡಿ ನೈಜ ನಾಯಕತ್ವ ಹಾಗೂ ವೃತ್ತಿಪರತೆ ಪ್ರದರ್ಶಿಸಿದ ಸರ್ಫರಾಝ್ ಅಹ್ಮದ್‌ಗೆ ಕೃತಜ್ಞತೆಗಳು. ಕಳೆದ ಮೇನಲ್ಲಿ ಪ್ರಕರಣ ದಾಖಲಾದ ಬಳಿಕ ಅನ್ಸಾರಿ ನಮ್ಮಾಂದಿಗೆ ತನಿಖೆಗೆ ಸಹಕರಿಸಲು ವಿಫಲರಾಗಿದ್ದಾರೆ'' ಎಂದು ಐಸಿಸಿ ಪ್ರಧಾನ ಪ್ರಬಂಧಕ ಅಲೆಕ್ಸ್ ಮಾರ್ಷಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News