ಕಾಶ್ಮೀರ: ಉಗ್ರರಿಂದ ಯೋಧನ ಅಪಹರಣ

Update: 2019-03-08 18:22 GMT
ಸಾಂದರ್ಭಿಕ ಚಿತ್ರ

ಶ್ರೀನಗರ, ಮಾ.8: ಜಮ್ಮುಕಾಶ್ಮೀರದ ಬಡ್ಗಾಂವ್‌ನಲ್ಲಿ ಸೇನಾ ಯೋಧನೊಬ್ಬನನ್ನು , ಉಗ್ರರು ಆತನ ಮನೆಯಿಂದ ಶುಕ್ರವಾರ ಸಂಜೆ ಅಪಹರಿಸಿರುವುದಾಗಿ ವರದಿಯಾಗಿದೆ.

ಯೋಧನು ರಜೆಯಲ್ಲಿದ್ದು, ಆತ ಖ್ವಾಝಿಪೊರಾ ಚದೂರಾದಲ್ಲಿರುವ ತನ್ನ ನಿವಾಸಕ್ಕೆ ಆಗಮಿಸಿದ್ದನೆಂದು ಪೊಲೀಸರು ತಿಳಿಸಿದ್ದಾರೆ.ಅಪಹೃತ ಯೋಧನನ್ನು ಮುಹಮ್ಮದ್ ಯಾಸೀನ್ ಭಟ್ಟ್ ಎಂದು ಗುರುತಿಸಲಾಗಿದೆ.

ಮುಹಮ್ಮದ್ ಯಾಸೀನ್, ಖ್ವಾಝಿಪೊರಾದಲ್ಲಿರುವ ತನ್ನ ನಿವಾಸದಲ್ದಿಾಗ ಕೆಲವು ಅಪರಿಚಿತ ಬಂಧೂಕುದಾರಿಗಳು ಆತನನ್ನು ಅಪಹರಿಸಿದ್ದಾರೆ ಯೋಧನ ಅಪಹರಣದ ಸುದ್ದಿ ತಿಳಿಯುತ್ತಿದ್ದಂತೆಯೇ ಸೇನಾ ಸಿಬ್ಬಂದಿ ಹಾಗೂ ಪೊಲೀಸರ ಜಂಟಿ ತಂಡವೊಂದನ್ನು ಪೊಲೀಸರು ಗ್ರಾಮಕ್ಕೆ ರವಾನಿಸಿದ್ದು, ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆಯೆಂದು ಮೂಲಗಳು ತಿಳಿಸಿವೆ.

ಮುಹಮ್ಮದ್ ಫೆಬ್ರವರಿ 26ರಿಂದ ಮಾರ್ಚ್ 30ರವರೆಗೆ ರಜೆಯಲ್ಲಿರುವುದಾಗಿ ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News