ಅಭಿನಂದನ್ ಪದದ ಅರ್ಥ ಇನ್ನು ಬದಲಾಗಲಿದೆ: ಪ್ರಧಾನಿ ಮೋದಿ
ಹೊಸದಿಲ್ಲಿ, ಮಾ.2: ಅಭಿನಂದನ್ ಎಂಬ ಪದವನ್ನು ಅಭಿನಂದನೆ ಎಂಬ ಅರ್ಥದಲ್ಲಿ ಬಳಸಲಾಗುತ್ತಿದೆ. ಆದರೆ ಇನ್ನು ಮುಂದೆ ಈ ಪದದ ಅರ್ಥ ಬದಲಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ಮೋದಿ, ಪಾಕ್ ವಶದಿಂದ ಬಿಡುಗಡೆಗೊಂಡು ಸ್ವದೇಶಕ್ಕೆ ವಾಪಸಾಗಿರುವ ವಾಯುಪಡೆ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್‌ರನ್ನು ಉಲ್ಲೇಖಿಸಿ ಮಾತನಾಡಿದರು. ಭಾರತ ಏನು ಮಾಡಬಲ್ಲದು ಎಂಬುದನ್ನು ಇಡೀ ವಿಶ್ವವೇ ಜಾಗರೂಕತೆಯಿಂದ ನೋಡುತ್ತಿದೆ. ಈ ದೇಶಕ್ಕೆ ಡಿಕ್ಷನರಿಯಲ್ಲಿರುವ ಪದದ ಅರ್ಥವನ್ನೂ ಬದಲಿಸುವ ಶಕ್ತಿಯಿದೆ . ಇನ್ನು ಮುಂದೆ ಅಭಿನಂದನ್ ಎಂಬ ಪದದ ಅರ್ಥ ಬದಲಾಗಲಿದೆ. ಭಾರತಕ್ಕೆ ಈ ಶಕ್ತಿಯಿದೆ. ದೇಶವು ಶೌರ್ಯ, ಪರಾಕ್ರಮದೊಂದಿಗೆ ಮುನ್ನಡೆಯಬೇಕಿದೆ ಎಂದು ಪ್ರಧಾನಿ ಹೇಳಿದರು.
ಅಭಿನಂದನ್ ಬಿಡುಗಡೆಯಾದೊಡನೆ ಮೋದಿ ‘ ಸ್ವದೇಶಕ್ಕೆ ಸುಸ್ವಾಗತ ವಿಂಗ್ ಕಮಾಂಡರ್ ಅಭಿನಂದನ್. ನಿಮ್ಮ ಅನುಕರಣೀಯ ಶೌರ್ಯ ಕಾರ್ಯದ ಬಗ್ಗೆ ದೇಶ ಹೆಮ್ಮೆ ಪಡುತ್ತಿದೆ’ ಎಂದು ಟ್ವೀಟ್ ಮಾಡಿದ್ದರು.