×
Ad

ಭಾರತದ ಜೀವನ್ ಜೀವನಶ್ರೇಷ್ಠ ಸಾಧನೆ

Update: 2019-03-04 23:38 IST

ಹೊಸದಿಲ್ಲಿ, ಮಾ.4: ದುಬೈನ ಎಟಿಪಿ 500 ಟೂರ್ನಿಯಲ್ಲಿ ಸೆಮಿಫೈನಲ್‌ವರೆಗೂ ಸಾಗಿದ್ದ ಭಾರತದ ಜೀವನ್ ನೆಡುಂಚೆಝಿಯಾನ್ ಎಟಿಪಿ ಡಬಲ್ಸ್ ವಿಭಾಗದಲ್ಲಿ ಜೀವನಶ್ರೇಷ್ಠ 68ನೇ ಸ್ಥಾನ ತಲುಪಿದ್ದಾರೆ. ಆದರೆ ಹಿರಿಯ ಆಟಗಾರ ಲಿಯಾಂಡರ್ ಪೇಸ್ 23 ಸ್ಥಾನ ಕೆಳಗಿಳಿದು 96ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

ಎಡಗೈ ಆಟಗಾರ ಜೀವನ್ ಹಾಗೂ ಅವರ ಜತೆ ಆಟಗಾರ ಭಾರತದ ಪೂರವ್ ರಾಜಾ ದುಬೈ ಟೂರ್ನಿಗೆ ಅರ್ಹತಾ ಆಟಗಾರರಾಗಿ ಪ್ರವೇಶಿಸಿ ಸೆಮಿಫೈನಲ್ ತನಕ ತಲುಪುವ ಮೂಲಕ 225 ಅಂಕಗಳನ್ನು ಗಳಿಸಿದ್ದರು. ಸದ್ಯ ಅವರು ಕ್ರಮವಾಗಿ ಭಾರತದ 3 ಹಾಗೂ 4ನೇ ರ್ಯಾಂಕಿನ ಆಟಗಾರರಾಗಿದ್ದಾರೆ. ರಾಜಾ ವಿಶ್ವ ರ್ಯಾಂಕಿಂಗ್‌ನಲ್ಲಿ 17 ಸ್ಥಾನ ಭಡ್ತಿ ಪಡೆದು 79ನೇ ಸ್ಥಾನ ಅಲಂಕರಿಸಿದ್ದಾರೆ. ರೋಹನ್ ಬೋಪಣ್ಣ (38ನೇ ವಿಶ್ವ ರ್ಯಾಂಕಿಂಗ್)ಹಾಗೂ ದಿವಿಜ್ ಶರಣ್ (40ನೇ ವಿಶ್ವ ರ್ಯಾಂಕಿಂಗ್) ಭಾರತದ ಅಗ್ರ ರ್ಯಾಂಕಿನ ಡಬ್ಸ್ ಆಟಗಾರರಾಗಿ ಮುಂದುವರಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News