ಫಿಫಾದ ‘ಕ್ಲಬ್‌ ವಿಶ್ವಕಪ್‌’ ಪ್ರಸ್ತಾವಕ್ಕೆ ಯುರೋಪಿಯನ್ ಕ್ಲಬ್‌ಗಳ ವಿರೋಧ

Update: 2019-03-15 18:20 GMT

ಮಿಯಾಮಿ, ಮಾ.15: ಫಿಫಾ ಪ್ರಸ್ತಾವಿತ ನೂತನ ಕ್ಲಬ್ ವಿಶ್ವಕಪ್‌ನ್ನು ಬಹಿಷ್ಕರಿಸುವುದಾಗಿ ಯುರೋಪ್‌ನ ಪ್ರಮುಖ ಫುಟ್ಬಾಲ್ ಕ್ಲಬ್‌ಗಳು ತಿಳಿಸಿದ್ದು, ಫಿಫಾ ಅಧ್ಯಕ್ಷ ಜಿಯಾನಿ ಇನ್ಫಾಂಟಿನೊ ಅವರ ಇತ್ತೀಚಿನ ಈ ಚಿಂತನೆ ಯಶಸ್ಸು ಕಾಣುವುದು ಅನುಮಾನವಾಗಿದೆ. ಅಲ್ಲದೆ ಇದು ವಿಶ್ವ ಫುಟ್ಬಾಲ್ ವಿಭಜನೆಗೆ ಕಾರಣವಾಗುವ ಅಪಾಯ ತಂದೊಡ್ಡಿದೆ. ಇನ್ಫಾಂಟಿನೊ ಈ ವಾರದಲ್ಲಿ ಎರಡು ಪ್ರಮುಖ , ಹಣ ಹರಿದಾಡುವ ಪಂದ್ಯಾವಳಿಗಳಿಗೆ ಬೆಂಬಲ ಪಡೆಯುವ ವಿಶ್ವಾಸದಲ್ಲಿದ್ದರು. ಅವೆಂದರೆ 1.ರಾಷ್ಟ್ರೀಯ ತಂಡಗಳಿಗಾಗಿ ವಿಶ್ವವ್ಯಾಪಿ ನೇಶನ್ಸ್ ಲೀಗ್ ಹಾಗೂ 2. 2021ರಲ್ಲಿ ‘ಪೈಲಟ್’ ಆವೃತ್ತಿಯೊಂದಿಗೆ ಆರಂಭವಾಗುವ 24 ತಂಡಗಳ ಕ್ಲಬ್ ವಿಶ್ವಕಪ್.

ಆದಾಗ್ಯೂ ಶುಕ್ರವಾರ ನಡೆದ ಫಿಫಾ ಆಡಳಿತ ಸಮಿತಿ ಸಭೆಯಲ್ಲಿ ನೇಶನ್ಸ್ ಲೀಗ್ ಪ್ರಸ್ತಾವವನ್ನು ಕೈಬಿಟ್ಟಿದ್ದರು. ಏಕೆಂದರೆ ಅಂತರ್‌ರಾಷ್ಟ್ರೀಯ ಫುಟ್ಬಾಲ್ ಕ್ಯಾಲೆಂಡರ್‌ನಲ್ಲಿ ಈ ಟೂರ್ನಿಗೆ ಸಮಯ ಹೊಂದಿಸಲು ಸಾಧ್ಯವಾಗದ್ದು.

ಆದರೆ ಯುರೋಪಿಯನ್ ಕ್ಲಬ್ ಅಸೋಸಿಯೇಶನ್ ಮುಖ್ಯಸ್ಥ ಆ್ಯಂಡ್ರೆ ಆ್ಯಗ್ನೆಲ್ಲಿ, ಜುವೆಂಟಸ್ ತಂಡದ ಮುಖ್ಯಸ್ಥ ಹಾಗೂ ಸಂಸ್ಥೆಯ 15 ಸದಸ್ಯರು ಸಹಿ ಮಾಡಿದ ಪತ್ರವನ್ನು ಯುರೋಪಿಯನ್ ಫುಟ್ಬಾಲ್ ಸಂಸ್ಥೆಗಳ ಒಕ್ಕೂಟ ಹಾಗೂ ಇನ್ಫಾಂಟಿನೊಗೆ ಬರೆದಿದ್ದು ಕ್ಲಬ್ ವಿಶ್ವಕಪ್‌ಗೆ ತಮ್ಮ ಸ್ಪಷ್ಟ ವಿರೋಧವನ್ನು ವ್ಯಕ್ತಪಡಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News