ಪಾಕ್‌ನಲ್ಲಿ ತನಗೆ ಮಾನಸಿಕ ಕಿರುಕುಳ ನೀಡಲಾಗಿತ್ತು ಎಂದು ಅಭಿನಂದನ್ ಹೇಳಿಕೆ: ವರದಿ

Update: 2019-03-02 18:17 GMT

ಹೊಸದಿಲ್ಲಿ,ಮಾ.2: ತಾನು ಪಾಕಿಸ್ತಾನಿ ಅಧಿಕಾರಿಗಳ ವಶದಲ್ಲಿದ್ದ ಸುಮಾರು 60 ಗಂಟೆಗಳ ಅವಧಿಯಲ್ಲಿ ಅವರು ತನಗೆ ದೈಹಿಕ ಹಿಂಸೆಯನ್ನು ನೀಡಿರಲಿಲ್ಲ,ಆದರೆ ಗಣನೀಯ ಮಾನಸಿಕ ಕಿರುಕುಳಕ್ಕೆ ಗುರಿಯಾಗಿಸಿದ್ದರು ಎಂದು ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ ಅವರು ಶನಿವಾರ ಬಹಿರಂಗಗೊಳಿಸಿದ್ದಾಗಿ ಮೂಲಗಳನ್ನು ಉಲ್ಲೇಖಿಸಿ ಎಎನ್‌ಐ ಸುದ್ದಿಸಂಸ್ಥೆಯು ವರದಿ ಮಾಡಿದೆ.

ಬುಧವಾರ ಭಾರತದ ಗಡಿಯಲ್ಲಿ ನುಗ್ಗಿದ್ದ ಪಾಕಿಸ್ತಾನದ ಎಫ್-16 ವಿಮಾನದ ಜೊತೆ ಕಾಳಗದ ಸಂದರ್ಭ ಅಭಿನಂದನ್ ಅವರ ಮಿಗ್-21 ಯುದ್ಧವಿಮಾನವನ್ನು ಹೊಡೆದುರುಳಿಸಲಾಗಿತ್ತು ಮತ್ತು ಅವರು ಪಾಕ್ ಸೇನೆಗೆ ಸೆರೆ ಸಿಕ್ಕಿದ್ದರು.

ಪ್ಯಾರಾಚೂಟ್‌ನಿಂದ ಇಳಿದಿದ್ದ ಅಭಿನಂದನ್ ಅವರಿಗೆ ಸ್ಥಳೀಯ ನಿವಾಸಿಗಳು ಹಲ್ಲೆ ನಡೆಸಿದ್ದರಾದರೂ ಅವರನ್ನು ತಮ್ಮ ವಶಕ್ಕೆ ಪಡೆದ ಬಳಿಕ ಜಿನಿವಾ ಒಪ್ಪಂದಕ್ಕನುಗುಣವಾಗಿ ನಡೆಸಿಕೊಳ್ಳಲಾಗಿದೆ ಎಂದು ಪಾಕ್ ಅಧಿಕಾರಿಗಳು ಪ್ರತಿಪಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News