'ಅಡ್ವಾಣಿಯಂಥ ಹಿರಿಯರನ್ನೇ ಗೌರವಿಸದ ಪ್ರಧಾನಿ ಮೋದಿ ದೇಶವನ್ನು ಗೌರವಿಸುತ್ತಾರೆಯೇ ?'

Update: 2019-03-22 05:49 GMT

ಹೊಸದಿಲ್ಲಿ, ಮಾ. 22: ಪ್ರಧಾನಿ ನರೇಂದ್ರ ಮೋದಿಯವರು ಲಾಲ್‌ಕೃಷ್ಣ ಆಡ್ವಾಣಿಯಂಥ ಹಿರಿಯ ಮುಖಂಡರನ್ನೇ ಗೌರವಿಸದಿದ್ದ ಮೇಲೆ ದೇಶದ ಜನತೆಯ ಆಶೋತ್ತರಗಳನ್ನು ಗೌರವಿಸುತ್ತಾರೆಯೇ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸರ್ಜೇವಾಲಾ ಪ್ರಶ್ನಿಸಿದ್ದಾರೆ.

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಗ್ಗೆ ರಣದೀಪ್ ಸರ್ಜೇವಾಲಾ ಟ್ವಿಟ್ಟರ್ ಮೂಲಕ ಪ್ರತಿಕ್ರಿಯಿಸಿದರು.

ಎಲ್.ಕೆ.ಅಡ್ವಾಣಿಯವರು ಸ್ಪರ್ಧಿಸುತ್ತಿದ್ದ ಗಾಂಧಿನಗರ ಕ್ಷೇತ್ರದಿಂದ ಈ ಬಾರಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕಣಕ್ಕೆ ಇಳಿದಿದ್ದಾರೆ. ಇದನ್ನು ಅಕ್ಷರಶಃ ಬಿಜೆಪಿಯಲ್ಲಿ ಅಡ್ವಾಣಿ ಯುಗದ ಅಂತ್ಯ ಎಂದು ವಿಶ್ಲೇಷಿಸಲಾಗುತ್ತಿದೆ ಎಂದಿದ್ದಾರೆ.

"ಮೊದಲು ಶ್ರೀ ಲಾಲ್‌ಕೃಷ್ಣ ಆಡ್ವಾಣಿಯವರನ್ನು ಬಲವಂತವಾಗಿ ಮಾರ್ಗದರ್ಶಕ ಮಂಡಳಿಗೆ ಕಳುಹಿಸಲಾಯಿತು. ಇದೀಗ ಅವರ ಸಂಸತ್ ಕ್ಷೇತ್ರವನ್ನೂ ಕಸಿದುಕೊಳ್ಳಲಾಗಿದೆ. ನರೇಂದ್ರ ಮೋದಿಯವರು ಅಡ್ವಾಣಿಯರವನ್ನೇ ಗೌರವಿಸದಿದ್ದ ಮೇಲೆ, ದೇಶದ ಜನರ ಆಶೋತ್ತರಗಳನ್ನು ಹೇಗೆ ಗೌರವಿಸುತ್ತಾರೆ" ಎಂದು ಸುರ್ಜೇವಾಲಾ ಟ್ವೀಟ್ ಮಾಡಿದ್ದಾರೆ. "ಬಿಜೆಪಿ ಭಗಾವೊ, ದೇಶ್ ಬಚಾವೊ" (ಬಿಜೆಪಿ ಓಡಿಸಿ, ದೇಶ ರಕ್ಷಿಸಿ) ಘೋಷಣೆಯೊಂದಿಗೆ ಟ್ವೀಟ್ ಕೊನೆಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News