×
Ad

ಭಾರತದ ಸೇನೆಯ ಚಲನವಲನಗಳ ಮಾಹಿತಿ ರವಾನಿಸುತ್ತಿದ್ದ ಪಾಕ್ ಗೂಢಚಾರನ ಬಂಧನ

Update: 2019-03-13 10:43 IST

ಜೈಪುರ, ಮಾ.13: ಭಾರತದ ಗಡಿಯಲ್ಲಿ ಭಾರತದ ಸೈನ್ಯದ  ಚಲನವಲನಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದ ಪಾಕಿಸ್ತಾನದ ಗೂಢಚಾರನನ್ನು ಭಾರತದ ಸೇನೆ ಸೆರೆ ಹಿಡಿದಿದೆ.

ಭಾರತ-ಪಾಕಿಸ್ತಾನ ಗಡಿಯಲ್ಲಿರುವ ರಾಜಸ್ತಾನದ ಜೈಸಲ್ಮೆರ್ ಜಿಲ್ಲೆಯ ಸ್ಯಾಮ್ ಪ್ರದೇಶದ ನಿವಾಸಿ  36ರ ಹರೆಯದ ನವಾಬ್ ಖಾನ್ ಎಂಬಾತನ್ನು ರವಿವಾರ ಭಾರತೀಯ ಸೇನೆ ವಶಕ್ಕೆ ತೆಗೆದುಕೊಂಡಿತ್ತು. ಜೀಪು ಚಾಲಕನಾಗಿ ಕೆಲಸ ಮಾಡುತ್ತಿದ್ದ ನವಾಬ್ ಖಾನ್ ಪಾಕಿಸ್ತಾನದ ಗೂಢಚಾರನಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಂದು ತನಿಖೆಯಿಂದ ಬೆಳಕಿಗೆ ಬಂದಿದೆ.

ನವಾಬ್ ಖಾನ್ ಭಾರತದ ಸೇನೆಯ ಮಾಹಿತಿಯನ್ನು ಕಲೆ ಹಾಕಿ ಪಾಕಿಸ್ತಾನಕ್ಕೆ ವ್ಯಾಟ್ಸಾಪ್ ನಲ್ಲಿ ಸಂಕೇತ ಭಾಷೆಯಲ್ಲಿ  ಕಳುಹಿಸುತ್ತಿದ್ದ  ಎಂದು ತಿಳಿದು ಬಂದಿದೆ ಎಂದು ಗುಪ್ತಚರ ವಿಭಾಗದ ಎಡಿಜಿ ಉಮೇಶ್ ಮಿಶ್ರಾ ತಿಳಿಸಿದ್ದಾರೆ.

ಖಾನ್ ಕಳೆದ ವರ್ಷ ಪಾಕಿಸ್ತಾನಕ್ಕೆ ತೆರಳಿ  ಐಎಸ್ ಐನಿಂದ ತರಬೇತಿ ಪಡೆದಿದ್ದನು. ಈತನಿಗೆ ಪಾಕಿಸ್ತಾನದ ಐಎಸ್ ಐ ಭಾರತದ ಸೇನೆಯ ಚಲನವಲನಗಳ  ಮಾಹಿತಿಯನ್ನು ಸಂಗ್ರಹಿಸಿ ರವಾನಿಸುವ ಜವಾಬ್ದಾರಿಯನ್ನು ನೀಡಿತ್ತು . ಇದಕ್ಕಾಗಿ ಈತ ಪಾಕಿಸ್ತಾನದಿಂದ  ಹಣ ಪಡೆಯುತ್ತಿದ್ದ ಎಂಬ ವಿಚಾರ  ತನಿಖೆಯಿಂದ ಗೊತ್ತಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News