ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ: ದೇವೇಂದ್ರ ಫಡ್ನವೀಸ್ ಅಧ್ಯಕ್ಷತೆಯಲ್ಲಿ ಸಭೆ

Update: 2019-03-02 18:12 GMT

ಮುಂಬೈ, ಮಾ. 2: ಮಹಾರಾಷ್ಟ್ರ- ಕರ್ನಾಟಕ ಗಡಿ ವಿವಾದ ಹಾಗೂ ವಿವಿಧ ಕಾನೂನಾತ್ಮಕ ವಿಷಯಗಳ ಬಗೆಗಿನ ಉನ್ನತಾಧಿಕಾರದ ಸಭೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆಯಿತು.

ಕಂದಾಯ ಸಚಿವ ಚಂದ್ರಕಾಂತ್ ಪಾಟೀಲ್, ಕೈಗಾರಿಕೆ ಸಚಿವ ಸುಭಾಶ್ ದೇಸಾಯಿ ಹಾಗೂ ರಾಜ್ಯ ವಿಧಾನ ಸಭೆಯ ವಿಪಕ್ಷದ ನಾಯಕ ಧನಂಜಯ ಮುಂಡೆ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಮುಖ್ಯಮಂತ್ರಿ ಅವರ ಕಚೇರಿಯ ಹೇಳಿಕೆ ತಿಳಿಸಿದೆ.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಂಡೆ, ಮಹಾರಾಷ್ಟ್ರ ಏಕೀಕರಣ ಸಮಿತಿ ರೂಪಿಸಿದ ಬಳಿಕ ಎರಡು ವರ್ಷಗಳ ಬಳಿಕ ಮೊದಲ ಬಾರಿಗೆ ಈ ಸಭೆ ನಡೆಯುತ್ತಿದೆ ಎಂದರು.

  ಹಲವು ವಿಷಯಗಳ ಬಗ್ಗೆ ಸಕಾರಾತ್ಮಕವಾಗಿ ಚರ್ಚೆ ನಡೆಸಲಾಗಿದೆ. ಮಹಾರಾಷ್ಟ್ರದ ಗಡಿಯಲ್ಲಿ ಕರ್ನಾಟಕದಲ್ಲಿ ಇರುವ 865 ಗ್ರಾಮಗಳಲ್ಲಿ ಇರುವ ಮರಾಠಿ ಯುವಕರನ್ನು ಮರಾಠಿಗರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ನೀಡಲಾಗುವ ಶೇ. 16 ಮೀಸಲಾತಿಯಲ್ಲಿ ಒಳಗೊಳಿಸಬೇಕು ಎಂದು ಏಕೀಕರಣ ಸಮಿತಿ ಹಾಗೂ ನಾನು ಆಗ್ರಹಿಸಿದ್ದೇನೆ ಎಂದು ಮುಂಡೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News