ಫಲಿತಾಂಶ ಘೋಷಣೆಯ ಮೊದಲು ವಿವಿಪ್ಯಾಟ್ ಪರಿಶೀಲನೆ: ವಿಪಕ್ಷಗಳಿಂದ ಸುಪ್ರೀಂಗೆ ಮನವಿ

Update: 2019-03-14 17:14 GMT

x ಹೊಸದಿಲ್ಲಿ, ಮಾ.14: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಫಲಿತಾಂಶ ಘೋಷಿಸುವ ಮೊದಲು ಶೇ.50ರಷ್ಟು ಮತಗಳನ್ನು ವಿವಿಪ್ಯಾಟ್ ಜೊತೆ ಪರಿಶೀಲಿಸಿ ನೋಡಬೇಕು ಎಂದು 21 ವಿರೋಧ ಪಕ್ಷಗಳು ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ಶುಕ್ರವಾರ ವಿಚಾರಣೆ ನಡೆಸಲಿದೆ.

ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ನೇತೃತ್ವದಲ್ಲಿ ವಿಪಕ್ಷಗಳ ಅರ್ಜಿ ಸಲ್ಲಿಕೆಯಾಗಿದೆ. ಕಳೆದ ತಿಂಗಳು 21 ವಿಪಕ್ಷಗಳು ಚುನಾವಣಾ ಆಯೋಗವನ್ನು ಭೇಟಿ ಮಾಡಿ ಇವಿಎಂಗಳಲ್ಲಿ ಹಸ್ತಕ್ಷೇಪದ ಸಾಧ್ಯತೆಯ ಬಗ್ಗೆ ದೂರು ನೀಡಿದ್ದರು. ಚಲಾವಣೆಯಾಗಿರುವ ಮತಗಳಲ್ಲಿ ಶೇ.50ರಷ್ಟನ್ನು ಇವಿಎಂಗಳ ಮೂಲಕ ಎಣಿಕೆ ಮಾಡಬೇಕು ಹಾಗೂ ಉಳಿದ ಮತಗಳನ್ನು ವಿವಿ ಪ್ಯಾಟ್‌ಗಳ ಮೂಲಕ ನಡೆಸಬೇಕು. ಚುನಾವಣೆಯ ಫಲಿತಾಂಶ ಘೋಷಿಸುವ ಮುನ್ನ ಎರಡೂ ಎಣಿಕೆಯ ಫಲಿತಾಂಶವನ್ನು ಹೋಲಿಸಿ ನೀಡಬೇಕು ಎಂದು ವಿಪಕ್ಷಗಳು ಒತ್ತಾಯಿಸಿವೆ.

ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಮತದಾನ ಕೇಂದ್ರಗಳಲ್ಲೂ ಇವಿಎಂ (ವಿದ್ಯುನ್ಮಾನ ಮತಯಂತ್ರ) ಜೊತೆಗೆ ವಿವಿಪ್ಯಾಟ್ ಬಳಸಲಾಗುತ್ತದೆ ಎಂದು ಚುನಾವಣಾ ಆಯೋಗ ಘೋಷಿಸಿದೆ. ಆಯ್ದ ಮತದಾನ ಕೇಂದ್ರಗಳಲ್ಲಿ ಇವಿಎಂ ಹಾಗೂ ವಿವಿಪ್ಯಾಟ್‌ಗಳ ದಾಖಲೆಯನ್ನು ತುಲನೆ ಮಾಡಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News