ನ್ಯೂಝಿಲ್ಯಾಂಡ್ ಶೂಟೌಟ್: ಟಿವಿ ಚಾನೆಲ್ ಗಳಿಗೆ ಕಾಣದ ಭಯೋತ್ಪಾದನೆ

Update: 2019-03-18 08:06 GMT

ಝೀ ನ್ಯೂಸ್ ಡಿಎನ್‌ಎ ಪ್ರೈಮ್‌ಟೈಮ್ ಶೋದಲ್ಲಿ ಕ್ರೈಸ್ಟ್‌ಚರ್ಚ್ ದಾಳಿಯ ಬಗ್ಗೆ ಚರ್ಚಿಸಿತು ಹಾಗೂ ದಾಳಿಕೋರರು ದಾಖಲಿಸಿದ ವೀಡಿಯೊದ ತುಣುಕೊಂದನ್ನು ಪ್ರಸಾರ ಮಾಡಿತು. ಪ್ರಸಾರ ಮಾಡಲು ಯೋಗ್ಯವಲ್ಲದ ಎಲ್ಲ ಭಾಗವನ್ನು ಸೆನ್ಸಾರ್ ಮಾಡಲಾಗಿದೆ ಎಂದು ಹೇಳಿಕೊಂಡಿತು. ಭಾರತದಲ್ಲೂ ಅಲ್ಪಸಂಖ್ಯಾತರ ಮೇಲಿನ ದಾಳಿ ಘಟನೆಗಳು ಹೆಚ್ಚುತ್ತಿದ್ದರೂ, ಇಸ್ಲಾಮೋಫೋಬಿಯಾದ ಹಾನಿ ಬಗ್ಗೆ ಯಾವ ಮಾಹಿತಿಯೂ ಇರಲಿಲ್ಲ.

ನ್ಯೂಝಿಲ್ಯಾಂಡ್‌ನ ಕ್ರೈಸ್ಟ್‌ಚರ್ಚ್ ನಗರದಲ್ಲಿ ಶುಕ್ರವಾರ ಮುಸ್ಲಿಮರ ಪ್ರಾರ್ಥನೆ ವೇಳೆ ಎರಡು ಮಸೀದಿಗಳಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ 49 ಮಂದಿ ಬಲಿಯಾಗಿದ್ದಾರೆ. ಈ ದಾಳಿಯ ಬಳಿಕ ಒಂಬತ್ತು ಮಂದಿ ಭಾರತೀಯರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಭಾರತದ ಟಿವಿ ಮಾಧ್ಯಮ ಈ ದಾಳಿಯನ್ನು ಹೇಗೆ ವರದಿ ಮಾಡಿತು? ಪ್ರೈಮ್ ಟೈಮ್ ಅವಧಿಯಲ್ಲಿ ಇದಕ್ಕೆ ಮಹತ್ವ ನೀಡಿದೆಯೇ? ಹೆಚ್ಚುತ್ತಿರುವ ಇಸ್ಲಾಮೋಫೋಬಿಯಾ ಮತ್ತು ಬಲಪಂಥೀಯ ಭಯೋತ್ಪಾದನೆಯನ್ನು ಸಮರ್ಪಕವಾಗಿ ಬಿಂಬಿಸಿವೆಯೇ? ವಿವಿಧ ದೇಶಗಳಲ್ಲಿ ನಡೆದ ಇಂಥ ದಾಳಿಗಳ ನಡುವೆ ಸಂಪರ್ಕ ಕಲ್ಪಿಸಿವೆಯೇ?
ಶುಕ್ರವಾರದ ಪ್ರೈಮ್‌ಟೈಮ್ ವೀಕ್ಷಣೆಯಲ್ಲಿ, ವಿವಿಧ ಚಾನಲ್‌ಗಳು ಮುಂಬೈ ಸೇತುವೆ ಕುಸಿತವನ್ನು ಹೇಗೆ ವರದಿ ಮಾಡಿದ್ದವು ಎಂಬ ಬಗ್ಗೆ ಪರಿಶೀಲಿಸಿದ್ದೆವು. ಮರುದಿನ ಈ ವಿಚಾರದ ಫಾಲೊಅಪ್ ಆಗಿದೆಯೇ?
ಹಿಂದಿ ವಾಹಿನಿಗಳು
  ಝೀ ನ್ಯೂಸ್
ಡಿಎನ್‌ಎ ಪ್ರೈಮ್‌ಟೈಮ್ ಶೋದಲ್ಲಿ ಕ್ರೈಸ್ಟ್‌ಚರ್ಚ್ ದಾಳಿಯ ಬಗ್ಗೆ ಚರ್ಚಿಸಿತು ಹಾಗೂ ದಾಳಿಕೋರರು ದಾಖಲಿಸಿದ ವೀಡಿಯೊದ ತುಣುಕೊಂದನ್ನು ಪ್ರಸಾರ ಮಾಡಿತು. ಪ್ರಸಾರ ಮಾಡಲು ಯೋಗ್ಯವಲ್ಲದ ಎಲ್ಲ ಭಾಗವನ್ನು ಸೆನ್ಸಾರ್ ಮಾಡಲಾಗಿದೆ ಎಂದು ಹೇಳಿಕೊಂಡಿತು. ಭಾರತದಲ್ಲೂ ಅಲ್ಪಸಂಖ್ಯಾತರ ಮೇಲಿನ ದಾಳಿ ಘಟನೆಗಳು ಹೆಚ್ಚುತ್ತಿದ್ದರೂ, ಇಸ್ಲಾಮೋಫೋಬಿಯಾದ ಹಾನಿ ಬಗ್ಗೆ ಯಾವ ಮಾಹಿತಿಯೂ ಇರಲಿಲ್ಲ.
ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಕನಿಷ್ಠ ಶೇ.50ರಷ್ಟು ಇವಿಎಂಗಳನ್ನು ವಿವಿಪಿಎಟಿ ಚೀಟಿ ಜತೆಗೆ ತುಲನೆ ಮಾಡುವಂತೆ ಭಾರತದ ಚುನಾವಣಾ ಆಯೋಗಕ್ಕೆ ಸೂಚನೆ ನೀಡುವಂತೆ ಕೋರಿ ವಿರೋಧ ಪಕ್ಷಗಳು ಸಲ್ಲಿಸಿದ ಅರ್ಜಿಯ ಸಂಬಂಧ ಸುಪ್ರೀಂಕೋರ್ಟ್, ಆಯೋಗಕ್ಕೆ ಸಮನ್ಸ್ ನೀಡಿರುವ ಸುದ್ದಿಯನ್ನು ಕೂಡಾ ಪ್ರಸಾರ ಮಾಡಿತು.
ಬಿಜೆಪಿ ಶನಿವಾರ ತನ್ನ ಅ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆ ಬಗೆಗಿನ ವರದಿಯೊಂದನ್ನೂ ಝೀ ನ್ಯೂಸ್ ಪ್ರಸಾರ ಮಾಡಿತು.
ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ ಆಝಾದ್ ಅವರು ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸುವ ನಿರ್ಧಾರ ಪ್ರಕಟಿಸಿದ ಬಗೆಗಿನ ಮತ್ತೊಂದು ರಾಜಕೀಯ ವರದಿ ಕೂಡಾ ಪ್ರಸಾರವಾಯಿತು.
  ಎನ್‌ಡಿಟಿವಿ ಇಂಡಿಯಾ
ಚುನಾವ್ ಇಂಡಿಯಾ ಕಾ ಕಾರ್ಯಕ್ರಮದಲ್ಲಿ, ಮಸೂದ್ ಅಝರ್ ವಿರುದ್ಧದ ಕ್ರಮಕ್ಕೆ ಚೀನಾ ತಡೆ ಒಡ್ಡಿರುವುದರಿಂದ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ, ‘‘ಆತಂಕಿ ಮಸೂದ್ ಅಝರ್ ಪರ್ ಶಿಖಂಜಾ’’ (ಉಗ್ರ ಮಸೂದ್ ಅಝರ್ ಸುತ್ತ ಬಿಗಿದುಕೊಂಡ ಕುಣಿಕೆ) ಎಂಬ ಶೀರ್ಷಿಕೆಯಡಿ ಈ ಚಾನಲ್ ವರದಿ ಪ್ರಸಾರ ಮಾಡಿತು. ಪಾಕಿಸ್ತಾನ ಪರ ನಿಲುವಿನಿಂದಾಗಿ ಚೀನಾ ಹೇಗೆ ಏಕಾಂಗಿಯಾಗಿದೆ ಎಂಬ ಬಗ್ಗೆ ಚರ್ಚಿಸಲಾಯಿತು.
  ಆಜ್ ತಕ್
ಎಸ್ಪಿ-ಬಿಎಸ್ಪಿ ಮತ್ತು ಆರ್‌ಎಲ್‌ಡಿ ಹೇಗೆ 11 ಜಂಟಿ ರ್ಯಾಲಿಗಳಿಗೆ ಯೋಜನೆ ಸಿದ್ಧಪಡಿಸುತ್ತಿವೆ ಎಂಬ ಪ್ರಮುಖ ಸುದ್ದಿಯಲ್ಲಿ ಈ ಚಾನಲ್, ಎಸ್ಪಿ-ಬಿಎಸ್ಪಿ ಪಕ್ಷಗಳ ಸಂಬಂಧದ ಇತಿಹಾಸದ ಕುರಿತ ಚಿತ್ರಣ ನೀಡಿತು.
ಎಸ್ಪಿಮುಖಂಡ ಅಖಿಲೇಶ್ ಯಾದವ್ ಅವರು ಬಿಎಸ್ಪಿ ನಾಯಕಿ ಮಾಯಾವತಿ ಅವರ ಮುಂದಿಟ್ಟ ಪ್ರಸ್ತಾಪ, ಈ ಬದ್ಧ ವಿರೋಧಿಗಳು ಒಗ್ಗೂಡಲು ನೆರವಾಯಿತು. ಇಷ್ಟಾಗಿಯೂ ಎಸ್ಪಿ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರು ಈ ಮೈತ್ರಿಯನ್ನು ಇಂದಿಗೂ ವಿರೋಧಿಸುತ್ತಿದ್ದಾರೆ ಎಂದು ಚಾನಲ್ ಒತ್ತಿ ಹೇಳಿತು. ‘‘ಮಾಯಾವತಿ ಪರ್ ನೇತಾಜಿ ಅಭಿ ಭಿ ಮುಲಾಯಂ ನಹೀ’’ (ನೇತಾಜಿ ಮಾಯಾವತಿ ಬಗ್ಗೆ ಇನ್ನೂ ಮೆದುವಾಗಿಲ್ಲ) ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಸಾರ ಮಾಡಿತು.
ಇತರ ಶೀರ್ಷಿಕೆಗಳು ಮಾಯಾವತಿಯವರ ಸಂಬಂಧ ಅಖಿಲೇಶ್ ಜತೆ ಸುಧಾರಿಸಿದ ಬಗ್ಗೆ ವಿವರಣೆ ನೀಡುವಂತಿದ್ದವು. ‘‘ಯುಪಿ ಮೇ ರಂಗ್ ಲಯಾ ಬಾವೂ-ತಿಜಯ್ ಕಾ ಘಟಬಂಧನ್’’ (ಉತ್ತರಪ್ರದೇಶದಲ್ಲಿ ಅತ್ತೆ ಮತ್ತು ಅಳಿಯನ ಮೈತ್ರಿಯ ರೆಕ್ಕೆ ಹರಡಿಕೊಳ್ಳುತ್ತಿದೆ ಎನ್ನುವುದು ಅಂಥ ಒಂದು ಶೀರ್ಷಿಕೆ.
  ಎಬಿಪಿ ನ್ಯೂಸ್
ಎಬಿಪಿ ನ್ಯೂಸ್ ನ್ಯೂಝಿಲ್ಯಾಂಡ್‌ನ ಶೂಟಿಂಗ್ ಬಗ್ಗೆ ಮತ್ತು ಒಂಬತ್ತು ಮಂದಿ ಭಾರತೀಯರು ಹೇಗೆ ನಾಪತ್ತೆಯಾದರು ಎಂಬ ಬಗ್ಗೆ ಸಂಕ್ಷಿಪ್ತ ವರದಿ ಪ್ರಸಾರ ಮಾಡಿತು. ಮುಂಬೈ ಪಾದಚಾರಿ ಮೇಲ್ಸೇತುವೆ ಕುಸಿತಗೊಂಡಿದ್ದಕ್ಕೆ ಹೇಗೆ ಇಬ್ಬರು ಇಂಜಿನಿಯರ್‌ಗಳನ್ನು ಅಮಾನತು ಮಾಡಲಾಯಿತು ಎಂಬ ಸುದ್ದಿಯೊಂದನ್ನೂ ಪ್ರಸಾರ ಮಾಡಿತು.
ಚಾನಲ್‌ನ ವಿಶೇಷ ವರದಿ, ರಾಮಪುರದ ಒಂಬತ್ತು ಬಾರಿಯ ಶಾಸಕ ಅಝಂ ಖಾನ್ ಹಾಗೂ ಎರಡು ಬಾರಿಯ ಸಂಸದೆ ಜಯಪ್ರದಾರ ನಡುವೆ ಹೇಗೆ ಪೈಪೋಟಿ ಇದೆ ಎನ್ನುವುದನ್ನು ಆಧರಿಸಿತ್ತು. ‘‘ರಾಂಪುರ ರಿಟರ್ನ್ಸ್’’ ಕಾರ್ಯಕ್ರಮದಲ್ಲಿ ಇಬ್ಬರು ಮಾಜಿ ಎಸ್ಪಿ ನಾಯಕರು ಪರಸ್ಪರ ಹೇಗೆ ಎದುರಾಳಿಗಳಾಗಿದ್ದಾರೆ ಎನ್ನುವುದನ್ನು ವಿವರಿಸಲಾಗಿತ್ತು. ಮುಸ್ಲಿಂ ಪ್ರಾಬಲ್ಯದ ಈ ಕ್ಷೇತ್ರದಲ್ಲಿ ಬಿಜೆಪಿಯು ಮಾಜಿ ನಟಿ ಜಯಪ್ರದಾ ಅವರನ್ನು ಕಣಕ್ಕಿಳಿಸಲು ಯೋಚಿಸುತ್ತಿದೆ ಎಂದು ಹೇಳಿತ್ತು.
ಹೋಲಿ ಹಬ್ಬದ ಸಂದರ್ಭದಲ್ಲಿ ಪ್ರಿಯಾಂಕಾ ಗಾಂಧಿ ವಾರಣಾಸಿಯಲ್ಲಿ ಇರಲು ನಿರ್ಧರಿಸಿದ್ದಾರೆ ಎಂಬ ‘‘ಪ್ರಿಯಾಂಕಾ ಕಿ ಹೋಲಿ ಬನಾರಸ್ ವಾಲಿ’’ ಶೀರ್ಷಿಕೆಯ ಸುದ್ದಿಯೊಂದನ್ನೂ ಪ್ರಸಾರ ಮಾಡಿತು.
ಇಂಗ್ಲಿಷ್ ಚಾನಲ್‌ಗಳು
  ಟೆಮ್ಸ್ ನೌ
ಅಪ್‌ಫ್ರಂಟ್ ಕಾರ್ಯಕ್ರಮದಲ್ಲಿ ಈ ಚಾನಲ್, ಮಸ್ಜಿದ್‌ಫಾರ್‌ವೋಟ್ಸ್‌ಸ್ವಿಂಗ್ ಹ್ಯಾಷ್‌ಟ್ಯಾಗ್ ಕಾರ್ಯಕ್ರಮ ಪ್ರಸಾರ ಮಾಡಿತು. ಜತೆಗೆ ‘‘2019ರ ಚುನಾವಣಾಪೂರ್ವದ ಅತಿದೊಡ್ಡ ಎಕ್ಸ್ ಕ್ಲೂಸಿವ್’’ ಎಂಬ ಒಂದು ಸುದ್ದಿಯನ್ನೂ ಬಿತ್ತರಿಸಿತು.
ಉತ್ತರ ಪ್ರದೇಶದಲ್ಲಿ ಮೋದಿ ವಿರೋಧಿ ತೆರೆಮರೆಯ ಸಂಚು ನಡೆಯುತ್ತಿದ್ದು, ಕಾಂಗ್ರೆಸ್ ಮುಸ್ಲಿಮರನ್ನು ಬಹಿರಂಗವಾಗಿ ಓಲೈಸುತ್ತಿದೆ ಎಂದು ಈ ವರದಿಯಲ್ಲಿ ಹೇಳಲಾಗಿತ್ತು. ‘‘ಅವರು ಕಾನೂನು ಉಲ್ಲಂಘಿಸಲೂ ಮುಂದಾಗಿದ್ದಾರೆ’’, ‘‘ಜಾತ್ಯತೀತತೆಯ ಬೋಧನೆ, ಹಿಂದುತ್ವಕ್ಕೆ ವಿರೋಧ’’, ‘‘ಬಟ್ ಯೂಸ್ ಇಸ್ಲಾಂ ಟೂ ವಿನ್ 99% ಮುಸ್ಲಿಮ್ಸ್’’, ‘‘ಮರ್ಕಿ ಟ್ಯಾಕ್ಟಿಕ್ಸ್ ಟೂ ವಿನ್ ಉತ್ತರ ಪ್ರದೇಶ್’’ ಎಂಬ ಶೀರ್ಷಿಕೆಗಳ ಮೂಲಕ ಈ ಆಯಾಮವನ್ನು ಬಿಚ್ಚಿಸುವ ಪ್ರಯತ್ನ ಮಾಡಿತು. ಈ ವರದಿಯ ಸ್ಪಷ್ಟ ಉದ್ದೇಶ ಮತ್ತೊಂದು ಟ್ಯಾಗ್‌ಲೈನ್‌ನಲ್ಲಿ ಸ್ಪಷ್ಟವಾಗುತ್ತಿತ್ತು: ‘‘ಕಾಂಗ್ರೆಸ್ ಹಿಪೋಕ್ರಸಿ ಬಹಿರಂಗ’’.
  ಇಂಡಿಯಾ ಟುಡೇ
ಪಶ್ಚಿಮ ಬಂಗಾಳ ರಾಜಕೀಯದ ಬಗೆಗಿನ ರಾಜ್‌ದೀಪ್ ಸರ್‌ದೇಸಾಯಿಯವರ ಹೊಸ ನೋಟ ಕ್ಯಾಂಪಸ್ ಫೇಸ್ ಆಫ್‌ನ ವಿಶೇಷವಾಗಿತ್ತು. ಚಾನಲ್ ಕೋಲ್ಕತಾ ವಿಶೇಷ ಕಾರ್ಯಕ್ರಮ ಪ್ರಸಾರ ಮಾಡಿತು. ರಾಜ್ಯದ ಪ್ರಮುಖ ವಿಚಾರಗಳ ಬಗ್ಗೆ ವಿಶ್ಲೇಷಿಸಿ, ‘‘ಮಮತಾ ಪ್ರಧಾನಿ ಹುದ್ದೆ ರೇಸ್‌ನಲ್ಲಿದ್ದಾರೆಯೇ?’’ ಎಂದು ಕೇಳಿತು. ಮತ್ತೊಂದು ಪ್ರಶ್ನೆ, ‘‘ಯುವ ಭಾರತದ ಬಯಕೆ ಏನು?’’ ಎನ್ನುವುದು. ‘‘ಸಹಸ್ರಮಾನದ ತಲೆಮಾರು ಚುನಾವಣಾ ಚರ್ಚೆಯಲ್ಲಿ ಭಾಗಿ’’ ಎಂಬ ಟ್ಯಾಗ್‌ಲೈನ್‌ನೊಂದಿಗೆ ಈ ಬಾರಿ 8.4 ಕೋಟಿ ಹೊಸ ಮತದಾರರು ಸೇರ್ಪಡೆಯಾಗುತ್ತಿದ್ದಾರೆ ಎಂದು ವಿವರಿಸಿತು.
ಕಳೆದ 45 ವರ್ಷಗಳಲ್ಲಿ ನಿರುದ್ಯೋಗ ಪ್ರಮಾಣ ಇದೀಗ ಹೇಗೆ ಅತ್ಯಧಿಕವಾಗಿದೆ ಎಂಬ ವಿಚಾರದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಗರ್ಗಾ ಚಟರ್ಜಿಯವರ ಅಭಿಪ್ರಾಯವನ್ನು ಬಿಂಬಿಸಿತು. ಇವರನ್ನು ಬಿಜೆಪಿಯ ಬಬೂಲ್ ಸುಪ್ರಿಯೊ ವಿರುದ್ಧ ಕಣಕ್ಕೆ ಇಳಿಸಲಾಗಿತ್ತು. ನಗರ ಸ್ಥಳೀಯ ಸಂಸ್ಥೆ ಚುನಾವಣೆ ಮತ್ತು ಪಂಚಾಯತ್ ಚುನಾವಣೆಯಲ್ಲಿ ಅತ್ಯಂತ ಕಡಿಮೆ ಮತದಾನವಾಗಿರುವುದು ಮತದಾರರ ಭೀತಿಯನ್ನು ಪ್ರತಿಫಲಿಸುತ್ತದೆಯೇ ಎಂಬಂಥ ಪ್ರಶ್ನೆಗಳನ್ನೂ ಕೇಳಲಾಯಿತು. ಜತೆಗೆ ಸಿಬಿಐಯನ್ನು ರಾಜ್ಯ ಸರಕಾರದ ವಿರುದ್ಧ ಕೇಂದ್ರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಟಿಎಂಸಿ ಆಪಾದನೆಯ ಬಗ್ಗೆಯೂ ಪ್ರಶ್ನೆಗಳನ್ನು ಕೇಳಲಾಯಿತು.
‘‘ಅಪೋಸಿಶನ್ ಫೇಸ್‌ಲೆಸ್ ಇನ್ ಬೆಂಗಾಲ್’’ ಎಂಬ ಟ್ಯಾಗ್ ಲೈನ್‌ನಡಿ, ರಾಜ್ಯದಲ್ಲಿ ಬಿಜೆಪಿಯ ಮುಖ ಯಾರು ಎಂದು ಪ್ರಶ್ನಿಸಿತು. ಬಿಜೆಪಿಯ ಮೀಸಲಾತಿ ನೀತಿಯನ್ನು ಅಣಕಿಸಿ, ‘‘ಉದ್ಯೋಗವೇ ಇಲ್ಲ ಎಂದಾದ ಮೇಲೆ ಮೀಸಲಾತಿ ಏಕೆ’’ ಎಂದು ಪ್ರಶ್ನಿಸಿತು.
  ರಿಪಬ್ಲಿಕ್ ಟಿವಿ
ಈ ಚಾನಲ್ ತನ್ನ ಪ್ರೈಮ್‌ಟೈಮನ್ನು ಪ್ರಧಾನಿಯ ಹೊಗಳಿಕೆಗೇ ಮೀಸಲಿಟ್ಟಿತು. ‘‘150 ರ್ಯಾಲಿಗಳು: ಮೋದಿ ಸಕಲ ಪ್ರಯತ್ನ’’ ಎಂಬ ಚರ್ಚೆ- ವರದಿಯನ್ನು ಮೋದಿ ವರ್ಸಸ್ ಹೂ ಎಂಬ ಹ್ಯಾಷ್‌ಟ್ಯಾಗ್‌ನಡಿ ಪ್ರಸಾರ ಮಾಡಿತು. ಈ ಚರ್ಚೆಯಲ್ಲಿ ಬಿಜೆಪಿಯ ನಳಿನ್ ಕೊಹ್ಲಿ, ಮೋದಿಯೇ ಪ್ರಧಾನಿ ಹುದ್ದೆಗೆ ಬಿಜೆಪಿಯ ಆಯ್ಕೆ; ಆದರೆ ವಿರೋಧ ಪಕ್ಷಗಳಿಗೆ ಅಂಥ ಮುಖವೇ ಇಲ್ಲ ಎಂದು ಹೇಳಿದರು.
ಮತ್ತೊಂದು ಶೀರ್ಷಿಕೆ, ‘‘ಸೂಪರ್ ಎನ್‌ಡಿಎ ವರ್ಸಸ್ ಹೂ ಇನ್ 2019?’’ ಈ ಕಾರ್ಯಕ್ರಮದಲ್ಲಿ 10 ಮಂದಿ ಚರ್ಚಾಗಾರರಿದ್ದರು. ಸಹಜವಾಗಿಯೇ ಇದು ನಿರೀಕ್ಷಿತ ಅಪಸ್ವರಕ್ಕೆ ಕಾರಣವಾಯಿತು. ನಿರೂಪಕ-ಸಂಪಾದಕ ಅರ್ನಬ್ ಗೋಸ್ವಾಮಿಯ ನಿರ್ಧಾರವೇ ಅಂತಿಮ: ‘‘ನೀವು ಇಷ್ಟಪಡುತ್ತೀರೋ ಇಲ್ಲವೋ, ಆದರೆ ರಾಷ್ಟ್ರಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿಯವರೇ ದೊಡ್ಡ ಅಂಶ’- ಬಿಜೆಪಿಯ ಏಕೈಕ ಸಮಸ್ಯೆ ಎಂದರೆ, ಅದರ ಆಧಾರದಲ್ಲಿ ಬೆಳೆಯುವ ಸಾಮರ್ಥ್ಯ ಇಲ್ಲದಿರುವುದು’’
ನಿಜವಾಗಿ ನಿಮ್ಮ ಪರ್ಯಾಯ ಯಾರು ಎನ್ನುವುದನ್ನು ವಿರೋಧ ಪಕ್ಷಗಳು ಹೇಳಬೇಕು ಎಂದೂ ನಿರೂಪಕ ಸವಾಲು ಹಾಕಿದರು.
  ಎನ್‌ಡಿಟಿವಿ 24X7
‘‘ದ ಬಿಗ್ ಫೆೈಟ್- ರೋಡ್ ಟೂ 2019’’ ಪ್ರೈಮ್‌ಟೈಮ್ ಶೋದಲ್ಲಿ ‘‘ಮೈತ್ರಿ ಹೆಣೆಯುವಲ್ಲಿ ವಿರೋಧ ಪಕ್ಷಗಳಿಗಿಂತ ಬಿಜೆಪಿ ಮುಂದಿದೆಯೇ?’’ ಎಂಬ ಬಗ್ಗೆ ಚರ್ಚೆ ಆಯೋಜಿಸಿತ್ತು. ‘‘ಮೈತ್ರಿಗೆ ಓಟ: ಯುಪಿಎಗಿಂತ ಎನ್‌ಡಿಎ ಮುಂದು’’ ಎಂಬ ಉಪಶೀರ್ಷಿಕೆಯಡಿ, ಹೆಚ್ಚು ಹೆಚ್ಚು ಮೈತ್ರಿಪಕ್ಷಗಳನ್ನು ಸೆಳೆದುಕೊಳ್ಳುವಲ್ಲಿ ಆಡಳಿತಾರೂಢ ಪಕ್ಷ ಮುಂದಿದೆ ಎಂದು ಹೇಳಿತು.
‘‘ರಾಹುಲ್: ವಡಕ್ಕನ್ ಈಸ್ ನಾಟ್ ಎ ಬಿಗ್ ಲೀಡರ್ ಮತ್ತು ಕಾಂಗ್ರೆಸ್ ಗೋಸ್ ಸೋಲೊ ಇನ್ ಯುಪಿ: ಅಡ್ವಾಂಟೇಜ್ ಬಿಜೆಪಿ’’ ಎಂಬ ಶೀರ್ಷಿಕೆಗಳೂ ಬಿತ್ತರಿಸಲ್ಪಟ್ಟವು.
ವಿಕ್ರಮ್ ಚಂದ್ರ ಅವರು ಈ ಚರ್ಚೆಯಲ್ಲಿ ಪ್ರಸ್ತುತ ಎನಿಸುವ ಹಲವು ಪ್ರಶ್ನೆಗಳನ್ನು ಎತ್ತಿದರು. ಜೆಡಿಯುನ ಕೆ.ಸಿ.ತ್ಯಾಗಿ, ಸಮಾಜವಾದಿ ಪಕ್ಷದ ಘನಶ್ಯಾಮ ತಿವಾರಿಯಂಥ ನಾಯಕರು ಭಾಗವಹಿಸಿದ್ದರು. ಕಾಂಗ್ರೆಸ್‌ನಿಂದ ಕೇರಳದಲ್ಲಿ ವಡಕ್ಕನ್ ಹೊರಹೋಗಿರುವುದು, ಗುಜರಾತ್‌ನಲ್ಲಿ ನಾಲ್ವರು ಶಾಸಕರು ಬಿಜೆಪಿಗೆ ವಲಸೆ ಹೋಗಿರುವುದು, ಚುನಾವಣಾ ಗಾಳಿ ಯಾವ ಕಡೆ ಬೀಸುತ್ತಿದೆ ಎಂಬುದರ ಸೂಚಕ ಎಂಬ ಬಗ್ಗೆಯೂ ಚರ್ಚಿಸಿತು.
ಕೃಪೆ: thewire.in

Writer - ಗೌರವ್ ವಿವೇಕ್ ಭಟ್ನಾಗರ್

contributor

Editor - ಗೌರವ್ ವಿವೇಕ್ ಭಟ್ನಾಗರ್

contributor

Similar News

ಜಗದಗಲ
ಜಗ ದಗಲ