ಸ್ವಚ್ಛತಾ ಸೂಚಿ: 49ನೇ ಸ್ಥಾನಕ್ಕೆ ಕುಸಿದ ಮುಂಬೈ

Update: 2019-03-07 17:58 GMT

ಮುಂಬೈ,ಮಾ.7: ಕೇಂದ್ರ ಸರಕಾರದ ಸ್ವಚ್ಛತಾ ಸಮೀಕ್ಷೆಯಲ್ಲಿ ಮುಂಬೈ 49ನೇ ಸ್ಥಾನಕ್ಕೆ ಕುಸಿದಿದ್ದರೆ ಮಹಾರಾಷ್ಟ್ರದ ನವಿ ಮುಂಬೈ ಮಾತ್ರ ಅಗ್ರ ಹತ್ತರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.

ಬುಧವಾರ ಹೊಸದಿಲ್ಲಿಯಲ್ಲಿ ನಡೆದ ಸ್ವಚ್ಛ ಸರ್ವೇಕ್ಷಣಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಧ್ಯ ಪ್ರದೇಶದ ಇಂದೋರ್ ನಗರ ಸತತ ಮೂರನೇ ವರ್ಷವೂ ಭಾರತದ ಅತ್ಯಂತ ಸ್ವಚ್ಛ ನಗರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರೆ ಭೋಪಾಲ ಅತ್ಯಂತ ಸ್ವಚ್ಛ ರಾಜಧಾನಿ ಪ್ರಶಸ್ತಿಯನ್ನು ಬಾಚಿಕೊಂಡಿದೆ.

ಕೇಂದ್ರ ಗೃಹ ಮತ್ತು ನಗರ ವ್ಯವಹಾರಗಳ ಸಚಿವಾಲಯ ನೀಡುವ ಈ ಪ್ರಶಸ್ತಿಗಳನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ವಿಜೇತರಿಗೆ ಹಸ್ತಾಂತರಿಸಿದರು. ಸಮೀಕ್ಷೆಯ ಪ್ರಕಾರ, 2018ರಲ್ಲಿ 18ನೇ ಸ್ಥಾನದಲ್ಲಿದ್ದ ಮುಂಬೈ ಈ ವರ್ಷ 49ನೇ ಸ್ಥಾನಕ್ಕೆ ಕುಸಿದಿದೆ. ಸಮೀಪದ ಥಾಣೆ ನಗರ ಕೂಡಾ ಕಳೆದ ವರ್ಷದ 40ನೇ ಸ್ಥಾನದಿಂದ 57ನೇ ಸ್ಥಾನಕ್ಕೆ ಕುಸಿದಿದೆ. ಆದರೆ ನವಿ ಮುಂಬೈ ಉತ್ತಮ ನಿರ್ವಹಣೆ ತೋರಿದ್ದು, 2018ರ 9ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಏರಿದೆ. ಮೀರ-ಬಯಂಡರ್ ಪಟ್ಟಣ ಕೂಡಾ ಕಳೆದ ವರ್ಷದ 47ನೇ ಸ್ಥಾನದಿಂದ 27ನೇ ಸ್ಥಾನಕ್ಕೆ ಹಾಗೂ ವಸೈ-ವಿರಾರ್ 2018ರ 61ನೇ ಸ್ಥಾನದಿಂದ 36ನೇ ಸ್ಥಾನಕ್ಕೇರಿ ಅತ್ಯುತ್ತಮ ನಿರ್ವಹಣೆ ತೋರಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News