ಪಕ್ಷ ತ್ಯಜಿಸಿದ ಗುಜರಾತ್ ಬಿಜೆಪಿ ನಾಯಕಿ ರೇಷ್ಮಾ ಪಟೇಲ್

Update: 2019-03-16 11:06 GMT

ಅಹ್ಮದಾಬಾದ್, ಮಾ.16: ಬಿಜೆಪಿ ಒಂದು ಮಾರ್ಕೆಟಿಂಗ್ ಕಂಪೆನಿಯಾಗಿದೆ ಹಾಗೂ ಅದರ ಸದಸ್ಯರು ಸೇಲ್ಸ್ ಮ್ಯಾನ್ ಗಳಾಗಿದ್ದಾರೆಂದು ಆರೋಪಿಸಿ ಗುಜರಾತ್ ಬಿಜೆಪಿ ನಾಯಕಿ ರೇಷ್ಮಾ ಪಟೇಲ್ ಶುಕ್ರವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಸ್ವತಂತ್ರ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ ಪೋರ್ ಬಂದರ್ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಅವರು ಘೋಷಿಸಿದ್ದಾರೆ.

ತಾವು ಕಾಂಗ್ರೆಸ್  ಅಥವಾ ಇನ್ಯಾವುದೇ ಪಕ್ಷವನ್ನು ಸೇರುವುದಿಲ್ಲವೆಂದೂ ಅವರು ಹೇಳಿದ್ದಾರೆ. ಹಿಂದೆ ಹಾರ್ದಿಕ್ ಪಟೇಲ್ ನೇತೃತ್ವದ ಪಾಟಿದಾರ್ ಆಂದೋಲನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರೇಷ್ಮಾ ಡಿಸೆಂಬರ್ 2017ರ ವಿಧಾನಸಭಾ ಚುನಾವಣೆಗಿಂತ ಮುನ್ನ ಬಿಜೆಪಿ ಸೇರಿದ್ದರಲ್ಲದೆ ಆಗ ಹಾರ್ದಿಕ್ ಒಬ್ಬ ಕಾಂಗ್ರೆಸ್ ಏಜಂಟ್, ಅವರು ಬಿಜೆಪಿ ಸರಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಈ ಆಂದೋಲನ ನಡೆಸುತ್ತಿದ್ದಾರೆಂದೂ ಆಪಾದಿಸಿದ್ದರು.

ಇದೀಗ ಪಕ್ಷದ ಕಾರ್ಯಕರ್ತರನ್ನು `ಕಾರ್ಮಿಕ'ರಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಅವರು ರಾಜ್ಯ ಬಿಜೆಪಿ ಅಧ್ಯಕ್ಷ ಜಿತು ವಘಾನಿ ಅವರಿಗೆ ಬರೆದಿರುವ ರಾಜೀನಾಮೆ ಪತ್ರದಲ್ಲಿ ಆರೋಪಿಸಿದ್ದಾರೆ. ಬಿಜೆಪಿ ನಾಯಕರು ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ ಹಾಗೂ ಪಕ್ಷದ  ಸುಳ್ಳು ಯೋಜನೆಗಳು ಹಾಗೂ ನೀತಿಗಳನ್ನು ಮಾರ್ಕೆಟಿಂಗ್ ಮಾಡಲು ಸೇಲ್ಸ್ ಮ್ಯಾನ್ ಗಳಂತೆ ಕಾರ್ಯಕರ್ತರನ್ನು ಬಳಸಲಾಗುತ್ತಿದೆ'' ಎಂದು ಅವರು ಪತ್ರದಲ್ಲಿ ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News