×
Ad

ಅಮಾನತುಗೊಂಡ ಆಪ್ ಸಂಸದ ಹರೀಂದರ್ ಸಿಂಗ್ ಖಾಲ್ಸ ಬಿಜೆಪಿಗೆ

Update: 2019-03-28 20:14 IST

ಹೊಸದಿಲ್ಲಿ, ಮಾ.28: ಆಮ್ ಆದ್ಮಿ ಪಕ್ಷ(ಆಪ್)ದಿಂದ ಅಮಾನತುಗೊಂಡಿದ್ದ ಪಂಜಾಬ್‌ನ ಸಂಸದ ಹರೀಂದರ್ ಸಿಂಗ್ ಖಾಲ್ಸ ಗುರುವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಪಂಜಾಬ್‌ನಲ್ಲಿ ಶಿರೋಮಣಿ ಅಕಾಲಿದಳ (ಎಸ್‌ಎಡಿ)ದ ಸದಸ್ಯನಾಗಿ ರಾಜಕೀಯ ಇನ್ನಿಂಗ್ಸ್ ಆರಂಭಿಸಿದ್ದ ಖಾಲ್ಸ ಬಳಿಕ ಆಪ್‌ಗೆ ಸೇರ್ಪಡೆಗೊಂಡು 2014ರ ಚುನಾವಣೆಯಲ್ಲುಇ ಫತೇಗಢ ಸಾಹಿಬ್ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಎಸ್ಸಿ ಸಮುದಾಯದ ಮುಖಂಡರಾಗಿರುವ ಖಾಲ್ಸರನ್ನು 2015ರಲ್ಲಿ ಆಪ್‌ನಿಂದ ಅಮಾನತುಗೊಳಿಸಲಾಗಿತ್ತು. ಪಂಜಾಬ್‌ನಲ್ಲಿ ಶಿರೋಮಣಿ ಅಕಾಲಿದಳದ ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು ರಾಜ್ಯದ 13 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News