ಡೇವಿಸ್ ಕಪ್: ಭಾರತ ತಂಡದ ಪಾಕ್ ಪ್ರವಾಸ ಖಚಿತ

Update: 2019-02-22 18:59 GMT

ಕೋಲ್ಕತಾ, ಫೆ.22: ಡೇವಿಸ್ ಕಪ್‌ನ ಗ್ರೂಪ್ 1 ಸ್ಪರ್ಧೆಗಳಿಗಾಗಿ ಭಾರತ ತಂಡ ಪಾಕ್ ಪ್ರವಾಸ ಕೈಗೊಳ್ಳುವುದು ನಿಸ್ಸಂಶಯವಾಗಿದೆ ಹಾಗೂ ಪುಲ್ವಾಮ ಉಗ್ರ ದಾಳಿಯ ಬಳಿಕ ಅಖಿಲ ಭಾರತ ಟೆನಿಸ್ ಅಸೋಸಿಯೇಶನ್ ಡೇವಿಸ್ ಕಪ್ ಸ್ಪರ್ಧೆಯ ಸ್ಥಳ ಬದಲಾವಣೆಗೆ ಮನವಿ ಮಾಡಿಕೊಂಡಿಲ್ಲ.

ಫೆ.14ರಂದು ಪುಲ್ವಾಮದಲ್ಲಿ ಉಗ್ರ ದಾಳಿಯಿಂದ 40ಕ್ಕಿಂತ ಹೆಚ್ಚು ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ. ಘಟನೆಯ ಬಳಿಕ ಭಾರತ ಡೇವಿಸ್ ಕಪ್ ತಂಡ ಸೆಪ್ಟ್ಟಂಬರ್‌ನಲ್ಲಿ ನಡೆಯುವ ಟೂರ್ನಿಗಾಗಿ ಪಾಕ್ ಪ್ರವಾಸವನ್ನು ತಿರಸ್ಕರಿಸಬಹುದು ಎಂದು ವರದಿಯಾಗಿತ್ತು.

‘‘ಸ್ಥಳ ಬದಲಾವಣೆಗೆ ನಾವು ಮನವಿ ಮಾಡಿಕೊಂಡಿಲ್ಲ. ಇಂತಹ ವರದಿಗಳು ಆಧಾರರಹಿತವಾಗಿವೆ. ಟೂರ್ನಿಯು ಇನ್ನೂ ದೂರ ಇದೆ. ಸೆಪ್ಟೆಂಬರ್‌ನಲ್ಲಿ ಟೂರ್ನಿ ನಡೆಯುವುದರಿಂದ ಫೆಬ್ರವರಿಯಲ್ಲಿ ನಡೆಯುತ್ತಿರುವ (ರಾಜಕೀಯ) ಸ್ಥಿತಿಯ ಬಗ್ಗೆ ನಾವು ಭವಿಷ್ಯ ನುಡಿಯುವುದಿಲ್ಲ’’ ಎಂದು ಎಐಟಿಎ ಪ್ರಧಾನ ಕಾರ್ಯದರ್ಶಿ ಹಿರೊನ್ಮಯ್ ಚಟರ್ಜಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News