ಸಣ್ಣ ಹುಡುಗನ ಮಾತಿಗೆ ಪ್ರತ್ರಿಕ್ರಿಯೆ ನೀಡಲ್ಲ: ರಾಹುಲ್ ಗಾಂಧಿಗೆ ಮಮತಾ ಬ್ಯಾನರ್ಜಿ ತಿರುಗೇಟು
Update: 2019-03-28 20:12 IST
ಕೋಲ್ಕತಾ, ಮಾ.28: ಸಣ್ಣ ಹುಡುಗನೊಬ್ಬ ತನಗೆ ಅನಿಸಿದಂತೆ ಏನೋ ಒಂದು ಮಾತನ್ನು ಹೇಳಿದ್ದಾನೆ. ಅದಕ್ಕೆಲ್ಲಾ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಟಿಎಂಸಿ ಸರಕಾರದ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಾಡಿರುವ ಆರೋಪದ ಕುರಿತ ಪ್ರಶ್ನೆಗೆ ಉತ್ತರಿಸಿದ ಮಮತಾ, ರಾಹುಲ್ ಸಣ್ಣ ಹುಡುಗ. ಆತನ ಮಾತಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ. ಮಾರ್ಚ್ 23ರಂದು ಪಶ್ಚಿಮ ಬಂಗಾಳದಲ್ಲಿ ನಡೆದಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ರಾಹುಲ್, ಮೋದಿಯಂತೆಯೇ ಮಮತಾ ಬ್ಯಾನರ್ಜಿಯೂ ಸುಳ್ಳು ಆಶ್ವಾಸನೆ ನೀಡುತ್ತಾ ಜನತೆಯನ್ನು ವಂಚಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.