ನ್ಯಾಶನಲ್ ಹೆರಾಲ್ಡ್ ಪ್ರಕರಣ: ತೆರವು ಆದೇಶ ಪ್ರಶ್ನಿಸಿ ಎಜೆಎಲ್ ಸಲ್ಲಿಸಿದ ಮನವಿ ದಿಲ್ಲಿ ಹೈಕೋರ್ಟ್‌ನಿಂದ ತಿರಸ್ಕೃತ

Update: 2019-02-28 15:07 GMT

ಹೊಸದಿಲ್ಲಿ, ಫೆ. 28: ಇಲ್ಲಿನ ಐಟಿಒ ಆವರಣದಿಂದ ತೆರವುಗೊಳ್ಳುವಂತೆ ಏಕ ಸದಸ್ಯ ಪೀಠ ನೀಡಿದ ಆದೇಶ ಪ್ರಶ್ನಿಸಿ ನ್ಯಾಶನಲ್ ಹೆರಾಲ್ಡ್‌ನ ಪ್ರಕಾಶಕರಾಗಿರುವ ಅಸೋಸಿಯೇಟ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ಸಲ್ಲಿಸಿದ ಮನವಿಯನ್ನು ದಿಲ್ಲಿ ಉಚ್ಚ ನ್ಯಾಯಾಲಯ ಗುರುವಾರ ತಿರಸ್ಕರಿಸಿದೆ.

ಐಟಿಒ ಆವರಣದಿಂದ ತೆರವುಗೊಳ್ಳುವಂತೆ ಕೋರಿದ ಕೇಂದ್ರ ಸರಕಾರದ ನಿರ್ಧಾರ ಪ್ರಶ್ನಿಸಿ ಎಜೆಎಲ್‌ನ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ರಾಜೇಂದ್ರ ಮೆನನ್ ಹಾಗೂ ನ್ಯಾಯಮೂರ್ತಿ ವಿ.ಕೆ. ರಾವ್ ತಿರಸ್ಕರಿಸಿದ್ದಾರೆ.

  ನಾವು ಮನವಿ ತಿರಸ್ಕರಿಸಿದ್ದೇವೆ ಎಂದು ಪೀಠ ಹೇಳಿದೆ. ಎಜೆಎಲ್ ಪರ ವಕೀಲರ ಮೌಖಿಕ ಮನವಿಯನ್ನು ಕೂಡ ಪೀಠ ತಿರಸ್ಕರಿಸಿದೆ ಹಾಗೂ ಆವರಣದಿಂದ ತೆರವುಗೊಳ್ಳಲು ಎರಡು ವಾರಗಳ ಕಾಲಾವಕಾಶ ನೀಡಿದೆ.

  1971ರ ಸಾರ್ವಜನಿಕ ಪ್ರದೇಶ ಕಾಯ್ದೆ ಅಡಿಯ ಪ್ರಕ್ರಿಯೆಯ ಬಳಿಕ ಎರಡು ವಾರಗಳಲ್ಲಿ ಐಟಿಒ ಆವರಣದಿಂದ ತೆರವು ಗೊಳ್ಳುವಂತೆ ಏಕ ಸದಸ್ಯ ಪೀಠ 2018 ಡಿಸೆಂಬರ್ 21ರಂದು ನಿರ್ದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಎಜೆಎಲ್ ಮನವಿ ಸಲ್ಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News