ಬಿಜೆಪಿ ಮಿತ್ರ ಪಕ್ಷ ಎಂಜಿಪಿಯಿಂದ ಗೋವಾ ಸರಕಾರ ಉರುಳಿಸುವ ಬೆದರಿಕೆ

Update: 2019-03-26 18:06 GMT

ಪಣಜಿ, ಮಾ. 26: ತನ್ನ ವಿರೋಧಿಗಳ ಪಿತೂರಿಯು ಬಿಜೆಪಿ ಮೈತ್ರಿಯಿಂದ ಹೊರಬಂದು ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡು ನೂತನ ಸರಕಾರ ರಚಿಸುವಂತೆ ಒತ್ತಾಯಿಸಬಹುದು ಎಂದು ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷ ಹೇಳಿದೆ. ಬಿಜೆಪಿ ನೇತೃತ್ವದ ಗೋವಾ ರಾಜ್ಯ ಸರಕಾರದ ಸ್ಥಿರತೆಯಲ್ಲಿ ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷದ ಮೂವರು ಶಾಸಕರು ಪ್ರಮುಖ ಪಾತ್ರ ವಹಿಸಿದ್ದಾರೆ.

40 ಸದಸ್ಯರಿರುವ ಗೋವಾ ವಿಧಾನ ಸಭೆಯಲ್ಲಿ ಪಕ್ಷದ ಮೂವರು ಶಾಸಕರು ಇದ್ದಾರೆ. ಪಕ್ಷದ ಹಿರಿಯ ನಾಯಕ ಹಾಗೂ ಮರ್ಕೈಮ್‌ನ ಶಾಸಕ ಸುದಿನ್ ಧಾವಲಿಕರ್ ಅವರು ಪ್ರಮೋದ್ ಸಾವಂತ್ ಸರಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದಾರೆ. ರಾಜ್ಯದಲ್ಲಿ ತನ್ನ ಮಿತ್ರ ಪಕ್ಷಗಳೊಂದಿಗೆ ದೀರ್ಘ ಮಾತುಕತೆ ನಡೆಸಿದ ಬಳಿಕ ಬಿಜೆಪಿ ಕಳೆದ ವಾರ ಸರಕಾರ ರಚಿಸಿತ್ತು. ಪಕ್ಷದ ಸಂಪೂರ್ಣ ಶಾಸಕಾಂಗ ವ್ಯವಹಾರಗಳ ಕುರಿತ ಅಧಿಕಾರವನ್ನು ಘೋಷಿಸುವಂತೆ ತನ್ನ ಪಕ್ಷದ ಪದಾಧಿಕಾರಿಯೊಬ್ಬ ರಾಜ್ಯಪಾಲ ಹಾಗೂ ಸ್ಪೀಕರ್ ಅವರಿಗೆ ಪತ್ರ ರವಾನಿಸಿದ್ದಾರೆ ಎಂದು ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷದ ಅಧ್ಯಕ್ಷ ದೀಪಕ್ ಧಾವಲಿಕಾರ್ ಆರೋಪಿಸಿದ್ದಾರೆ.

ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷದ ಕೇಂದ್ರ ಸಮಿತಿ ಬುಧವಾರ ಸಭೆ ಸೇರಿ ಮುಂದಿನ ನಡೆಯನ್ನು ಘೋಷಿಸಲಿದೆ. ಈ ಸಭೆಯಲ್ಲಿ ರಾಜ್ಯ ಸರಕಾರದ ಭವಿಷ್ಯ ಕೂಡ ನಿರ್ಧಾರವಾಗುವ ಸಾಧ್ಯತೆ ಇದೆ ಎಂದು ದಾವಳಿಕರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News