ಭಾರತ ತಂಡದ ಮಾಜಿ ವೇಗಿ ವಿಆರ್‌ವಿ ಸಿಂಗ್ ನಿವೃತ್ತಿ

Update: 2019-03-14 03:40 GMT

ಚಂಡಿಗಡ, ಮಾ.13: ತಮ್ಮ ಗಾಯಪೀಡಿತ ಕ್ರಿಕೆಟ್ ವೃತ್ತಿಜೀವನಕ್ಕೆ ತೆರೆ ಎಳೆದಿರುವ ಭಾರತ ಕ್ರಿಕೆಟ್ ತಂಡದ ಮಾಜಿ ಹಾಗೂ ಪಂಜಾಬ್ ತಂಡದ ಹಾಲಿ ವೇಗಿ ವಿಆರ್‌ವಿ ಸಿಂಗ್ ಬುಧವಾರ ಎಲ್ಲ ಬಗೆಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ.

ಚಂಡಿಗಡ ಸಂಜಾತ ಆಟಗಾರ 2000ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸೈಂಟ್ ಜಾನ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ಆ ಬಳಿಕ 4 ಟೆಸ್ಟ್‌ನಲ್ಲಿ ಕಾಣಿಸಿಕೊಂಡಿದ್ದ ಅವರಿಗೆ 2007ರಲ್ಲಿ ಬಾಂಗ್ಲಾ ವಿರುದ್ಧ ನಡೆದ ಪಂದ್ಯವೇ ರಾಷ್ಟ್ರೀಯ ತಂಡದ ಪರ ಆಡಿದ ಕೊನೆಯ ಟೆಸ್ಟ್ ಆಗಿತ್ತು. ಟೆಸ್ಟ್‌ನಲ್ಲಿ ಕೇವಲ 8 ವಿಕೆಟ್‌ಗಳನ್ನು ಅವರು ಗಳಿಸಿದ್ದಾರೆ.

ಎರಡು ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ವಿಆರ್‌ವಿ ಯಾವುದೇ ವಿಕೆಟ್‌ಗಳನ್ನು ಗಳಿಸಿಲ್ಲ. 1984, ಸೆ.17ರಂದು ಜನಿಸಿರುವ ಸಿಂಗ್, ಸ್ಥಳೀಯ ಕ್ರಿಕೆಟ್ ವೃತ್ತಿಜೀವನದುದ್ದಕ್ಕೂ ಪಂಜಾಬ್ ತಂಡವನ್ನು ಬಿಟ್ಟು ಕದಲಿಲ್ಲ. ಅವರು 2003ರಲ್ಲಿ ಲಾಹೋರ್‌ನಲ್ಲಿ ನಡೆದ ಏಶ್ಯಕಪ್‌ನ್ನು ಜಯಿಸಿದ ಭಾರತ ಅಂಡರ್-19 ತಂಡದ ಸದಸ್ಯರಾಗಿದ್ದಾರೆ.

ಜ.2003-2004 ಸಾಲಿನಲ್ಲಿ ಹಿಮಾಚಲ ಪ್ರದೇಶ ತಂಡದ ವಿರುದ್ಧ ಆಡುವ ಮೂಲಕ ಲಿಸ್ಟ್ ಎ ಕ್ರಿಕೆಟ್‌ಗೆ ಅವರು ಪಾದಾರ್ಪಣೆ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News