ಚೀನಾ: ಕಾಡ್ಗಿಚ್ಚಿನಲ್ಲಿ 26 ಅಗ್ನಿಶಾಮಕ ಸಿಬ್ಬಂದಿ ಸಾವು

Update: 2019-04-02 05:53 GMT

ಬೀಜಿಂಗ್, ಎ. 2: ನೈರುತ್ಯ ಚೀನಾದ ದುರ್ಗಮ ಪರ್ವತಗಳಲ್ಲಿ ಕಾಡ್ಗಿಚ್ಚನ್ನು ನಂದಿಸಲು ಹೋರಾಡುತ್ತಿದ್ದ ಕನಿಷ್ಠ 26 ಅಗ್ನಿಶಾಮಕ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಸರಕಾರಿ ಮಾಧ್ಯಮ ಸೋಮವಾರ ವರದಿ ಮಾಡಿದೆ.

ನೈರುತ್ಯ ಚೀನಾದ ಸಿಚುವಾನ್ ಪ್ರಾಂತದ ಲಿಯಾಂಗ್‌ಶಾನ್ ಯಿ ಸ್ವಾಯತ್ತ ವಲಯದಲ್ಲಿ ಶನಿವಾರ ಹೊತ್ತಿಕೊಂಡ ಬೆಂಕಿಯನ್ನು ಆರಿಸಲು ಅಗ್ನಿಶಾಮಕ ಸಿಬ್ಬಂದಿಯನ್ನು ಕಳುಹಿಸಲಾಗಿತ್ತು ಎಂದು ‘ಚೀನಾ ಡೇಲಿ’ ವರದಿ ಮಾಡಿದೆ.

ರವಿವಾರ ಅಪರಾಹ್ನ ಗಾಳಿ ಬೀಸುವ ದಿಕ್ಕಿನಲ್ಲಿ ದಿಢೀರ್ ಬದಲಾವಣೆ ಆದ ಬಳಿಕ, ಬೆಂಕಿಯ ಜ್ವಾಲೆಯು ವ್ಯಾಪಕವಾಗಿ ಹಬ್ಬಿತ್ತು. ಆ ಬಳಿಕ, ಸುಮಾರು 30 ಮಂದಿ ನಾಪತ್ತೆಯಾಗಿದ್ದಾರೆ.

689 ಮಂದಿ ಅಗ್ನಿಶಾಮಕ ಸಿಬ್ಬಂದಿಯನ್ನು ಬೆಂಕಿ ಆರಿಸಲು ಕಳುಹಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News