ಸ್ಯಾಫ್ ಮಹಿಳಾ ಫುಟ್ಬಾಲ್ ಭಾರತದ ಶುಭಾರಂಭ

Update: 2019-03-14 03:42 GMT

ಬೀರತ್‌ನಗರ (ನೇಪಾಳ), ಮಾ.13: ಸ್ಯಾಫ್ ಮಹಿಳಾ ಫುಟ್ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಹಾಲಿ ಚಾಂಪಿಯನ್ ಭಾರತ ತಂಡ ಮಾಲ್ಡೀವ್ಸ್ ತಂಡವನ್ನು 6-0 ಗೋಲುಗಳ ಅಂತರದಿಂದ ಸೋಲಿಸಿ ಶುಭಾರಂಭ ಮಾಡಿದೆ.

ಇಲ್ಲಿನ ರಂಗಶಾಲಾ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಭಾರತದ ಪರ ಡ್ಯಾಂಗ್ಮೆ ಗ್ರೇಸ್, ಸಂಧ್ಯಾ ರಂಗನಾಥನ್, ಸಂಜು, ಇಂದುಮತಿ ಕದಿರೆಸಾನ್ ಹಾಗೂ ರತನ್‌ಬಾಲಾ ಗೋಲುಗಳನ್ನು ಬಾರಿಸಿ ಮಿಂಚಿದರು.

 ಆರಂಭದಿಂದಲೇ ಬಿರುಸಿನ ಆಟಕ್ಕೆ ಇಳಿದ ಭಾರತಕ್ಕೆ 8ನೇ ನಿಮಿಷದಲ್ಲೇ ಡ್ಯಾಂಗ್ಮೆ ಗ್ರೇಸ್ ಮೊದಲ ಗೋಲಿನ ಸಿಹಿ ತಂದರು. 13ನೇ ನಿಮಿಷದಲ್ಲಿ ಸಂಧ್ಯಾ ರಂಗನಾಥನ್ ಮೂಲಕ ಮತ್ತೊಂದು ಗೋಲು ಬಂದಿತು. ಕೋಚ್ ಮಾಯ್ಮೋಲ್ ರಾಕಿ ನೇತೃತ್ವದ ತಂಡ ತನ್ನ ಪಾರಮ್ಯವನ್ನು ಮುಂದುವರಿಸಿತು. ಇಂದುಮತಿ ಕದಿರೆಸಾನ್ 22ನೇ ನಿಮಿಷದಲ್ಲಿ ಮೂರನೇ ಗೋಲು ಬಾರಿಸಿದರು. ಅದಾದ 4 ನಿಮಿಷಗಳ ಬಳಿಕ ಸಂಜು ಪ್ರಾಬಲ್ಯ ಮರೆದು 4ನೇ ಗೋಲು ತಂದರು. ಮಾಲ್ಡೀವ್ಸ್ ತಂಡದ ಗೋಲ್‌ಕೀಪರ್ ಎಷ್ಟೇ ಪ್ರಯತ್ನಪಟ್ಟರೂ ಭಾರತ ತಂಡದ ಆಕ್ರಮಣವನ್ನು ತಡೆಯಲಾಗಲಿಲ್ಲ. ರತನ್‌ಬಾಲಾ ದೇವಿ ಭಾರತಕ್ಕೆ 5ನೇ ಗೋಲು ತಂದರು. ಆ ಬಳಿಕ ಸಂಜು ಮೂಲಕ ಭಾರತಕ್ಕೆ ಮತ್ತೊಂದು ಗೋಲು ಬಂದಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News