ಪ್ರಧಾನ ಸುತ್ತಿಗೆ ಭಾರತದ ಆಟಗಾರರು

Update: 2019-03-26 18:39 GMT

ಹೊಸದಿಲ್ಲಿ, ಮಾ.26: ನಿರೀಕ್ಷೆಯಂತೆ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಅರ್ಹತಾ ಪಂದ್ಯಗಳಲ್ಲಿ ಪಾರಮ್ಯ ಮೆರೆದ ಭಾರತದ 8 ಸಿಂಗಲ್ಸ್ ಹಾಗೂ 10 ಡಬಲ್ಸ್ ಜೋಡಿ ಶಟ್ಲರ್‌ಗಳು ಮಂಗಳವಾರ ಟೂರ್ನಿಯ ಪ್ರಧಾನ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.

16 ಮಂದಿ ಪುರುಷರ ಸಿಂಗಲ್ಸ್ ಅರ್ಹತಾ ಆಟಗಾರರ ಪೈಕಿ 13 ಮಂದಿ ಭಾರತದವರಾಗಿದ್ದರು. ಇವರಲ್ಲಿ ರಾಹುಲ್ ಯಾದವ್ ಚಿಟ್ಟಾಬೊಯ್ನಾ, ಸಿದ್ಧಾರ್ಥ್ ಠಾಕೂರ್, ಕಾರ್ತಿಕ್ ಜಿಂದಾಲ್ ಹಾಗೂ ಕಾರ್ತಿಕೇಯ ಗುಲ್ಶನ್‌ಕುಮಾರ್ ಮುಖ್ಯ ಸುತ್ತಿಗೆ ಪ್ರವೇಶ ಗಳಿಸಿದರು.

ಜಿಂದಾಲ್ ಅವರು ತಮ್ಮ ಪ್ರಥಮ ಸುತ್ತಿನಲ್ಲಿ ಪಾವೆಲ್‌ರನ್ನು ಮಣಿಸಿದರೆ ಎರಡನೇ ಸುತ್ತಿನಲ್ಲಿ ಶರತ್ ದುನ್ನಾ ಅವರನ್ನು ಸೋಲಿಸಿದರು. ಚಿಟ್ಟಾಬೊಯ್ನಾ ಅವರು ಅನಂತ್ ಶಿವಮ್ ಅವರನ್ನು ಮಣಿಸಿ ಪ್ರಧಾನ ಸುತ್ತಿಗೆ ಅರ್ಹತೆ ಪಡೆದರು. ಠಾಕೂರ್ ಅವರು ಗುರುಪ್ರತಾಪ್‌ಸಿಂಗ್ ಧಲಿವಾಲ್ ಅವರಿಗೆ ಸೋಲಿನ ರುಚಿ ತೋರಿಸಿದರು. ಕಾರ್ತಿಕೇಯ ಗುಲ್ಶನ್‌ಕುಮಾರ್ ಕೂಡ ತಮ್ಮ ಎದುರಾಳಿಯನ್ನು ಬಗ್ಗುಬಡಿದರು. ಮಹಿಳಾ ಸಿಂಗಲ್ಸ್‌ನಲ್ಲಿ ರಿತಿಕಾ ಥಾಕರ್, ಪ್ರಾಶಿ ಜೋಶಿ, ರಿಯಾ ಮುಖರ್ಜಿ ಹಾಗೂ ವೈದೇಹಿ ಚೌಧರಿ ಪ್ರಧಾನ ಸುತ್ತಿಗೆ ಅರ್ಹತೆ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News