‘ಕೂಲಂಕಷ ಅಧ್ಯಯನ’ಕ್ಕೆ ಹೆಚ್ಚಿನ ಸಮಯ ಬೇಕು: ಚೀನಾ

Update: 2019-03-14 16:24 GMT

ಬೀಜಿಂಗ್, ಮಾ. 14: ಜೈಶೆ ಮುಹಮ್ಮದ್ ಭಯೋತ್ಪಾದಕ ಸಂಘಟನೆಯ ಸ್ಥಾಪಕ ಮಸೂದ್ ಅಝರ್‌ನನ್ನು ವಿಶ್ವಸಂಸ್ಥೆಯ ಭಯೋತ್ಪಾದಕರ ಪಟ್ಟಿಗೆ ಸೇರಿಸುವ ವಿಷಯವನ್ನು ‘ಅಧ್ಯಯನ’ ಮಾಡಲು ತನಗೆ ಹೆಚ್ಚಿನ ಸಮಯ ಬೇಕು, ಹಾಗಾಗಿ, ಈ ಕುರಿತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಕ್ಕೆ ತಡೆ ಚಲಾಯಿಸಿರುವುದಾಗಿ ಚೀನಾ ಗುರುವಾರ ಹೇಳಿದೆ.

ಆದಾಗ್ಯೂ, ಭಾರತದೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸುವಲ್ಲಿ ಪ್ರಾಮಾಣಿಕ ಮನೋಭಾವವನ್ನು ಹೊಂದಿದ್ದೇನೆ ಎಂಬುದಾಗಿಯೂ ಅದು ಹೇಳಿದೆ.

‘‘ವಿಶ್ವಸಂಸ್ಥೆಯ ದಿಗ್ಬಂಧನಗಳ ಸಮಿತಿಗೆ ಸಲ್ಲಿಸಲಾಗುವ ಅರ್ಜಿಗಳ ಬಗ್ಗೆ ಚೀನಾ ಯಾವಾಗಲೂ ಆಳವಾದ ಅಧ್ಯಯನ ಮಾಡುತ್ತದೆ’’ ಎಂದು ಚೀನಾ ವಿದೇಶ ಸಚಿವಾಲಯದ ವಕ್ತಾರ ಲು ಕಾಂಗ್ ನುಡಿದರು.

ಅಮೆರಿಕ, ಫ್ರಾನ್ಸ್ ಮತ್ತು ಬ್ರಿಟನ್ ಮಂಡಿಸಿರುವ ನಿರ್ಣಯಕ್ಕೆ ತಡೆ ಹಾಕಲು ಕಾರಣವೇನು ಎಂಬ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸುತ್ತಿದ್ದರು.

‘‘ಈ ವಿಷಯವನ್ನು ಸೂಕ್ತವಾಗಿ ನಿಭಾಯಿಸುವ ನಿಟ್ಟಿನಲ್ಲಿ ಚೀನಾವು ರಚನಾತ್ಮಕ ಹಾಗೂ ಜವಾಬ್ದಾರಿಯುತ ಧೋರಣೆಯನ್ನು ಅನುಸರಿಸುವುದನ್ನು ಮುಂದುವರಿಸುತ್ತದೆ ಹಾಗೂ ಸಂಬಂಧಪಟ್ಟ ಎಲ್ಲ ಪಕ್ಷಗಳೊಂದಿಗೆ ಸಂವಹನ ಹಾಗೂ ಸಮನ್ವಯ ನಡೆಸುತ್ತದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News