2002ರಿಂದ ಈ ವಿದ್ಯಾರ್ಥಿ ಶಾಲೆ, ಕಾಲೇಜಿಗೆ ಒಂದು ದಿನವೂ ಗೈರು ಹಾಜರಾಗಿಲ್ಲ!

Update: 2019-03-13 08:16 GMT

ಚೆನ್ನೈ, ಮಾ.13: ನಾವೆಲ್ಲರೂ ಶಾಲೆ ಅಥವಾ ಕಾಲೇಜಿಗೆ ಹೋಗುತ್ತಿರುವಾಗ ಹಲವಾರು ಕಾರಣಗಳಿಗಾಗಿ ಕೆಲವೊಮ್ಮೆ ತರಗತಿಗಳನ್ನು ತಪ್ಪಿಸಿಕೊಳ್ಳುತ್ತೇವೆ. ಕೆಲವೊಮ್ಮೆ ಅಸೌಖ್ಯದಿಂದಾಗಿ, ಅಥವಾ ಸಮಾರಂಭಕ್ಕೆ ತೆರಳಲು ಶಾಲೆಗೆ ಗೈರಾದರೆ ಇನ್ನು ಕೆಲವೊಮ್ಮೆ ಹಾಗೆಯೇ ಸುಮ್ಮನೆ ಕ್ಲಾಸ್ ಬಂಕ್ ಮಾಡಿರಬಹುದಲ್ಲವೇ?...

ಆದರೆ ಇಲ್ಲೊಬ್ಬ ವಿದ್ಯಾರ್ಥಿ ಕಳೆದ 17 ವರ್ಷಗಳಲ್ಲಿ ಒಂದೇ ಒಂದು ಬಾರಿ ತರಗತಿಗೆ ಗೈರು ಹಾಜರಾಗಿಲ್ಲ ಎಂದರೆ ನಿಜವಾಗಿಯೂ ಅಚ್ಚರಿಯಾಗುವುದಿಲ್ಲವೇ?... ಹೌದು ಚೆನ್ನೈ ನಿವಾಸಿ ಜಿ ವಿ ವಿನೋತ್ ಕುಮಾರ್ 17 ವರ್ಷಗಳಿಂದ ಒಂದು ಬಾರಿಯೂ ತರಗತಿಗೆ ಗೈರಾಗಿಲ್ಲ.

ಶೇ. 100ರಷ್ಟು ಹಾಜರಾತಿ ದಾಖಲಿಸಿದ್ದಕ್ಕೆ 12ನೇ ತರಗತಿ ಶಿಕ್ಷಣ ಮುಗಿಸಿದಾಗ ಶಾಲೆಯಿಂದ ಪ್ರಮಾಣ ಪತ್ರ ದೊರೆತಾಗ ಅತೀವ ಖುಷಿ ಪಟ್ಟ ಕುಮಾರ್  ಇದೇ ರೀತಿ ಮುಂದುವರಿಸಿಕೊಂಡು ಹೋಗಿ ವಿಶ್ವ ದಾಖಲೆ ಸೃಷ್ಟಿಸಲು ನಿರ್ಧರಿಸಿದ. ಅಸೌಖ್ಯದಿಂದಿರುವಾಗಲೂ  ಕಾಲೇಜು ತಪ್ಪಿಸದೇ ಇದ್ದ ಆತ ಹಲವಾರು ಸಮಸ್ಯೆಗಳಿದ್ದರೂ ಕಾಲೇಜಿಗೆ ಹಾಜರಾಗಿದ್ದ.

“ನನ್ನ ಈ ಸಾಧನೆಗೆ ನನ್ನ ಹೆತ್ತವರ ಪ್ರೋತ್ಸಾಹ ಕಾರಣ. ಸ್ವತಃ ಶಿಕ್ಷಕರಾಗಿರುವ ನನ್ನ ತಂದೆ ಪ್ರತಿ ದಿನ ತಪ್ಪದೇ ನನ್ನನ್ನು ಶಾಲೆಗೆ ಬಿಡುತ್ತಿದ್ದರು'' ಎಂದು ಕುಮಾರ್ ಹೇಳುತ್ತಾನೆ. ವಿಶ್ವ ದಾಖಲೆ ಸೃಷ್ಟಿಸುವ ಸಲುವಾಗಿ ಸತತ 19 ವರ್ಷ ಶೇ 100 ಹಾಜರಾತಿ ದಾಖಲಿಸುವ ಉದ್ದೇಶ ಆತನದ್ದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News