2020ರ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ: ಹಿಲರಿ

Update: 2019-03-05 17:08 GMT

ವಾಶಿಂಗ್ಟನ್, ಮಾ. 5: 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಕಳೆದ ಬಾರಿ ಡೆಮಾಕ್ರಟಿಕ್ ಪಕ್ಷದಿಂದ ಸ್ಪರ್ಧಿಸಿದ್ದ ಹಿಲರಿ ಕ್ಲಿಂಟನ್ ಹೇಳಿದ್ದಾರೆ. ‘‘ಆದರೆ, ನಾನು ಎಲ್ಲಿಗೂ ಹೋಗುವುದಿಲ್ಲ’’ ಎಂಬುದಾಗಿಯೂ ಹೇಳಿದ್ದಾರೆ.

ಇನ್ನೊಮ್ಮೆ ನಾನು ಸ್ಪರ್ಧಿಸುವುದಿಲ್ಲ ಎಂದು ಮಾಜಿ ವಿದೇಶ ಕಾರ್ಯದರ್ಶಿ, ಮಾಜಿ ಸೆನೆಟರ್ ಹಾಗೂ ಮಾಜಿ ಪ್ರಥಮ ಮಹಿಳೆ ಹಿಲರಿ ‘ನ್ಯೂಸ್ 12’ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದರು. ಸಂದರ್ಶನವು ಸೋಮವಾರ ಪ್ರಕಟಗೊಂಡಿತು.

2016ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಹಿಲರಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಎದುರು ಸೋಲನುಭವಿಸಿದ್ದರು.

‘‘ನಾನು ನಂಬಿರುವ ಸಿದ್ಧಾಂತಗಳಿಗಾಗಿ ನಾನು ಕೆಲಸ ಮಾಡುತ್ತಾ, ಮಾತನಾಡುತ್ತಾ ಹಾಗೂ ಹೋರಾಡುತ್ತಾ ಇರುತ್ತೇನೆ’’ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News