ಟ್ವಿಟರ್ ನಲ್ಲಿ ಟ್ರೆಂಡಿಂಗ್ ಆದ #BoycottChineseProducts ಹ್ಯಾಶ್ ಟ್ಯಾಗ್

Update: 2019-03-14 12:49 GMT

ಹೊಸದಿಲ್ಲಿ : ಜೈಶೆ ಮುಹಮ್ಮದ್ ಮುಖ್ಯಸ್ಥ ಉಗ್ರ ಮಸೂದ್ ಅಝರ್ ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸುವ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಯತ್ನಕ್ಕೆ ಚೀನಾ ಅಡ್ಡಗಾಲಿಕ್ಕಿರುವುದು ಟ್ವಿಟ್ಟರಿಗರ ಆಕ್ರೋಶಕ್ಕೆ ಕಾರಣವಾಗಿದ್ದು ಭಾರತೀಯರು ಮೇಡ್ ಇನ್ ಚೈನಾ ಉತ್ಪನ್ನಗಳನ್ನು ಬಹಿಷ್ಕರಿಸಬೇಕೆಂದು ಹಲವರು ಕರೆ ನೀಡಿದ್ದಾರೆ. ಟ್ವಿಟರ್ ನಲ್ಲಿ ಇಂದು #BoycottChineseProducts (ಚೀನಾ ವಸ್ತುಗಳನ್ನು ಬಹಿಷ್ಕರಿಸಿ) ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದೆ.

ಯೋಗ ಗುರು ಬಾಬಾ ರಾಮದೇವ್ ಕೂಡ ಚೀನೀ ಉತ್ಪನ್ನಗಳ ಬಹಿಷ್ಕಾರಕ್ಕೆ ಕರೆ ನೀಡಿದ್ದಾರೆ. “ಚೀನಾಗೆ ಕೇವಲ ವ್ಯಾಪಾರದ ಭಾಷೆ ಮಾತ್ರ ತಿಳಿದಿದೆ. ಆರ್ಥಿಕ ಬಹಿಷ್ಕಾರ ಯುದ್ಧಕ್ಕಿಂತ ಬಲಿಷ್ಟ'' ಎಂದು ರಾಮದೇವ್ ಟ್ವೀಟ್ ಮಾಡಿದ್ದಾರೆ.

ಒಬ್ಬ ಟ್ವಿಟರಿಗ ತಾವು ಇನ್ನು ಮುಂದೆ ಚೀನೀ ಉತ್ಪನ್ನಗಳನ್ನು ಖರೀದಿಸುವುದಿಲ್ಲ ಎಂದು ಪಣ ತೊಟ್ಟರೆ ಇನ್ನೊಬ್ಬರು ತಾವು ಚೀನೀ ಆ್ಯಪ್ ಟಿಕ್ ಟಾಕ್ ಅನ್ ಇನ್‍ಸ್ಟಾಲ್ ಮಾಡಿದ್ದಾಗಿ ಹೇಳಿದ್ದಾರೆ.

ಈ ಟ್ರೆಂಡ್ ಗೆ ಆಕ್ಷೇಪ ವ್ಯಕ್ತಪಡಿಸಿದ ಟ್ವಿಟರಿಗರೊಬ್ಬರು "ಪ್ರಧಾನಿಯ ವೈಫಲ್ಯಗಳ ಬಗ್ಗೆ ಒಂದೇ ಒಂದು ಪ್ರಶ್ನೆ ಕೇಳಲು ಧೈರ್ಯವಿಲ್ಲದವರು ಚೀನೀ ನಿರ್ಮಿತ ಫೋನುಗಳನ್ನು ಬಳಸಿಕೊಂಡು ಚೀನೀ ಉತ್ಪನ್ನಗಳನ್ನು ಬಹಿಷ್ಕರಿಸಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಕರೆ ನೀಡುತ್ತಿದ್ದಾರೆ,'' ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News