12ನೇ ಆವೃತ್ತಿಯ ಐಪಿಎಲ್: ಗುಂಪು ಹಂತದ ವೇಳಾಪಟ್ಟಿ

Update: 2019-03-19 18:23 GMT

ಹೊಸದಿಲ್ಲಿ, ಮಾ.19: ಹನ್ನರಡನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ಟ್ವೆಂಟಿ-20 ಟೂರ್ನಿಯ ಗ್ರೂಪ್ ಹಂತದ ಪಂದ್ಯಗಳ ವೇಳಾಪಟ್ಟಿಯನ್ನು ಬಿಸಿಸಿಐ ಮಂಗಳವಾರ ಘೋಷಿಸಿದೆ. ಎಲ್ಲ 8 ತಂಡಗಳು ಏಳು ತವರು ಪಂದ್ಯಗಳನ್ನ್ನು ತಮ್ಮ ಮೈದಾನದಲ್ಲೇ ಆಡಲಿವೆ. ಮಧ್ಯಾಹ್ನದ ಪಂದ್ಯಗಳು, ವಾರಾಂತ್ಯದ ಪಂದ್ಯಗಳು ಹಾಗೂ ಪ್ರಯಾಣವನ್ನು ಸಮತೋಲನದಲ್ಲಿಟ್ಟುಕೊಂಡು ವೇಳಾಪಟ್ಟಿಯನ್ನು ರಚಿಸಲಾಗಿದೆ. ಆಯಾ ರಾಜ್ಯಗಳಲ್ಲಿ ಹಾಗೂ ನಗರಗಳಲ್ಲಿ ಎಪ್ರಿಲ್ ಹಾಗೂ ಮೇ ತಿಂಗಳಲ್ಲಿ ನಡೆಯುವ ಲೋಕಸಭಾ ಚುನಾವಣೆಯ ದಿನಾಂಕ ಹಾಗೂ ಅದರ ಹಂತಗಳನ್ನು ಗಮನದಲ್ಲಿಟ್ಟುಕೊಂಡು ಕ್ರಿಕೆಟ್ ಮಂಡಳಿ ವೇಳಾಪಟ್ಟಿ ರಚಿಸಿದೆ.

 ಬಿಸಿಸಿಐ ಈ ಮೊದಲು ಮಾ.23ರಿಂದ ಎ.5ರ ತನಕ ಮೊದಲ 17 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಘೋಷಿಸಿತ್ತು. ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮಾ.23 ರಂದು ರಾತ್ರಿ 8 ಗಂಟೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡವನ್ನು ಎದುರಿಸುವ ಮೂಲಕ ಈ ವರ್ಷದ ಐಪಿಎಲ್‌ಗೆ ಚಾಲನೆ ಸಿಗಲಿದೆ. ಎಲ್ಲ ತಂಡಗಳು ಕನಿಷ್ಠ 4 ಲೀಗ್ ಪಂದ್ಯಗಳನ್ನು ಆಡಲಿದ್ದು, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗುಂಪು ಹಂತದಲ್ಲಿ 5 ಪಂದ್ಯಗಳನ್ನಾಡಲಿವೆೆ. ಪ್ರತಿ ತಂಡ ತವರು ಮೈದಾನದಲ್ಲಿ ಎರಡು ಹಾಗೂ ಹೊರಗೆ 2 ಪಂದ್ಯಗಳನ್ನು ಆಡಲಿದೆ. ಡೆಲ್ಲಿ ತಂಡ ತವರು ಮೈದಾನದಲ್ಲಿ 3 ಪಂದ್ಯಗಳನ್ನು ಆಡಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News