ರಾಜಕುಟುಂಬಗಳ ವಿಶೇಷಾಧಿಕಾರಗಳನ್ನು ರದ್ದುಗೊಳಿಸಿದ್ದೇ ಇಂದಿರಾ ಗಾಂಧಿ: ಪ್ರಿಯಾಂಕಾ

Update: 2019-03-30 16:29 GMT

ಅಯೋಧ್ಯಾ,ಮಾ.30: ಗಾಂಧಿ ಕುಟುಂಬವನ್ನು ರಾಜ ಮನೆತನಕ್ಕೆ ಹೋಲಿಸುತ್ತಿರುವುದಕ್ಕಾಗಿ ಬಿಜೆಪಿಯ ವಿರುದ್ಧ ದಾಳಿ ನಡೆಸಿದ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು,ರಾಜಧನ ಸೇರಿದಂತೆ ರಾಜ ಮನೆತನಗಳ ವಿಶೇಷಾಧಿಕಾರಗಳನ್ನು ರದ್ದುಗೊಳಿಸಿದ್ದೇ ತನ್ನ ಅಜ್ಜಿ ಇಂದಿರಾ ಗಾಂಧಿ ಎಂದು ಬೆಟ್ಟು ಮಾಡಿದ್ದಾರೆ.

ಶುಕ್ರವಾರ ಇಲ್ಲಿಯ ಸನ್‌ಬೀಮ್ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಪ್ರಿಯಾಂಕಾ, 1972ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ರಾಜ ಮನೆತನಗಳ ವಿಶೇಷಾಧಿಕಾರಗಳನ್ನು ರದ್ದುಗೊಳಿಸಲು ಕೈಗೊಂಡಿದ್ದ ನಿರ್ಧಾರವನ್ನು ಪ್ರಸ್ತಾಪಿಸಿದರು. ಗಾಂಧಿ ಕುಟುಂಬವು ತನ್ನನ್ನು ತಾನು ರಾಜ ಮನೆತನ ಎಂದು ತಿಳಿದುಕೊಂಡಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ಒತ್ತಿ ಹೇಳಿದರು.

ಭವಿಷ್ಯದ ಭಾರತದ ಬಗ್ಗೆ ನಿಮ್ಮ ಕನಸುಗಳೇನು ಎಂಬ ಬಾಲಕಿಯೋರ್ವಳ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕಾ,ಭಾರತದ ಬಗ್ಗೆ ತಾನು ಭಾವನಾತ್ಮಕ ಕನಸನ್ನು ಹೊಂದಿದ್ದೇನೆ. ವ್ಯಕ್ತಿ ಯಾವುದೇ ಧರ್ಮಕ್ಕೆ ಸೇರಿರಲಿ,ಅದನ್ನು ಯಾರೂ ಪ್ರಶ್ನಿಸದ ಭಾರತವನ್ನು ನೋಡಲು ತಾನು ಬಯಸಿದ್ದೇನೆ ಎಂದರು. ಈಗಿನಂತಲ್ಲದೆ ಮಹಿಳೆಯರು ಪುರುಷರಿಗೆ ಸಮಾನವಾಗಿರುವ ಭಾರತವನ್ನೂ ತಾನು ನೋಡಲು ಬಯಸಿದ್ದೇನೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News