ಅಮೆರಿಕದಲ್ಲಿ ಹಿಮಬಿರುಗಾಳಿ: 1,300 ವಿಮಾನಯಾನ ರದ್ದು

Update: 2019-03-14 15:48 GMT

ಡೆನ್ವರ್ (ಅಮೆರಿಕ), ಮಾ. 14: ಚಳಿಗಾಲದ ಕೊನೆ ಹಂತದ ಹಿಮಬಿರುಗಾಳಿ ಬುಧವಾರ ಅಮೆರಿಕದ ಗುಡ್ಡಗಾಡು ಮತ್ತು ಬಯಲುಪ್ರದೇಶ ರಾಜ್ಯಗಳಿಗೆ ಅಪ್ಪಳಿಸಿದೆ. ರಸ್ತೆಗಳಲ್ಲಿ ಹಿಮ ಶೇಖರಣೆಯಾಗಿದ್ದು, ವಾಹನಗಳು ಸ್ಥಗಿತಗೊಂಡಿವೆ ಹಾಗೂ 1,300ಕ್ಕೂ ಅಧಿಕ ವಿಮಾನಯಾನಗಳನ್ನು ರದ್ದುಗೊಳಿಸಲಾಗಿದೆ.

ಹಿಮಬಿರುಗಾಳಿಯ ಹಿನ್ನೆಲೆಯಲ್ಲಿ, ಕೊಲರಾಡೊ ಗವರ್ನರ್ ಜಾನ್ ಹಿಕನ್‌ಲೂಪರ್, ರಾಜ್ಯದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. ಶೋಧ ಮತ್ತು ರಕ್ಷಣಾ ಕಾರ್ಯದಲ್ಲಿ ನೆರವು ನೀಡುವುದಕ್ಕಾಗಿ ಸ್ಟೇಟ್ ನ್ಯಾಶನಲ್ ಗಾರ್ಡ್ ಪಡೆಗಳನ್ನು ನಿಯೋಜಿಸಿದ್ದಾರೆ.

ಕೊಲರಾಡೊ, ವ್ಯೋಮಿಂಗ್, ನೆಬ್ರಾಸ್ಕ ಮತ್ತು ಡಕೋಟ ರಾಜ್ಯಗಳ ಹಲವು ಭಾಗಗಳಿಗೆ ರಾಷ್ಟ್ರೀಯ ಹವಾಮಾನ ಕೇಂದ್ರ ಹಿಮಬಿರುಗಾಳಿಯ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಶಾಲೆಗಳು ಮತ್ತು ಅಂಗಡಿಗಳನ್ನು ಮುಚ್ಚಲಾಗಿದೆ.

ಮನೆಯಿಂದ ಹೊರಗೆ ಬಾರದಂತೆ ಅಧಿಕಾರಿಗಳು ಜನರಿಗೆ ಸೂಚನೆ ನೀಡಿದ್ದಾರೆ.

ಈ ಹಿಮಬಿರುಗಾಳಿಗೆ ಹವಾಮಾನ ಅಧಿಕಾರಿಗಳು ‘ಬಾಂಬ್ ಚಂಡಮಾರುತ’ ಎಂಬ ಹೆಸರಿಟ್ಟಿದ್ದಾರೆ. ವಾತಾವರಣದ ಒತ್ತಡ 24 ಗಂಟೆಗಳಲ್ಲಿ 24 ಮಿಲಿಬಾರ್‌ಗಳಷ್ಟು ಕಡಿಮೆಯಾದಾಗ ಈ ಹವಾಮಾನ ಪರಿಸ್ಥಿತಿ ಉಂಟಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News