ಬಿಜೆಪಿ ವೆಬ್ ಸೈಟ್ ಹ್ಯಾಕ್ ಮಾಡಿ ಮೋದಿಯ ಮೀಮ್ ಹಾಕಿದ ಹ್ಯಾಕರ್ ಗಳು!

Update: 2019-03-05 10:48 GMT

ಹೊಸದಿಲ್ಲಿ, ಮಾ.5: ಬಿಜೆಪಿಯ ಅಧಿಕೃತ ವೆಬ್ ಸೈಟ್ ಹ್ಯಾಕ್ ಆಗಿದ್ದು, ಹ್ಯಾಕರ್ ಗಳು ಪ್ರಧಾನಿ ಮೋದಿಯನ್ನು ಗೇಲಿ ಮಾಡುವ ವಿಡಿಯೋ ಹಾಕಿದ್ದರು ಎಂದು ವರದಿಯಾಗಿದೆ.

ಪ್ರಧಾನಿ ನರೇಂದ್ರ ಮೋದಿಯ ಮೀಮ್ ಒಂದರ ಸ್ಕ್ರೀನ್ ಶಾಟ್ ಗಳನ್ನು ಹಲವರು ಶೇರ್ ಮಾಡಿದ್ದಾರೆ. ಈ ಮೀಮ್ ನಲ್ಲಿ ಪ್ರಧಾನಿ ಮೋದಿ ಜರ್ಮನ್ ಚಾನ್ಸಲರ್ ಏಂಜೆಲಾ ಮರ್ಕೆಲ್ ಅವರಿಗೆ ಹಸ್ತಲಾಘವ ಮಾಡಲು ತಮ್ಮ ಕೈ ಮುಂದೆ ಮಾಡಿರುವಂತೆಯೇ ಆಕೆ ಅದನ್ನು ಗಣನೆಗೆ ತೆಗೆದುಕೊಳ್ಳದೆ ಮುಂದಕ್ಕೆ ನಡೆಯುವ ವೀಡಿಯೋ ಕ್ಲಿಪ್  ಇದೆ.

``ಭಯ್ಯಾ ಔರ್ ಬೆಹನೋ, ನೀವು ಈಗ ಬಿಜೆಪಿ ವೆಬ್ ಸೈಟ್ ಅನ್ನು ನೋಡದೇ ಇದ್ದರೆ ನೀವು ಮಿಸ್ ಮಾಡಿಕೊಳ್ಳುತ್ತೀರಿ,'' ಎಂದು ಕಾಂಗ್ರೆಸ್ ನಾಯಕಿ ದಿವ್ಯ ಸ್ಪಂದನಾ ಟ್ವೀಟ್ ಮಾಡಿದ್ದಾರೆ.

ಈ ವಿಚಾರದಲ್ಲಿ ವಿಪಕ್ಷಗಳೂ ಬಿಜೆಪಿಯನ್ನು ಟ್ರೋಲ್ ಮಾಡಿವೆ. “ಇವಿಎಂಗಳನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲ ಎಂದು ಹೇಳಿಕೊಂಡ ಐಟಿ ತಜ್ಞರು ಇಂದು ತಮ್ಮದೇ ಪಕ್ಷದ ವೆಬ್ ಸೈಟ್ ಹ್ಯಾಕ್ ಆಗಿದ್ದನ್ನು ನೋಡಿದ್ದಾರೆ. ಆದರೆ ಪುರಾವೆ ಕೇಳಬೇಡಿ'' ಎಂದು ಆಮ್ ಆದ್ಮಿ ಪಕ್ಷದ ವಕ್ತಾರ ಸೌರಭ್ ಭಾರಧ್ವಾಜ್ ಟ್ವೀಟ್ ಮಾಡಿದ್ದಾರೆ.

ಬಿಜೆಪಿಯ ವೆಬ್ ಸೈಟ್ ಈಗಲೂ ಡೌನ್ ಆಗಿದ್ದು ``ನಾವು ಆದಷ್ಟು ಬೇಗ ವಾಪಸ್ ಬರುತ್ತೇವೆ. ಅನಾನುಕೂಲಕ್ಕೆ ವಿಷಾದವಿದೆ. ಸದ್ಯ ನಿರ್ವಹಣಾ ಕೆಲಸವನ್ನು ಮಾಡುತ್ತಿದ್ದೇವೆ. ಸದ್ಯದಲ್ಲೇ ಆನ್ಲೈನ್ ಗೆ ವಾಪಸಾಗುತ್ತೇವೆ-'' ವೆಬ್ ಅಡ್ಮಿನ್ ಎಂದು ಬರೆಯಲಾಗಿದೆ. ಪಕ್ಷದ ವೆಬ್ ಸೈಟ್ ಹ್ಯಾಕ್ ಮಾಡುವ ಯತ್ನ ನಡೆದಿದೆಯೇ ಎಂಬ ಬಗ್ಗೆ ಪಕ್ಷ ಇನ್ನಷ್ಟೇ   ಪ್ರತಿಕ್ರಿಯಿಸಬೇಕಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News