×
Ad

ಭಾರತದ ವಾಯುಪ್ರದೇಶ ಉಲ್ಲಂಘಿಸಿದ್ದ 20ಕ್ಕೂ ಹೆಚ್ಚು ಪಾಕ್ ಯುದ್ಧವಿಮಾನಗಳು

Update: 2019-02-28 19:23 IST

ಹೊಸದಿಲ್ಲಿ,ಫೆ.28: ಪಾಕಿಸ್ತಾನದ ಇಪ್ಪತ್ತಕ್ಕೂ ಅಧಿಕ ಯುದ್ಧವಿಮಾನಗಳು ಬುಧವಾರ ಭಾರತದ ವಾಯುಪ್ರದೇಶವನ್ನು ಪ್ರವೇಶಿಸಿ ಭಾರತೀಯ ಸೇನಾ ನೆಲೆಗಳ ಮೇಲೆ ಲೇಸರ್ ಆಧಾರಿತ ಕ್ಷಿಪಣಿ ದಾಳಿ ನಡೆಸಿದ್ದರು. ಆದರೆ ಈ ಕ್ಷಿಪಣಿಗಳು ಗುರಿಯಿಂದ ಸ್ವಲ್ಪವೇ ದೂರದಲ್ಲಿ ಸ್ಫೋಟಿಸಿದ್ದವು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ವಾಯುಪ್ರದೇಶ ಉಲ್ಲಂಘನೆ ಮಾಡಿದ್ದರೂ ಭಾರತೀಯ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿರಲಿಲ್ಲ ಎಂಬ ಪಾಕಿಸ್ತಾನದ ಹೇಳಿಕೆ ಸುಳ್ಳು. ನಮ್ಮ ಸಶಸ್ತ್ರಪಡೆಗಳು ಗಡಿಯಲ್ಲಿ ಕಟ್ಟೆಚರವಹಿಸಿವೆ ಎಂದು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಭದ್ರತಾ ಪಡೆಗಳ ರಜೆಯನ್ನು ರದ್ದುಗೊಳಿಸಲಾಗಿಲ್ಲ. ಆದರೆ ಪ್ರಮುಖ ಸ್ಥಾನಗಳನ್ನು ಹೊಂದಿರುವ ಸಿಬ್ಬಂದಿಯ ರಜೆಗಳನ್ನು ತಡೆಹಿಡಿಯಲಾಗಿದೆ. ಸದ್ಯ ಭೂಸೇನೆಯನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗಿಲ್ಲ. ಆದರೆ ಯಾವುದೇ ಹಂತದಲ್ಲೂ ವಿವಾದಿತ ಪ್ರದೇಶಕ್ಕೆ ಆಗಮಿಸಲು ಸೇನೆ ಸರ್ವಸನ್ನದ್ಧವಾಗಿದೆ ಎಂದು ಹೇಳಿಕೆ ತಿಳಿಸಿದೆ. ಬುಧವರ ಎರಡೂ ದೇಶಗಳ ಯುದ್ಧವಿಮಾನಗಳು ಆಕಾಶದಲ್ಲೇ ಕಾದಾಟಕ್ಕಿಳಿದಿದ್ದು ಭಾರತೀಯ ವಾಯುಪಡೆ ಪಾಕಿಸ್ತಾನದ ಎಫ್-16 ಯುದ್ಧವಿಮಾನವನ್ನು ಹೊಡೆದುರುಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News