ನಾಗರಿಕ ಪಟ್ಟಿಯಲ್ಲಿ ಹೆಸರು ಸೇರಿಸಲು ಸರತಿಯಲ್ಲಿ ಕಾಯುತ್ತಿದ್ದಾಗ ಮಗುವಿಗೆ ಜನ್ಮ ನೀಡಿದ ಮಹಿಳೆ

Update: 2019-03-30 11:31 GMT

ಗುವಾಹಟಿ, ಮಾ.30: ರಾಜ್ಯದ ದಕ್ಷಿಣ ಸಾಲ್ಮರ ಜಿಲ್ಲೆಯಲ್ಲಿರುವ ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ (ಎನ್‍ಆರ್‍ಸಿ) ಸೇವಾ ಕೇಂದ್ರದ ಹೊರಗೆ ಸರತಿ ಸಾಲಿನಲ್ಲಿ ನಿಂತಿದ್ದ ಗರ್ಭಿಣಿಯೊಬ್ಬರು ಅಲ್ಲಿಯೇ ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ.

ಈ ಮಹಿಳೆಯ ಹೆಸರು ಎನ್‍ಆರ್‍ಸಿ ಪಟ್ಟಿಯಲ್ಲಿ ಕಾಣಿಸದೇ ಇದ್ದುದರಿಂದ ಆಕೆಗೆ ನೋಟಿಸ್ ಜಾರಿಯಾದ ಹಿನ್ನೆಲೆಯಲ್ಲಿ ಆಕೆ  ಪಟ್ಟಿಯಲ್ಲಿ ತನ್ನ ಹೆಸರನ್ನು ಸೇರಿಸುವ ಸಲುವಾಗಿ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತಿದ್ದಳೆನ್ನಲಾಗಿದೆ.

ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡ ಕೂಡಲೇ ಸರತಿಯಲ್ಲಿ ನಿಂತಿದ್ದ ಇತರ ಮಹಿಳೆಯರು ಆಕೆಯ ಸಹಾಯಕ್ಕೆ ಧಾವಿಸಿದ್ದರು. ಕಳೆದ ವರ್ಷದ ಜುಲೈ 30ರಂದು ಪ್ರಕಟಗೊಂಡ ಅಸ್ಸಾಂನ ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಝನ್ಸ್ ಪಟ್ಟಿಯಲ್ಲಿ ಸುಮಾರು 40 ಲಕ್ಷ ಜನರ ಹೆಸರುಗಳನ್ನು ಕೈಬಿಡಲಾಗಿತ್ತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News