×
Ad

ಇಥಿಯೋಪಿಯನ್ ವಿಮಾನ ಪತನ: ಮೃತರಲ್ಲಿ ನಾಲ್ವರು ಭಾರತೀಯರು

Update: 2019-03-10 23:45 IST

ಅಡಿಸ್ ಅಬಾಬ, ಮಾ. 10: ಇಥಿಯೋಪಿಯ ರಾಜಧಾನಿ ಅಡಿಸ್ ಅಬಾಬದಿಂದ ಕೆನ್ಯ ರಾಜಧಾನಿ ನೈರೋಬಿಗೆ ಹೋಗುತ್ತಿದ್ದ ಇಥಿಯೋಪಿಯನ್ ಏರ್‌ಲೈನ್ಸ್‌ಗೆ ಸೇರಿದ ವಿಮಾನವೊಂದು ರವಿವಾರ ಬೆಳಗ್ಗೆ ಪತನಗೊಂಡಿದ್ದು, ವಿಮಾನದಲ್ಲಿದ್ದ ನಾಲ್ವರು ಭಾರತೀಯರು ಸೇರಿ ಎಲ್ಲ 157 ಮಂದಿ ಮೃತಪಟ್ಟಿದ್ದಾರೆ.

ಇಥಿಯೋಪಿಯದ ರಾಜಧಾನಿ ಅಡಿಸ್ ಅಬಾಬದಿಂದ ಕೆನ್ಯ ರಾಜಧಾನಿ ನೈರೋಬಿಗೆ ಹೋಗುತ್ತಿದ್ದ ಇಥಿಯೋಪಿಯ ಏರ್‌ಲೈನ್ಸ್ ವಿಮಾನದಲ್ಲಿ ನಾಲ್ವರು ಭಾರತೀಯರು ಪ್ರಯಾಣಿಸುತ್ತಿದ್ದರು.

ವಿಮಾನದಲ್ಲಿದ್ದ 157 ಮಂದಿಯ ಪೈಕಿ ಯಾರೂ ಬದುಕುಳಿದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ವಿಮಾನದಲ್ಲಿ ಕೆನ್ಯದ 32, ಕೆನಡದ 18 ಮತ್ತು ಇಥಿಯೋಪಿಯದ 9 ಮಂದಿ ಪ್ರಯಾಣಿಸುತ್ತಿದ್ದರು. ಇಟಲಿ, ಚೀನಾ ಮತ್ತು ಅಮೆರಿಕದ ತಲಾ 8 ಪ್ರಜೆಗಳು ನತದೃಷ್ಟ ವಿಮಾನದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News