ದೇಶದ ಶೇ. 83 ಸಂಸದರು ಕೋಟ್ಯಾಧಿಪತಿಗಳು, ಶೇ. 33 ಸಂಸದರ ವಿರುದ್ಧ ಕ್ರಿಮಿನಲ್ ಪ್ರಕರಣ

Update: 2019-03-28 18:23 GMT

ಹೊಸದಿಲ್ಲಿ, ಮಾ. 28: 521 ಹಾಲಿ ಸಂಸದರಲ್ಲಿ ಕನಿಷ್ಠ ಶೇ. 83 ಕೋಟ್ಯಾಧಿಪತಿಗಳು ಹಾಗೂ ಅವರಲ್ಲಿ ಶೇ. 33 ಮಂದಿಯ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ ಎಂದು ಚುನಾವಣಾ ಕಾವಲು ಸಂಸ್ಥೆ ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ (ಎಡಿಆರ್) ವರದಿ ಹೇಳಿದೆ.

2014ರ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾದ 543 ಸದಸ್ಯರಲ್ಲಿ 521 ಸಂಸದರು ಸಲ್ಲಿಸಿದ ಸ್ವಘೋಷಿತ ಅಫಿದಾವಿತ್ ಅನ್ನು ವಿಶ್ಲೇಷಣೆ ನಡೆಸಿ ಎಡಿಆರ್ ಈ ವರದಿ ನೀಡಿದೆ. 521 ಹಾಲಿ ಸಂಸದರನ್ನು ವಿಶ್ಲೇಷಣೆ ನಡೆಸಲಾಗಿದ್ದು, 430 (ಶೇ. 83) ಕೋಟ್ಯಧಿಪತಿಗಳು. ಇವರಲ್ಲಿ 227 ಬಿಜೆಪಿ, 37 ಕಾಂಗ್ರೆಸ್, 29 ಎಐಎಡಿಎಂಕೆ ಹಾಗೂ ಉಳಿದಿರುವುದು ಇತರ ಪಕ್ಷಗಳ ಸಂಸದರು ಎಂದು ವರದಿ ಹೇಳಿದೆ.

2014ರ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾದ ಹಾಲಿ ಸಂಸದರ ಸರಾಸರಿ ಸೊತ್ತುಗಳ ಮೌಲ್ಯ 14.72 ಕೋಟಿ ರೂಪಾಯಿ. 32 ಹಾಲಿ ಸಂಸದರು ಘೋಷಿಸಿದ ಸೊತ್ತುಗಳ ಮೌಲ್ಯ 50 ಕೋಟಿ ರೂಪಾಯಿಗೂ ಹೆಚ್ಚಿದೆ. ಕೇವಲ ಇಬ್ಬರು ಹಾಲಿ ಸಂಸದರು ಘೋಷಿಸಿದ ಸೊತ್ತುಗಳ ಮೌಲ್ಯ 5 ಲಕ್ಷ ರೂಪಾಯಿಗಿಂತ ಕಡಿಮೆ ಇದೆ. ಕನಿಷ್ಠ ಶೇ. 33 ಹಾಲಿ ಸಂಸದರು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳು ಇವೆ ಎಂದು ಅಫಿದಾವಿತ್‌ನಲ್ಲಿ ಘೋಷಿಸಿಕೊಂಡಿದ್ದಾರೆ ಎಂದು ಎಡಿಆರ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News