ಹೆಲಿಕಾಪ್ಟರ್ ಪತನ : ನೇಪಾಳ ಪ್ರವಾಸೋದ್ಯಮ ಸಚಿವ ಸಹಿತ ಏಳು ಮಂದಿ ಸಾವು

Update: 2019-02-27 12:09 GMT

ಕಾಠ್ಮಂಡು : ನೇಪಾಳದ ತೆಹ್ರಾಥುಂ ಜಿಲ್ಲೆಯಲ್ಲಿ ಇಂದು ಸಂಭವಿಸಿದ ಹೆಲಿಕಾಪ್ಟರ್ ಪತನದಲ್ಲಿ ಅಲ್ಲಿನ ಪ್ರವಾಸೋದ್ಯಮ ಸಚಿವ ರಬೀಂದ್ರ ಅಧಿಕಾರಿ ಸಹಿತ ಏಳು ಜನರು ಸಾವನ್ನಪ್ಪಿದ್ದಾರೆ.

ಸಚಿವರ ಹೊರತಾಗಿ ಈ ಏರ್ ಡೈನಾಸ್ಟಿ ಹೆಲಿಕಾಪ್ಟರಿನಲ್ಲಿ  ಖ್ಯಾತ ವಿಮಾನಯಾನ ತಜ್ಞ ತ್ಸೆರಿಂಗ್ ಶೆರ್ಪ,  ಪ್ರಧಾನಿಯ ಖಾಸಗಿ ಸಹಾಯಕ  ಕೆ ಪಿ ಶರ್ಮ ಒಲಿ ಹಾಗೂ ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರದ ಉಪ ಮಹಾನಿರ್ದೇಶಕ ಬೀರೇಂದ್ರ ಪ್ರಸಾದ್ ಶ್ರೇಷ್ಠ ಇದ್ದರು.

ಹೆಲಿಕಾಪ್ಟರ್ ಪತನಗೊಂಡ ಪ್ರದೇಶದಲ್ಲಿ ಬೆಂಕಿ  ಕಾಣಿಸಿಕೊಂಡಾಗ ಗ್ರಾಮಸ್ಥರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ದುರಂತದ ಹಿನ್ನೆಲೆಯಲ್ಲಿ ಇಂದು ನೇಪಾಳದ  ಪ್ರಧಾನಿ ತುರ್ತು ಸಚಿವ ಸಂಪುಟ ಸಭೆಯನ್ನು ತಮ್ಮ ಅಧಿಕೃತ ನಿವಾಸದಲ್ಲಿ ಕರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News