ಗಂಗಾನದಿಗಾಗಿ ಸಾಯುತ್ತಿರುವ ಸಂತರ ಕುರಿತು ಯಾಕೆ ಮೌನವಾಗಿದ್ದೇವೆ?

Update: 2019-03-26 06:49 GMT

ಯೋಧರು ಹುತಾತ್ಮರಾದಾಗ ದೇಶದಾದ್ಯಂತ ಭಾವನಾತ್ಮಕ ಮಹಾಪೂರ ಹರಿದುಬರುತ್ತದೆ. ಜನರು ಬೀದಿಗೆ ಬಂದು ಮೃತ ಯೋಧರ ಕುಟುಂಬಗಳಿಗೆ ನೆರವಾಗಲು ಮುಂದಾಗುತ್ತಾರೆ ಅಥವಾ ಹುತಾತ್ಮ ಯೋಧರ ಪ್ರತಿಮೆಗಳನ್ನು ಸ್ಥಾಪಿಸುತ್ತಾರೆ. ಯೋಧರ ಸಾವನ್ನು ತಡೆಯುವಲ್ಲಿ ಸರಕಾರಕ್ಕೆ ಹೆಚ್ಚಿನ ನಿಯಂತ್ರಣವಿರುವುದಿಲ್ಲ. ಆದರೆ ಅದು ಸಂತರು ಹುತಾತ್ಮರಾಗುವುದನ್ನು ತಡೆಯಬಲ್ಲದು. ಹಾಗಾದರೆ ನರೇಂದ್ರ ಮೋದಿ ಸರಕಾರ ಈ ಎಲ್ಲ ಸಂತರ ಜೊತೆ ಮಾತುಕತೆಗೆ ಯಾಕೆ ಮುಂದೆ ಬರುತ್ತಿಲ್ಲ?

ಹರಿದ್ವಾರದಲ್ಲಿ ಅಕ್ರಮ ಗಣಿಗಾರಿಕೆಯನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ಸ್ವಾಮಿ ನಿಗಮಾನಂದರು 2011ರಲ್ಲಿ ತನ್ನ ಉಪವಾಸದ 115ನೇ ದಿನ ನಿಧನ ಹೊಂದಿದ್ದರು. ಅವರು ನಿಕಟ ಸಂಬಂಧ ಇಟ್ಟುಕೊಂಡಿದ್ದ ಆಶ್ರಮವಾದ ಮಾತ್ರಿ ಸದನವು, ಗಣಿಗಾರಿಕೆ ಮಾಫಿಯಾದ ಮಸಲತ್ತಿಗೆ ಅನುಗುಣವಾಗಿ ಅವರಿಗೆ ವಿಷನೀಡಿ ಆಸ್ಪತ್ರೆಯಲ್ಲಿ ಅವರನ್ನು ಕೊಲ್ಲಲಾಯಿತೆಂದು ಹೇಳಿದೆ. 1998ರಲ್ಲಿ ಸ್ವಾಮಿ ನಿಗಮಾನಂದರ ಜೊತೆಗೆ ಉಪವಾಸ ಕುಳಿತಿದ್ದ ಸ್ವಾಮಿ ಗೋಕುಲಾನಂದರನ್ನು 2003ರಲ್ಲಿ ನೈನಿತಾಲ್‌ನಲ್ಲಿ ಗಣಿ ಮಾಫಿಯಾ ಕೊಲೆ ಮಾಡಿಸಿತು. ಗಂಗಾನದಿಯ ಸಂರಕ್ಷಣೆಗಾಗಿ ಉಪವಾಸ ಕೈಗೊಂಡಿದ್ದ ಬಾಬಾ ನಾಗ್‌ನಾಥ್ 2014ರಲ್ಲಿ ಉಪವಾಸದ 114ನೇ ದಿನ ಮೃತಪಟ್ಟರು. ಕಾನ್ಪುರದ ಐಐಟಿಯಲ್ಲಿ ಪ್ರಾಧ್ಯಾಪಕರಾಗಿದ್ದ ಗುರುದಾಸ್ ಅಗರ್‌ವಾಲ್, ಬಳಿಕ ಸ್ವಾಮಿ ಗ್ಯಾನ್ ಸ್ವರೂಪ್ ಸನಂದ್ ಎಂದು ಖ್ಯಾತರಾದವರು, ಗಂಗಾನದಿಗಾಗಿ ಉಪವಾಸ ಕೈಗೊಂಡು ಅಕ್ಟೋಬರ್ 11 ರಂದು ಅವರ ಆರನೆಯ ಉಪವಾಸದ 112ನೇ ದಿನ ಇಹಲೋಕ ತ್ಯಜಿಸಿದರು. ಗಂಗಾನದಿಯನ್ನು ಉಳಿಸುವುದಕ್ಕಾಗಿ 2018ರ ಜೂನ್ 24ರಂದು ಉಪವಾಸ ಆರಂಭಿಸಿದ ಸಂತ ಗೋಪಾಲದಾಸ್ ಡೆಹ್ರಾಡೂನ್‌ನಿಂದ ಡಿಸೆಂಬರ್ 6ರಿಂದ ನಾಪತ್ತೆಯಾಗಿದ್ದಾರೆ. ಕೇರಳದ 26ರ ಹರೆಯದ ಬ್ರಹ್ಮಚಾರಿ ಆತ್ಮ ಬೋಧಾನಂದರು ಉಪವಾಸ ಆರಂಭಿಸಿ ಈಗಾಗಲೇ 135ದಿನಗಳು ಕಳೆದಿವೆ. ಇವರಿಗೇನಾದರೂ ಆದಲ್ಲಿ ಇವರ ಸ್ಥಾನವನ್ನು ತುಂಬಲು ಮಾತ್ರಿ ಸದನದ ಸ್ವಾಮಿ ಪುಣ್ಯಾನಂದರು ಆಹಾರಧಾನ್ಯಗಳನ್ನು ತ್ಯಜಿಸಿ ಬರೀ ಫಲಾಹಾರ (ಹಣ್ಣುಗಳು) ಸೇವಿಸುತ್ತಿದ್ದಾರೆ. ಇವರು ಪ್ರಯಾಗ್ ರಾಜ್‌ನಲ್ಲಿ ನಡೆದ ಅರ್ಧ ಕುಂಭ ಮೇಳಕ್ಕೆ ಹೋದರಾದರೂ ಸರಕಾರದ ಯಾವುದೇ ಪ್ರತಿನಿಧಿ ಬಂದು ಅವರನ್ನು ಭೇಟಿಯಾಗಿ ಅವರ ಜತೆ ಮಾತುಕತೆ ನಡೆಸುವ ಸೌಜನ್ಯ ತೋರಲಿಲ್ಲ. ಸರಕಾರ ಮಾತುಕತೆಯಲ್ಲಿ ಆಸಕ್ತವಾಗದಿರುವಾಗ ಅದು ಯಾಕೆ ಆತ್ಮ ಬೋಧಾನಂದರ ಆರೋಗ್ಯ ಸ್ಥಿತಿ ಪರಿಶೀಲಿಸಲು ವೈದ್ಯರ ತಂಡವನ್ನು ಕಳುಹಿಸುತ್ತದೆ?

ಸತ್ಯ ವಿಷಯವೆಂದರೆ ತೆಹ್ರಿ, ಹರಿದ್ವಾರ ಬಿಜನೂರ್, ಮತ್ತು ನರೋರಾ ಅಣೆಕಟ್ಟುಗಳಿಂದ ನೀರು ಬಿಡುಗಡೆ ಮಾಡದಿದ್ದಲ್ಲಿ ಪ್ರಯಾಗ್ ರಾಜ್‌ನಲ್ಲಿ ಪವಿತ್ರ ಮುಳುಗು ಸ್ನಾನ ಮಾಡಲು ಸಾಕಾಗುವಷ್ಟು ನೀರು ಇರುವುದಿಲ್ಲ. ಗಂಗಾನದಿಯಲ್ಲಿ ಒಂದು ಕನಿಷ್ಠ ಪ್ರಮಾಣದ ನೀರು ಹರಿಯದಿದ್ದಲ್ಲಿ ನದಿ ಶುದ್ಧವಾಗಿ ಉಳಿಯುವುದಿಲ್ಲ; ಅಣೆಕಟ್ಟುಗಳು ನದಿಯ ಈ ಹರಿವನ್ನು ತಡೆಯುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಈ ಹರಿವಿಗೆ ತಡೆ ಇರದಂತೆ ಮಾಡಲು ಈಗ ನಡೆಯುತ್ತಿರುವ ಮತ್ತು ಭವಿಷ್ಯದ ಎಲ್ಲ ಉದ್ದೇಶಿತ ಅಣೆಕಟ್ಟು ಯೋಜನೆಗಳನ್ನು ರದ್ದುಮಾಡಿ, ಎಲ್ಲ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸಬೇಕೆಂದು ಪ್ರೊ. ಜಿ.ಡಿ. ಅಗರ್‌ವಾಲ್ ಹಕ್ಕೊತ್ತಾಯ ಸಲ್ಲಿಸುತ್ತಾ ಬಂದಿದ್ದರು. ಆದರೆ ಸರಕಾರ ಇದ್ಯಾವುದಕ್ಕೂ ಕಿವಿಕೊಡಲಿಲ್ಲ.
ಯೋಧರು ಹುತಾತ್ಮರಾದಾಗ ದೇಶದಾದ್ಯಂತ ಭಾವನಾತ್ಮಕ ಮಹಾಪೂರ ಹರಿದುಬರುತ್ತದೆ. ಜನರು ಬೀದಿಗೆ ಬಂದು ಮೃತ ಯೋಧರ ಕುಟುಂಬಗಳಿಗೆ ನೆರವಾಗಲು ಮುಂದಾಗುತ್ತಾರೆ ಅಥವಾ ಹುತಾತ್ಮ ಯೋಧರ ಪ್ರತಿಮೆಗಳನ್ನು ಸ್ಥಾಪಿಸುತ್ತಾರೆ. ಯೋಧರ ಸಾವನ್ನು ತಡೆಯುವಲ್ಲಿ ಸರಕಾರಕ್ಕೆ ಹೆಚ್ಚಿನ ನಿಯಂತ್ರಣವಿರುವುದಿಲ್ಲ. ಆದರೆ ಅದು ಸಂತರು ಹುತಾತ್ಮರಾಗುವುದನ್ನು ತಡೆಯಬಲ್ಲದು. ಹಾಗಾದರೆ ನರೇಂದ್ರ ಮೋದಿ ಸರಕಾರ ಈ ಎಲ್ಲ ಸಂತರ ಜೊತೆ ಮಾತುಕತೆಗೆ ಯಾಕೆ ಮುಂದೆ ಬರುತ್ತಿಲ್ಲ? ಜನ ಸಾಮಾನ್ಯರು ಕೂಡ ಈ ಸಂತರ ಬಗ್ಗೆ ಸಂವೇದನೆ ಕಳೆದು ಕೊಂಡಿರುವಂತೆ ಕಾಣಿಸುತ್ತದೆ-ವಿಶೇಷವಾಗಿ ರಾಷ್ಟ್ರೀಯತೆಯ ವಿಷಯಕ್ಕೆ ಧಾರ್ಮಿಕ ಬಣ್ಣ ನೀಡಿದಾಗ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಬಗ್ಗೆ ಹಾಗೂ ಕೇರಳದ ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶದ ಬಗ್ಗೆ ಜನರು ಸಾರ್ವಜನಿಕವಾಗಿ ತಮ್ಮ ನಿಲುವನ್ನು ವ್ಯಕ್ತಪಡಿಸುತ್ತಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಪಕ್ಷಗಳು ಕೂಡ ಈ ಎರಡು ವಿಷಯಗಳ ಬಗ್ಗೆ ಭಾರೀ ಆಸಕ್ತಿತೋರುತ್ತವೆ. ಆದರೆ ಗಂಗಾನದಿಯನ್ನು ಉಳಿಸುವುದಕ್ಕಾಗಿ ತಮ್ಮ ಪ್ರಾಣವನ್ನೇ ಒತ್ತೆ ಇಟ್ಟು ಪ್ರತಿಭಟನೆ ನಡೆಸುವ ಸಂತರ ಬಗ್ಗೆ ಅವು ಯಾವುದೇ ಅನುಕಂಪ ತೋರುವುದಿಲ್ಲ.

ಹಿಂದುತ್ವದ ಆಧಾರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು. ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ಚುನಾವಣೆಗೆ ಸ್ಪರ್ಧಿಸುವ ಮೊದಲು ‘‘ವಾರಣಾಸಿಯಲ್ಲಿ ಸ್ಪರ್ಧಿಸುವಂತೆ ತನಗೆ ಗಂಗಾ ಮಾತೆಯಿಂದ ಒಂದು ಕರೆ ಬಂದಿತ್ತು’’ ಘೋಷಿಸಿದ್ದರು. ಆದರೆ ಅವರು ಮತ್ತು ಜನರ ಧಾರ್ಮಿಕ ಭಾವನೆಗಳನ್ನು ಬಳಸಿ ಲಾಭಮಾಡಿಕೊಳ್ಳುವ ಯಾವುದೇ ಅವಕಾಶವನ್ನೂ ಬಿಡದ ಆರೆಸ್ಸೆಸ್ ಗಂಗಾ ಮಾತೆಗಾಗಿ ಉಪವಾಸ ಕೈಗೊಳ್ಳುತ್ತಿರುವ ಸಂತರ ಪರವಾಗಿ ನಿಲ್ಲುತ್ತಿಲ್ಲ. ಗಂಗಾನದಿಯ ಅಥವಾ ಅದರ ಉಪನದಿಗಳ ಅಕ್ಕಪಕ್ಕದ ಪ್ರದೇಶಗಳಲ್ಲಿ ವಾಸಿಸುತ್ತಿರುವ ದೇಶದ ಜನಸಂಖ್ಯೆಯ ಶೇ. 40ರಷ್ಟು ಜನರಿಗೆ ಶುದ್ಧ ಗಂಗಾನದಿಯಿಂದ ಹಲವು ರೀತಿಯ ಲಾಭಗಳಾಗುತ್ತದೆ. ಆದರೆ ಅಯೋಧ್ಯೆಯ ರಾಮ ಮಂದಿರದಿಂದ ಯಾರಿಗೆ ಲಾಭವಾಗುತ್ತದೆಂಬುದು ಸ್ಪಷ್ಟವಾಗುವುದಿಲ್ಲ ಆದರೂ ಕೂಡ ಆರೆಸ್ಸೆಸ್-ಬಿಜೆಪಿ, ಉಪವಾಸ ಕೈಗೊಂಡಿರುವ ಸಂತರ ಬಗ್ಗೆ ವೌನವಾಗಿವೆ.
ತನ್ನ ಪರವಾಗಿ ಮತಧ್ರುವೀಕರಣವಾಗುವ ಅವಕಾಶ, ಸಾಧ್ಯತೆ ಇದ್ದಲ್ಲಿ ಮಾತ್ರ ಹಿಂದುತ್ವದ ರಾಜಕಾರಣ ಧಾರ್ಮಿಕ ವಿಷಯಗಳಲ್ಲಿ ಆಸಕ್ತಿ ತೋರುತ್ತದೆ; ಇಲ್ಲವಾದಲ್ಲಿ ಅದಕ್ಕೆ ಯಾವ ಆಸಕ್ತಿಯೂ ಇರುವುದಿಲ್ಲವೆಂಬುದನ್ನು ಇದು ತೋರಿಸುತ್ತದೆ. ಆದ್ದರಿಂದ ಆರೆಸ್ಸೆಸ್ ಮತ್ತು ಬಿಜೆಪಿಗೆ ಜನರು ಮುಖ್ಯವಲ್ಲ; ಕೇವಲ ರಾಜಕೀಯ ಅಧಿಕಾರ ಮುಖ್ಯ. ಉಪವಾಸ ಸತ್ಯಾಗ್ರಹ ಕೈಗೊಳ್ಳುವ ಸಂತರ ಬಗ್ಗೆ ಆರೆಸ್ಸೆಸ್ -ಬಿಜೆಪಿ ಯಾಕೆ ನಿರಾಸಕ್ತಿ ತೋರುತ್ತವೆ ಎಂಬುದಕ್ಕೆ ಬೇರೆ ವಿವರಣೆ ಬೇಕಾಗಿಲ್ಲ.
ಕೃಪೆ: countercurrents

Writer - ಸಂದೀಪ್ ಪಾಂಡೆ

contributor

Editor - ಸಂದೀಪ್ ಪಾಂಡೆ

contributor

Similar News

ಜಗದಗಲ
ಜಗ ದಗಲ