ಪಾಕ್ ರಾಷ್ಟ್ರೀಯ ದಿನ ಪರೇಡ್‌ನಲ್ಲಿ ಚೀನಾದ ಯುದ್ಧ ವಿಮಾನಗಳು

Update: 2019-03-19 17:35 GMT

ಬೀಜಿಂಗ್, ಮಾ. 19: ಮಾರ್ಚ್ 23ರಂದು ನಡೆಯಲಿರುವ ಪಾಕಿಸ್ತಾನದ ‘ರಾಷ್ಟ್ರೀಯ ದಿನ’ ಪರೇಡ್‌ನಲ್ಲಿ ಚೀನಾ ವಾಯುಪಡೆಯ ಜೆ-10 ಯುದ್ಧವಿಮಾನಗಳು ಭಾಗವಹಿಸಲಿವೆ ಎಂದು ಚೀನಾದ ಸರಕಾರಿ ಮಾಧ್ಯಮ ಸೋಮವಾರ ವರದಿ ಮಾಡಿದೆ.

ಪಾಕಿಸ್ತಾನದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳುವುದಕ್ಕಾಗಿ ಪೀಪಲ್ಸ್ ಲಿಬರೇಶನ್ ಆರ್ಮಿಯ ‘ಬಾಯಿ ಏರೋಬ್ಯಾಟಿಕ್ ಟೀಮ್’ನ ಜೆ-10 ಯುದ್ಧ ವಿಮಾನಗಳು ಶನಿವಾರ ಪಾಕಿಸ್ತಾನವನ್ನು ತಲುಪಿವೆ ಎಂದು ‘ಗ್ಲೋಬಲ್ ಟೈಮ್ಸ್’ ವರದಿ ಮಾಡಿದೆ.

ಚೀನಾ, ಸೌದಿ ಅರೇಬಿಯ ಮತ್ತು ಟರ್ಕಿ ಸೇರಿದಂತೆ ಹಲವು ದೇಶಗಳ ತಂಡಗಳು ಪರೇಡ್‌ನಲ್ಲಿ ಭಾಗವಹಿಸಲಿವೆ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News