×
Ad

ವಾರ್ಷಿಕ ಉತ್ಸವಕ್ಕೆ ತೆರೆಯಲಿರುವ ಶಬರಿಮಲೆ ದೇಗುಲ

Update: 2019-03-10 21:28 IST

ತಿರುವನಂತಪುರಂ,ಮಾ.10: ಹತ್ತು ದಿನಗಳ ವಾರ್ಷಿಕ ಉತ್ಸವದ ಅಂಗವಾಗಿ ಮಾರ್ಚ್ 11ರಿಂದ ಶಬರಿಮಲೆ ದೇಗುಲ ಮುಖ್ಯ ಅರ್ಚಕ ಕಂಡರರು ರಾಜೀವರು ಅವರ ನೇತೃತ್ವದಲ್ಲಿ ಭಕ್ತರಿಗೆ ತೆರೆದುಕೊಳ್ಳಲಿದೆ ಎಂದು ಟ್ರಾವಂಕೋರ್ ದೇವಸ್ವಂ ಮಂಡಳಿ (ಟಿಡಿಬಿ) ಪ್ರಕಟನೆಯಲ್ಲಿ ತಿಳಿಸಿದೆ.

ವಾರ್ಷಿಕ ಉತ್ಸವ ಮಾರ್ಚ್ 21ರಂದು ಕೊನೆಯಾಗಲಿದೆ. ವಾರ್ಷಿಕ ಉತ್ಸವದ ಸಂದರ್ಭದಲ್ಲಿ ದೇಗುಲದ ಗರ್ಭಗುಡಿಗೆ ನೂತನ ಚಿನ್ನಲೇಪಿತ ದ್ವಾರವನ್ನು ಅಳವಡಿಸಲಾಗುವುದು. ಬಾಗಿಲು ಬಿರುಕು ಬಿಟ್ಟಿದ್ದು ಅದನ್ನು ತೇಗದ ಮರದಿಂದ ಮಾಡಿರುವ ಹಾಗೂ ನಾಲ್ಕು ಕಿ.ಗ್ರಾಂ ಚಿನ್ನ ಲೇಪಿಸಿರುವ ನೂತನ ಬಾಗಿಲಿನಿಂದ ಬದಲಾಯಿಸಲಾಗುವುದು ಎಂದು ಮಂಡಳಿ ತಿಳಿಸಿದೆ. ಸದ್ಯ ದೇಗುಲಕ್ಕೆ ನೀಡಲಾಗುತ್ತಿರುವ ಚಿನ್ನಲೇಪಿತ ಬಾಗಿಲಿಗೆ ಭವಿಷ್ಯದಲ್ಲಿ ಹಾನಿಯಾದರೆ ಅದಕ್ಕೆ ಅಳವಡಿಸಿರುವ ಚಿನ್ನದ ಹೊದಿಕೆಯನ್ನು ಸಂಪೂರ್ಣವಾಗಿ ತೆಗೆಯಬಹುದಾಗಿದೆ ಎಂದು ಮಂಡಳಿ ತಿಳಿಸಿದೆ. ಉಣ್ಣಿ ನಂಬೂದಿರಿ ಎಂಬವರ ನೇತೃತ್ವದ ಭಕ್ತರ ಗುಂಪು ನೂತನ ಬಾಗಿಲಿನ ವೆಚ್ಚವನ್ನು ಭರಿಸಿದ್ದಾರೆ ಎಂದು ಟಿಡಿಬಿ ಅಧ್ಯಕ್ಷ ಎ.ಪದ್ಮಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News