ಹುತಾತ್ಮ ಯೋಧನ ಪಾರ್ಥಿವ ಶರೀರ ಸ್ವೀಕರಿಸಲು ಒಬ್ಬನೇ ಒಬ್ಬ ಎನ್ ಡಿಎ ನಾಯಕನಿಲ್ಲ!

Update: 2019-03-03 09:12 GMT

#ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ಮೃತಪಟ್ಟ ಪಿಂಟು ಕುಮಾರ್ ಸಿಂಗ್

ಪಾಟ್ನಾ, ಮಾ.3: ಕುಪ್ವಾರದಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಸಿಆರ್ ಪಿಎಫ್ ಯೋಧ ಪಿಂಟು ಕುಮಾರ್ ಸಿಂಗ್ ರ ಪಾರ್ಥಿವ ಶರೀರ ಇಂದು ಪಾಟ್ನಾ ವಿಮಾನ ನಿಲ್ದಾಣ ತಲುಪಿದೆ. ಆದರೆ ಎನ್ ಡಿಎಯ ಯಾವೊಬ್ಬ ನಾಯಕನೂ ವೀರಯೋಧನ ಪಾರ್ಥೀವ ಶರೀರ ಸ್ವೀಕರಿಸಲು ಬಂದಿರಲಿಲ್ಲ.

ಎನ್ ಡಿಎಯ ಎಲ್ಲಾ ನಾಯಕರು ಪಾಟ್ನಾದಲ್ಲಿ ನಡೆಯುವ ‘ಸಂಕಲ್ಪ್’ ರ್ಯಾಲಿಯಲ್ಲಿ ಭಾಗವಹಿಸಲು ತೆರಳಿದ್ದಾರೆ ಎನ್ನಲಾಗಿದೆ.

“ಅಂತಿಮ ನಮನ ಸಲ್ಲಿಸಲು ಮುಖ್ಯಮಂತ್ರಿ ನಿತೀಶ್ ಕುಮಾರ್ ಕೂಡ ಮನಸ್ಸು ಮಾಡಿಲ್ಲ ಎನ್ನುವುದು ತೀರಾ ದುರದೃಷ್ಟಕರ ಎಂದು ಸಿಆರ್ ಪಿಎಫ್ ಯೋಧನ ಚಿಕ್ಕಪ್ಪ ಸಂಜಯ್ ಸಿಂಗ್ ಹೇಳಿದ್ದಾರೆ.

ಜಿಲ್ಲಾ ಮ್ಯಾಜಿಸ್ಟ್ರೇಟ್ ಕುಮಾರ್ ರವಿ, ಹಿರಿಯ ಪೊಲೀಸ್ ಅಧಿಕಾರಿ ಗರೀಮಾ ಮಲ್ಲಿಕ್, ಸಿಆರ್ ಪಿಎಫ್ ನ ಹಿರಿಯ ಅಧಿಕಾರಿಗಳು, ರಾಜ್ಯ ಕಾಂಗ್ರೆಸ್ ನಾಯಕ ಮದನ್ ಮೋಹನ್ ಝಾ ಹಾಗು ಲೋಕ ಜನಶಕ್ರಿ ಪಕ್ಷದ ನಾಯಕ ಚೌಧರಿ ಮಹಬೂಬ್ ಅಲಿ ಕೈಸರ್ ಮೊದಲಾದವರು ಯೋಧನ ಪಾರ್ಥಿವ ಶರೀರ ಸ್ವೀಕರಿಸಲು ಆಗಮಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News