ಭಗವಾನ್ ಮಹಾವೀರ ಅಹಿಂಸಾ ಪುರಸ್ಕಾರಕ್ಕೆ ವೀರಯೋಧ ಅಭಿನಂದನ್ ಆಯ್ಕೆ

Update: 2019-03-03 17:26 GMT

ನಾಸಿಕ್, ಮಾ. 2: ಅಖಿಲ ಭಾರತೀಯ ದಿಗಂಬರ ಜೈನ್ ಮಹಾಸಮಿತಿ ಸ್ಥಾಪಿಸಿದ ‘ಭಗವಾನ್ ಮಹಾವೀರ ಅಹಿಂಸಾ ಪುರಸ್ಕಾರ್’ಗೆ ವಾಯು ಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಆಯ್ಕೆಯಾಗಿದ್ದಾರೆ.

ಅಭಿನಂದನ್ ಈ ಪ್ರಶಕ್ತಿ ಸ್ವೀಕರಿಸಲಿರುವ ಮೊದಲ ವ್ಯಕ್ತಿಯಾಗಲಿದ್ದಾರೆ. ಅಭಿನಂದನ್ ವರ್ಧಮಾನ್ 60 ಗಂಟೆಗಳ ಕಾಲ ಪಾಕಿಸ್ತಾನದ ವಶದಲ್ಲಿದ್ದರು.

ಮೂರು ದಿನಗಳ ಕಾಲ ಪಾಕಿಸ್ತಾನದ ವಶದಲ್ಲಿ ಇದ್ದ ಅಭಿನಂದನ್ ವರ್ಧನ್ ಅವರು ಶುಕ್ರವಾರ ರಾತ್ರಿ ಭಾರತಕ್ಕೆ ಮರಳಿದ್ದರು. ಸಂಘಟನೆಯ ಅಧ್ಯಕ್ಷ ಮಂದಿರಾ ಜೈನ್ ಅಭಿನಂದನ್ ವರ್ಧನ್‌ಗೆ ಈ ಪ್ರಶಸ್ತಿಯನ್ನು ಹೊಸದಿಲ್ಲಿಯಲ್ಲಿ ಪ್ರಕಟಿಸಿದ್ದಾರೆ ಎಂದು ಮಹಾರಾಷ್ಟ್ರ ಕಾಪ್ಟರ್ ಸಂಚಾಲಕ ಪರಾಸ್ ಲೊಹಾಡೆ ನಾಸಿಕ್‌ನಲ್ಲಿ ತಿಳಿಸಿದ್ದಾರೆ.

ಪ್ರಶಸ್ತಿಯನ್ನು ಈ ವರ್ಷ ಆರಂಭಿಸಲಾಗಿದೆ. ಪ್ರಶಸ್ತಿ 2 ಲಕ್ಷ ರೂಪಾಯಿ. ಸ್ಮರಣಿಕೆಗಳನ್ನು ಒಳಗೊಂಡಿದೆ. ಮಹಾವೀರ ಜಯಂತಿಯ ದಿನವಾದ ಎಪ್ರಿಲ್ 17ರಂದು ಈ ಪ್ರಶಸ್ತಿಯನ್ನು ಅಭಿನಂದನ್ ವರ್ಧಮಾನ್ ಅವರಿಗೆ ಪ್ರದಾನ ಮಾಡಲಾಗುವುದು ಎಂದು ಲೊಹಾಡೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News